ಸುಜಾತಾ ಅವರ ಪತಿ ಗೌರಿಶಂಕರ್ ಕುಮಾರ್ ಕಳೆದ ಎರಡು ತಿಂಗಳಿಂದ ಪತ್ನಿಯ ಬಗ್ಗೆ ಮಾಹಿತಿ ಹುಡುಕುತ್ತಿದ್ದರು. ಆದರೆ ಎಲ್ಲಿಯೂ ಸುಳಿವು ಸಿಗಲಿಲ್ಲ. ಪತ್ನಿಯ ಕುಟುಂಬವೂ ಯಾವುದೇ ಮಾಹಿತಿ ನೀಡಲಿಲ್ಲ. ಇದರಿಂದ ಬೇಸತ್ತ ಗೌರಿಶಂಕರ್, ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ವಿಡಿಯೋಗಳನ್ನು ಹಂಚಿಕೊಂಡು, "ನನ್ನ ಪತ್ನಿಯ ಕೊಲೆಗಾರರನ್ನು ಬಂಧಿಸಿ, ಇಲ್ಲದಿದ್ದರೆ ನಾನು ಸಾಯುತ್ತೇನೆ" ಎಂದು ಮನವಿ ಮಾಡಿದ್ದರು.