

ರಾಯ್ಪುರ: ಛತ್ತೀಸ್‌ಗಢದ ಎಂಸಿಬಿ ಜಿಲ್ಲೆಯಲ್ಲಿ ಗುರುವಾರ(. 22) ಬಸ್ವೊಂದರ ಬ್ರೇಕ್ ಫೇಲ್ ಆಗಿ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಆರು ಜನ ಪ್ರಯಾಣಿಕರು ಮೃತಪಟ್ಟಿದ್ದಾರೆ. ಮತ್ತು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಪಘಾತವು ಕೆಲ್ಹಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೇಂದ್ರಗಢದಿಂದ ಕೆಲ್ಹಾರಿಗೆ ತೆರಳುತ್ತಿದ್ದ ಬಸ್, ಪಹಾಡ್ ಹನ್ಸ್‌ವಾಹಿ ಬಳಿ ಅಪಘಾತಕ್ಕೀಡಾಗಿದೆ. ಅಪಘಾತ ಸಂಭವಿಸಿದಾಗ ಮಿನಿ ಬಸ್‌ನಲ್ಲಿ ಒಟ್ಟು 39 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಅಪಘಾತದ ನಂತರ, ಗಾಯಗೊಂಡವರನ್ನು ಮನೇಂದ್ರಗಢ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆರಂಭಿಕ ವರದಿಗಳ ಪ್ರಕಾರ ಐವರು ಮೃತಪಟ್ಟಿದ್ದರು, ಆದರೆ ನಂತರ ಪೊಲೀಸ್ ವರಿಷ್ಠಾಧಿಕಾರಿ (SP) ರತ್ನಾ ಸಿಂಗ್ ಅವರು ಮೃತರ ಸಂಖ್ಯೆ ಆರು ಎಂದು ಖಚಿತಪಡಿಸಿದ್ದಾರೆ.
ಮಿನಿ ಬಸ್ ತನ್ನ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎನ್ನಲಾಗಿದೆ. ಬ್ರೇಕ್ ವೈಫಲ್ಯದಿಂದಾಗಿ ಈ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ (ಏಜೆನ್ಸೀಸ್).