ಪೊಲೀಸರ ಪ್ರಕಾರ, ಶನಿವಾರ (ಜ.17) ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಸೂಮ್ ಮಿಯಾ (28) ಅಂಗಡಿಗೆ ನುಗ್ಗಿ 17 ವರ್ಷದ ಉದ್ಯೋಗಿ ಅನಂತ ದಾಸ್ ಜೊತೆ ಸಣ್ಣ ವಿಷಯಕ್ಕೆ ಜಗಳ ಪ್ರಾರಂಭವಾಗಿ ನಂತರ ಇದು ಹೊಡೆದಾಟಕ್ಕೆ ತರುಗಿದೆ. ಸ್ವಲ್ಪ ಸಮಯದ ನಂತರ, ಮಸೂಮ್ ಮಿಯಾ ಅವರ ಪೋಷಕರಾದ ಮೊಹಮ್ಮದ್ ಸ್ವಪನ್ ಮಿಯಾ (55) ಮತ್ತು ಮಜಿದಾ ಖತುನ್ (45) ಸ್ಥಳಕ್ಕೆ ಬಂದು ದಾಸ್ನನ್ನು ಹೊಡೆಯಲಾರಂಭಿಸಿದ್ದಾರೆ.