ಯಶಸ್ವಿ ಜೈಸ್ವಾಲ್ ಅವರಂತಹ ಸ್ಟಾರ್ ಆಟಗಾರರಿಂದ ಕೂಡಿದ್ದ ರಾಜಸ್ಥಾನ್ ರಾಯಲ್ಸ್, 217 ರನ್‌ಗಳ ಬೆನ್ನಟ್ಟುವಿಕೆಯಲ್ಲಿ ಎಲ್ಲಿಯೂ ಹೋರಾಟದ ಮನೋಭಾವ ತೋರಲಿಲ್ಲ. ಹೈದರಾಬಾದ್ ಬೌಲರ್‌ಗಳ ಶಿಸ್ತುಬದ್ಧ ದಾಳಿ ಮತ್ತು ನಿಖರ ವೇಗಕ್ಕೆ ರಾಯಲ್ಸ್ ಪಡೆಯ ಬಳಿ ಯಾವುದೇ ಉತ್ತರವಿರಲಿಲ್ಲ. ಅಂತಿಮವಾಗಿ 57 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡ ರಾಜಸ್ಥಾನ್, ಹೈದರಾಬಾದ್ ಮಣ್ಣಿನಲ್ಲಿ ಮಂಡಿಯೂರಿತು.