ನನ್ನ ಚಿನ್ನವು ಕಳ್ಳತನವಾಯಿತು ಎಂದ ಅಂಜು ಮಾತುಗಳು ಸ್ಥಳದಲ್ಲಿ ಒಂದು ರೀತಿ ಇದ್ದರೆ, ತನಿಖೆಯಲ್ಲಿ ಬೇರೆಯೇ ಇತ್ತು. ಇದರೊಟ್ಟಿಗೆ ಆಕೆಯ ಮೈಮೇಲೆ ಯಾವುದೇ ಗಾಯಗಳ ಗುರುತು ಇರಲಿಲ್ಲ ಎಂಬುದು ಗಮನಾರ್ಹ. ಅಂಜು ಮೇಲಿನ ಅನುಮಾನಗಳು ಗಟ್ಟಿಯಾಗ್ತಿದ್ದಂತೆ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ ಖಾಕಿ ಪಡೆಗೆ, ಆಕೆಯ ಫೋನ್ ದಾಖಲೆಗಳನ್ನು ಕೆದಕಿದಾಗ, ಪ್ರಿಯಕರ ಸಂಜು ಬಗ್ಗೆ ಸುಳಿವು ಸಿಕ್ಕಿದೆ. ಕೊಲೆಯ ಹಿಂದಿರುವ ಮಾಸ್ಟರ್ಮೈಂಡ್ ಅಂಜು ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದ್ದು, ಪ್ರಸ್ತುತ, ಆರೋಪಿಗಳನ್ನು ಬಂಧಿಸಿ, ವಿಚಾರಣೆಯನ್ನು ಮುಂದುವರಿಸಿದ್ದಾರೆ,(ಏಜೆನ್ಸೀಸ್).