ತಾಯಿಯ ಕನಸನ್ನು ನನಸು ಮಾಡಿದ ಮಗ: ಜಾಂಟಿ ರೋಡ್ಸ್ ಭೇಟಿ ಮಾಡಿದ ವೈರಲ್ ಕ್ಷಣ! | Jonty Rhodes

Jonty Rhodes
Jonty Rhodes
Published on

ಪ್ರಮುಖ ಮುಖ್ಯಾಂಶಗಳು

  • ಜಿಮ್‌ಗೆ ಕರೆದೊಯ್ದು ತಾಯಿಗೆ ಅಚ್ಚರಿ ನೀಡಿದ ಮಗ
  • ತಾಯಿಯ ಕ್ರಷ್ ಜಾಂಟಿ ರೋಡ್ಸ್​​ರನ್ನು ಮೀಟ್ ಮಾಡಿಸಿದ ಮಗ
  • "ನನ್ನ ಹೀರೊ" ಎಂದು ಕೂಗುತ್ತಾ ಮಗುವಿನಂತೆ ಸಂಭ್ರಮಿಸಿದ ತಾಯಿ.
ಬೆಂಗಳೂರು:ತಾಯಿ ತನ್ನ ಜೀವನದ ಬಹುಭಾಗವನ್ನು ಮಕ್ಕಳ ಪೋಷಣೆಗೆ ಮೀಸಲಿಡುತ್ತಾಳೆ. ತನ್ನ ಆಸೆಗಳು, ಕನಸುಗಳು ಎಲ್ಲವನ್ನೂ ಬದಿಗಿಟ್ಟು, ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುತ್ತಾಳೆ. ಆದರೆ, ಬೆಳೆದ ಮಕ್ಕಳು ಆಕೆಯ ಕನಸುಗಳನ್ನು ಸಾಕಾರಗೊಳಿಸುವ ಕ್ಷಣವೇ ನಿಜವಾದ ಸಂತೋಷ.
ಇಂತಹ ಹೃದಯಸ್ಪರ್ಶಿ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವಕ ಹರ್ಷಿತ್ ಜಾಜೆದ್ ತನ್ನ ತಾಯಿಯ ಬಾಲ್ಯದ ಕನಸನ್ನು ನನಸು ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾನೆ.
ನನ್ನ ತಾಯಿಯ ಕನಸನ್ನು ನನಸು ಮಾಡ್ತಿದ್ದೇನೆ
ಹರ್ಷಿತ್ ತನ್ನ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ, “ನನ್ನ ತಾಯಿಯ ಬಕೆಟ್ ಲಿಸ್ಟ್‌ನಲ್ಲಿದ್ದ ಒಂದು ದೊಡ್ಡ ಕನಸನ್ನು ಇಂದು ನನಸು ಮಾಡುತ್ತಿದ್ದೇನೆ” ಎಂದು ಹೇಳುತ್ತಾನೆ. ಹಲವು ವರ್ಷಗಳಿಂದ ಅಭಿಮಾನಿಯಾಗಿದ್ದ ವ್ಯಕ್ತಿಯನ್ನು ತಾಯಿಗೆ ಭೇಟಿ ಮಾಡಿಸಲು ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸುತ್ತಾನೆ.
ಮೊದಲಿಗೆ ತಾಯಿ ಜಿಮ್‌ಗೆ ಸಾಮಾನ್ಯವಾಗಿ ಬರುತ್ತಾರೆ. ಆದರೆ, ಏನಾಗುತ್ತಿದೆ ಎಂಬುದು ಅವರಿಗೆ ತಿಳಿದಿರೋದಿಲ್ಲ. ಆಕೆ ಸುತ್ತಮುತ್ತ ನೋಡುತ್ತಾ ಕುತೂಹಲದಿಂದಿರುತ್ತಾಳೆ.

ಬಾಲ್ಯದ ಕ್ರಷ್ ಜೊತೆ ಸರ್ಪ್ರೈಸ್ ಮೀಟ್

ಆ ಸಮಯದಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಿಗ್ಗಜ Jonty Rhodes ಅಚ್ಚರಿಯಾಗಿ ಎಂಟ್ರಿ ಕೊಡುತ್ತಾರೆ. ಆತನನ್ನು ನೋಡಿ ತಾಯಿ ಕೆಲ ಕ್ಷಣ ದಿಗ್ಭ್ರಮೆಗೊಂಡು, ಬಳಿಕ ಮಗನ ಕಡೆಗೆ ತಿರುಗಿ “ಮೈ ಹೀರೋ!” ಎಂದು ಸಂತೋಷದಿಂದ ಕೂಗುತ್ತಾರೆ.
ಜಾಂಟಿ ರೋಡ್ಸ್ ಆಕೆಯನ್ನು ಆತ್ಮೀಯವಾಗಿ ಸ್ವಾಗತಿಸಿ ಮಾತುಕತೆ ನಡೆಸುತ್ತಾರೆ. “15ನೇ ವಯಸ್ಸಿನಿಂದಲೇ ನಾನು ನಿಮ್ಮ ದೊಡ್ಡ ಅಭಿಮಾನಿ” ಎಂದು ಆಕೆ ತನ್ನ ಅಭಿಮಾನವನ್ನು ವ್ಯಕ್ತಪಡಿಸುತ್ತಾಳೆ. ಹರ್ಷಿತ್ ಕೂಡ ತನ್ನ ತಾಯಿ ಬಾಲ್ಯದಿಂದಲೇ ಜಾಂಟಿ ಬಗ್ಗೆ ಹೇಳುತ್ತಿದ್ದುದನ್ನು ವಿವರಿಸುತ್ತಾನೆ.ಅಂತಿಮವಾಗಿ, ಜಾಂಟಿ ರೋಡ್ಸ್ ಬ್ಲೂ ಜೆರ್ಸಿಗೆ ಸಹಿ ಹಾಕಿ ನೆನಪಾಗಿ ನೀಡಿ ತೆರಳುತ್ತಾರೆ.

ನೆಟ್ಟಿಗರಿಂದ ಭಾರೀ ಮೆಚ್ಚುಗೆ

ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. “ಈ ಘಟನೆ ನಂತರ ನನ್ನ ತಾಯಿ ಖುಷಿಯಿಂದ ನನ್ನ ಕೆನ್ನೆಗೆ ಬಾರಿಸಿದರು” ಎಂದು ಹರ್ಷಿತ್ ಕ್ಯಾಪ್ಶನ್‌ನಲ್ಲಿ ಹೇಳಿಕೊಂಡಿದ್ದಾರೆ. ವಿಡಿಯೋಗೆ ಪ್ರತಿಕ್ರಿಯೆ ನೀಡಿದ ನೆಟ್ಟಿಗರು, “ನಿನ್ನ ತಾಯಿ ಅದೃಷ್ಟವಂತಳು”, “ಈ ಘಟನೆ ಆಕೆಯೊಳಗಿನ ಪುಟ್ಟ ಹುಡುಗಿಯನ್ನು ಮತ್ತೆ ಜೀವಂತಗೊಳಿಸಿದೆ” ಎಂದು ಭಾವನಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net