ಜಾತಿ ಜನಗಣತಿ ಪರ ಐತಿಹಾಸಿಕ ತೀರ್ಪು; ವಿರೋಧಿಸಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ | Supreme Court

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Published on
ನವದೆಹಲಿ: ಜಾತಿ ಜನಗಣತಿ ಕುರಿತು ಬುಧವಾರ(ಮೇ 20) ದೇಶದ ಸರ್ವೋಚ್ಚ ನ್ಯಾಯಾಲಯ(Supreme Court) ಐತಿಹಾಸಿಕ ತೀರ್ಪು ನೀಡಿದ್ದು, ಸರ್ಕಾರದ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಜಾತಿ ಗಣತಿ ಕಡ್ಡಾಯವಾಗಿದ್ದು, ದೇಶದಲ್ಲಿ ಜಾತಿಗಣತಿ ನಡೆಯಲಿ ಎಂದು ಹೇಳಿದೆ, ಮತ್ತು ವಿರೋಧಿಸಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದೆ.
ಜಾತಿಗಣತಿ ವಿರೋಧಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠವು, ಇಂದು ಅಂತಿಮ ತೀರ್ಪು ನೀಡಿದ್ದು, ಜಾತಿ ಜನಗಣತಿ ನಡೆಸುವುದು ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಜಾತಿ ಆಧಾರದ ಮೇಲೆ ಜನಗಣತಿ ನಡೆಸಬೇಕೇ ಅಥವಾ ಬೇಡವೇ ಎಂಬುದು ಸರ್ಕಾರದ ನಿರ್ಧರಿಸಬೇಕು. ನ್ಯಾಯಾಲಯ ಅದರಲ್ಲಿ ಹಸ್ತಕ್ಷೇಪ ಮಾಡಲಾಗಲ್ಲ ಎಂದು ಹೇಳಿದೆ.
ಮುಂದುವರೆದು, ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಜಾತಿ ಜನಗಣತಿ ಕಡ್ಡಾಯ. ಹಿಂದುಳಿದ ವರ್ಗಕ್ಕೆ ಸೇರಿದವರು ಎಷ್ಟು ಮಂದಿ ಎಂಬುದನ್ನು ಸರ್ಕಾರ ತಿಳಿದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟ ಪೀಠ, ಜನಗಣತಿಯಿಂದ ಜಾತಿ ಎಣಿಕೆಯನ್ನು ಹೊರಗಿಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಜಾಗೊಳಿಸಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net