ವಾರಿಂಗ್ ರಾಜೀನಾಮೆ ಬಳಿಕ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಕಿ ಲೆಜೆಂಡ್ ಪರ್ಗತ್ ಸಿಂಗ್ ನೇಮಕ | Pargat Singh

ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಪಿಪಿಸಿಸಿ ನೂತನ ಅಧ್ಯಕ್ಷರಾಗಿ ಹಾಕಿ ಲೆಜೆಂಡ್ ಮತ್ತು ಜಲಂಧರ್ ಕ್ಯಾಂಟ್ ಶಾಸಕ ಪರ್ಗತ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.
ಹಾಕಿ ಲೆಜೆಂಡ್ ಪರ್ಗತ್ ಸಿಂಗ್
ಹಾಕಿ ಲೆಜೆಂಡ್ ಪರ್ಗತ್ ಸಿಂಗ್
Published on: 

ಚಂಡೀಗಢ: ಕಳೆದ ನಾಲ್ಕು ವರ್ಷಗಳಿಂದ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಪಿಪಿಸಿಸಿ ನೂತನ ಅಧ್ಯಕ್ಷರಾಗಿ ಹಾಕಿ ಲೆಜೆಂಡ್ ಮತ್ತು ಜಲಂಧರ್ ಕ್ಯಾಂಟ್ ಶಾಸಕ ಪರ್ಗತ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.

2027ರ ಪಂಜಾಬ್ ವಿಧಾನಸಭಾ ಚುನಾವಣೆಯ ಮುನ್ನ ಈ ನೇಮಕಾತಿ ನಡೆದಿದ್ದು, ಅಕ್ಟೋಬರ್ 2ರಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ವಾರಿಂಗ್ ರಾಜೀನಾಮೆ ನೀಡಿದ ನಂತರ ಪರ್ಗತ್ ಅವರನ್ನು ನೇಮಿಸಲಾಗಿದೆ. ಪಿಸಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸುತ್ತಿದ್ದ ಹೆಸರುಗಳಲ್ಲಿ ಪರ್ಗತ್ ಸಿಂಗ್ ಕೂಡ ಒಬ್ಬರಾಗಿದ್ದರು.

Also Read
ತಮಿಳುನಾಡಿನ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ; ವೆಟ್ರಿ ಪಯಣಂ ಯೋಜನೆಗೆ ಸಿಎಂ ವಿಜಯ್ ಚಾಲನೆ | CM Vijay
ಹಾಕಿ ಲೆಜೆಂಡ್ ಪರ್ಗತ್ ಸಿಂಗ್

ಭಾರತದ ಮಾಜಿ ಹಾಕಿ ನಾಯಕ ಮತ್ತು ಒಲಿಂಪಿಯನ್ ಆಗಿರುವ ಪರ್ಗತ್ ಸಿಂಗ್, ಪಂಜಾಬ್ ಸರ್ಕಾರದಲ್ಲಿ ಕ್ರೀಡಾ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಪಕ್ಷದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅವರು ಪ್ರಸ್ತುತ ಜಲಂಧರ್ ಕ್ಯಾಂಟ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಇನ್ನೂ ಪಂಜಾಬ್ ಕಾಂಗ್ರೆಸ್ 2027ರ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ನಡೆಸಿರುವಂತೆಯೇ ನಾಯಕತ್ವದಲ್ಲಿ ಬದಲಾವಣೆಯಾಗಿದ್ದು, ಹೊಸ ರಾಜ್ಯ ಅಧ್ಯಕ್ಷರ ಅಡಿಯಲ್ಲಿ ಪಕ್ಷವು ತನ್ನ ಸಂಘಟನೆಯನ್ನು ಬಲಪಡಿಸುವ ಮತ್ತು ಚುನಾವಣಾ ಕಾರ್ಯತಂತ್ರವನ್ನು ವೇಗಗೊಳಿಸುವ ನಿರೀಕ್ಷೆಯಿದೆ.

Also Read
ಪಶ್ಚಿಮ ಬಂಗಾಳದಿಂದಲೇ ಟಿಎಂಸಿ ಹೆಸರು ಮತ್ತು ಚಿಹ್ನೆ ಅಳಿಸಿ ಹಾಕಲಾಗಿದೆ: ಸಿಎಂ ಸುವೇಂದು ಅಧಿಕಾರಿ | Suvendu Adhikari
ಹಾಕಿ ಲೆಜೆಂಡ್ ಪರ್ಗತ್ ಸಿಂಗ್

ಭಾರತದ ಮಾಜಿ ಹಾಕಿ ನಾಯಕ ಮತ್ತು ಒಲಿಂಪಿಯನ್ ಆಗಿರುವ ಪರ್ಗತ್ ಸಿಂಗ್, ಒಂದು ದಶಕಕ್ಕೂ ಹೆಚ್ಚು ಕಾಲ ಪಂಜಾಬ್ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. 2012ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಅವರು ಚುನಾವಣಾ ರಾಜಕೀಯ ಪ್ರವೇಶಿಸಿದರು. ಮತ್ತು ಶಿರೋಮಣಿ ಅಕಾಲಿ ದಳ (SAD) ಟಿಕೆಟ್‌ನಲ್ಲಿ ಜಲಂಧರ್ ಕಂಟೋನ್ಮೆಂಟ್​ನಿಂದ ಸ್ಪರ್ಧಿಸಿ ಗೆದ್ದರು. ಬಳಿಕ ಅಲ್ಲಿಂದ ನಿರಂತರವಾಗಿ ಜಲಂಧರ್ ಕಂಟೋನ್ಮೆಂಟ್ ಅನ್ನು ಪ್ರತಿನಿಧಿಸುತ್ತಿದ್ದಾರೆ.

2016ರಲ್ಲಿ ಪಕ್ಷದಿಂದ ಅಮಾನತುಗೊಂಡ ಬಳಿಕ ಸಿಂಗ್ ಅಕಾಲಿದಳ ಬಿಟ್ಟು, ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ನವಜೋತ್ ಸಿಂಗ್ ಸಿಧು ಮತ್ತು ಇತರ ನಾಯಕರನ್ನು ಒಳಗೊಂಡ ಆವಾಜ್-ಎ-ಪಂಜಾಬ್ ರಂಗದೊಂದಿಗೆ ಸೇರಿಕೊಂಡರು. ಬಳಿಕ ಕಾಂಗ್ರೆಸ್​ ಸೇರ್ಪಡೆಯಾಗಿ 2017ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಚರಣ್‌ಜಿತ್ ಸಿಂಗ್ ಚನ್ನಿ ಅವರ ಸರ್ಕಾರದಲ್ಲಿ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ಕ್ರೀಡೆ ಮತ್ತು ಯುವಜನ ವ್ಯವಹಾರಗಳು ಮತ್ತು ಎನ್‌ಆರ್‌ಐ ವ್ಯವಹಾರಗಳು ಸೇರಿದಂತೆ ಹಲವಾರು ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net