ಮೇಷ: ಮೇಕಪ್ ವೃತ್ತಿಯವರಿಗೆ ಗಳಿಕೆ ಹೆಚ್ಚಾಗಲಿದೆ. ಬಂಧುಗಳ ಮನೆಗೆ ಭೇಟಿ. ಆರ್ಥಿಕ ವ್ಯವಹಾರಗಳಲ್ಲಿ ಇದ್ದ ಗೊಂದಲ ನಿವಾರಣೆ. ಶುಭಸಂಖ್ಯೆ: 9 .ವೃಷಭ: ಷೇರು ಹೂಡಿಕೆಯಿಂದ ಆದಾಯ. ವೈವಾಹಿಕ ಮನಸ್ತಾಪ ಬಗೆಹರಿಯಲಿದೆ. ರೇಷ್ಮೆ ಬಟ್ಟೆಗಳ ಮಾರಾಟದಲ್ಲಿ ವಿಶೇಷ ಲಾಭ. ಶುಭಸಂಖ್ಯೆ:4 .ಮಿಥುನ: ಆರಕ್ಷಕ ವೃತ್ತಿಗೆ ಆಯ್ಕೆಯಾಗುವ ಸಾಧ್ಯತೆಯಿದೆ. ರಾಜಕೀಯ ಕ್ಷೇತ್ರದಲ್ಲಿ ಅನಿರೀಕ್ಷಿತ ಪದವಿ ಪ್ರಾಪ್ತಿ. ಅವಿವಾಹಿತರಿಗೆ ಶುಭ ಸುದ್ದಿ. ಶುಭಸಂಖ್ಯೆ:6 .ಕಟಕ: ಮಕ್ಕಳ ನಡವಳಿಕೆಯಿಂದ ಬೇಸರ. ಪುಸ್ತಕ, ಸ್ಟೇಷನರಿ ವ್ಯಾಪಾರದಲ್ಲಿ ಲಾಭ. ಆನ್ಲೈನ್ ವ್ಯವಹಾರ ಮಾಡುವಾಗ ಎಚ್ಚರವಿರಲಿ. ಶುಭಸಂಖ್ಯೆ:1.ಸಿಂಹ: ಪೂಜಾ ಸಾಮಗ್ರಿಗಳ ವ್ಯಾಪಾರ ಆರಂಭಿಸಲು ನಿರ್ಧಾರ. ಕಾನೂನು ಸಲಹೆ ಕ್ಷೇತ್ರದಲ್ಲಿ ಲಾಭಗಳಿಸುವಿರಿ. ಭತ್ತದ ಕೃಷಿಕರಿಗೆ ಲಾಭ. ಶುಭಸಂಖ್ಯೆ:7 .ಕನ್ಯಾ: ಹೈನುಗಾರಿಕೆಯಿಂದ ಅಭಿವೃದ್ಧಿ. ರಾಜಕೀಯ ಕ್ಷೇತ್ರದಲ್ಲಿ ಅನಿರೀಕ್ಷಿತ ತಿರುವು. ಜವಳಿ ಉದ್ಯಮದಾರರಿಗೆ ಹಣದ ಹರಿವು ಹೆಚ್ಚಳ. ಶುಭಸಂಖ್ಯೆ:5 .ತುಲಾ: ಟಿವಿ ನಿರೂಪಕರಿಗೆ ಅನಿರೀಕ್ಷಿತ ಪದವಿ ಪ್ರಾಪ್ತಿ. ಆಸ್ತಿ ವಿವಾದ ಅಂತ್ಯ. ಪಿಂಚಣಿದಾರರಿಗೆ ಶುಭ ಸುದ್ದಿ. ವಿದೇಶ ಪ್ರಯಾಣ ರದ್ದು. ಶುಭಸಂಖ್ಯೆ: 4 .ವೃಶ್ಚಿಕ: ದೇವಾಲಯಗಳ ಮೇಲ್ವಿಚಾರಕರಿಗೆ ಧನಲಾಭ. ಕೇಂದ್ರ ಸರ್ಕಾರಿ ನೌಕರರಿಗೆ ವರ್ಗ. ಗಾಯಕರು, ವಾದಕರಿಗೆ ವೇದಿಕೆ ಲಭ್ಯ. ಶುಭಸಂಖ್ಯೆ:9 .ಧನಸ್ಸು: ಸಂಗೀತ ಸಂಯೋಜಕರಿಗೆ ಹೆಚ್ಚುವ ಬೇಡಿಕೆ. ಇವೆಂಟ್ ಮ್ಯಾನೇಜ್ಮೆಂಟ್ ವೃತ್ತಿಯಲ್ಲಿ ಹಣ ಗಳಿಸುವಿರಿ. ವಕೀಲರಿಗೆ ಶುಭದಿನ. ಶುಭಸಂಖ್ಯೆ:2 .ಮಕರ: ತೋಟಗಾರಿಕಾ ಬೆಳೆಗಳಿಂದ ಅನಿರೀಕ್ಷಿತ ಲಾಭ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ಲೋಹಗಳ ಖರೀದಿಯಲ್ಲಿ ನಷ್ಟ. ಶುಭಸಂಖ್ಯೆ:9 .ಕುಂಭ: ಕಚೇರಿಯಲ್ಲಿ ಹೆಚ್ಚುವರಿ ಅಧಿಕಾರ ಲಭಿಸಲಿದೆ. ಸಕ್ಕರೆ ಕಾಯಿಲೆ ಶಮನ. ಉದ್ಯಮಿ ಮಹಿಳೆಯರಿಗೆ ವಿದೇಶ ಪ್ರಯಾಣ ಯೋಗ. ಶುಭಸಂಖ್ಯೆ:6 .ಮೀನ: ಹಳೆಯ ಸ್ನೇಹಿತರೊಂದಿಗೆ ವಿಹಾರ. ಮನೆಯಲ್ಲಿ ಶುಭ ಕಾರ್ಯದ ವಾತಾವರಣ. ಗೃಹ ನಿರ್ಮಾಣದಲ್ಲಿ ಅಧಿಕ ಲಾಭಗಳಿಸುವಿರಿ. ಶುಭಸಂಖ್ಯೆ:8