Priyanka Gandhi | ಬಾಂಗ್ಲಾದಲ್ಲಿ ಹಿಂದೂ ಯುವಕನ ಬರ್ಬರ ಹತ್ಯೆ; ಮಧ್ಯೆ ಪ್ರವೇಶಿಸುವಂತೆ ಕೇಂದ್ರಕ್ಕೆ ಪ್ರಿಯಾಂಕಾ ಗಾಂಧಿ ಮನವಿ

Priyanka Gandhi | ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ
Priyanka Gandhi | ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ
Published on
ನವದೆಹಲಿ: ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರವನ್ನು ನಿಲ್ಲಿಸಲು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಬೇಕು ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi) ಶನಿವಾರ (ಡಿ.20) ಒತ್ತಾಯಿಸಿದ್ದಾರೆ.
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಪ್ರಿಯಾಂಕಾ ವಾದ್ರಾ, ನೆರೆಯ ದೇಶದಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಕ್ರೂರ ಹತ್ಯೆಯ ನಂತರ ಮನವಿ ಮಾಡಿದ್ದಾರೆ. ಅಲ್ಲದೆ, ಹಿಂದೂ, ಕ್ರಿಶ್ಚಿಯನ್ ಮತ್ತು ಬೌದ್ಧ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಘಟನೆಗಳು ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.
ಈ ಕೊಲೆಯನ್ನು ಅತ್ಯಂತ ಆತಂಕಕಾರಿಯಾಗಿದೆ. ಧರ್ಮ, ಜಾತಿ ಅಥವಾ ಗುರುತಿನ ಆಧಾರದ ಮೇಲೆ ತಾರತಮ್ಯ ಮತ್ತು ಹಿಂಸೆ ಮಾನವೀಯತೆಯ ವಿರುದ್ಧದ ಅಪರಾಧಗಳಾಗಿವೆ. ಅಲ್ಲದೆ, ಅಲ್ಪಸಂಖ್ಯಾತರ ಸುರಕ್ಷತೆಯ ವಿಷಯವನ್ನು ಬಾಂಗ್ಲಾದೇಶ ಸರ್ಕಾರದೊಂದಿಗೆ ಬಲವಾಗಿ ಚರ್ಚಿಸುವಂತೆ ವಾದ್ರಾ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅಲ್ಪಸಂಖ್ಯಾತರ ಸುರಕ್ಷತೆ

ಈ ಹತ್ಯೆಯು ಬಾಂಗ್ಲಾದ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಮತ್ತೆ ಕಳವಳವನ್ನು ಉಂಟುಮಾಡಿದೆ. ಇಂತಹ ಘಟನೆಗಳು ನಾಗರಿಕ ಸಮಾಜದ ಕಲ್ಪನೆಯನ್ನು ಹಾಳುಮಾಡುತ್ತವೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಅಲ್ಲದೆ, ಧರ್ಮದ ಹೆಸರಿನಲ್ಲಿ ಹಿಂಸಾಚಾರವನ್ನು ಯಾವುದೇ ಸಂದರ್ಭದಲ್ಲೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

ದಾಸ್ ಹತ್ಯೆಗೆ ಕಾರಣವೇನು..?

ಮೈಮೆನ್ಸಿಂಗ್ ಜಿಲ್ಲೆಯ ಭಾಲುಕಾದ ಯುವ ಗಾರ್ಮೆಂಟ್ ಕಾರ್ಖಾನೆ ಕೆಲಸಗಾರನಾಗಿದ್ದ ದೀಪು ಚಂದ್ರ ದಾಸ್​ನನ್ನು ಗುರುವಾರ ರಾತ್ರಿ ಗುಂಪೊಂದು ಕೊಂದಿದೆ ಎಂದು ವರದಿಯಾಗಿತ್ತು. ಅಲ್ಲದೆ, ಸ್ಥಳೀಯ ಪೊಲೀಸರ ಪ್ರಕಾರ, ಈ ಘಟನೆ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದ್ದು, ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದಾಸ್ ಮೇಲೆ ಜನಸಮೂಹ ಆರೋಪ ಹೊರಿಸಿದ್ದು, ಈ ಆರೋಪವು ಹಿಂಸಾತ್ಮಕ ದಾಳಿಗೆ ಕಾರಣವಾಯಿತು.

ಆರೋಪಿಗಳ ಬಂಧನ

ಬಾಂಗ್ಲಾದೇಶದ ಕ್ಷಿಪ್ರ ಕಾರ್ಯಾಚರಣಾ ಬೆಟಾಲಿಯನ್ (RAB) ಗುಂಪು ಹತ್ಯೆಗೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿದೆ. ಮೈಮೆನ್ಸಿಂಗ್ ಜಿಲ್ಲೆಯ ಹಲವು ಸ್ಥಳಗಳಲ್ಲಿ ನಡೆದ ಕಾರ್ಯಾಚರಣೆಗಳ ನಂತರ ಈ ಬಂಧನಗಳನ್ನು ಮಾಡಲಾಗಿದೆ. ಬಾಂಗ್ಲಾದ ಮಧ್ಯಂತರ ಸರ್ಕಾರವು ಶುಕ್ರವಾರ ಬಂಧನಗಳನ್ನು ದೃಢಪಡಿಸಿದೆ.
ಬಂಧಿತರನ್ನು ಮೊಹಮ್ಮದ್ ಲಿಮೋನ್ ಸರ್ಕಾರ್ (19), ಮೊಹಮ್ಮದ್ ತಾರೆಕ್ ಹೊಸೈನ್ (19), ಮೊಹಮ್ಮದ್ ಮಾಣಿಕ್ ಮಿಯಾ (20), ಇರ್ಷಾದ್ ಅಲಿ (39), ನಿಜುಮ್ ಉದ್ದೀನ್ (20), ಅಲೋಮ್‌ಗೀರ್ ಹೊಸೈನ್ (38) ಮತ್ತು ಮೊಹಮ್ಮದ್ ಮಿರಾಜ್ ಹೊಸೈನ್ ಅಕಾನ್ (46) ಎಂದು ಗುರುತಿಸಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net