ಹಿಂದಿ ಭಾರತ ದೇಶದ ಅತ್ಯಂತ ಪ್ರಮುಖ ಸಂಪರ್ಕ ಭಾಷೆಯಾಗಿದೆ. ಇದು ರಾಷ್ಟ್ರೀಯ ಅಸ್ಮಿತೆಯನ್ನೂ ಹಾಗೂ ಸಾಂಸ್ಕೃತಿಕ ಏಕತೆಯನ್ನೂ ಪ್ರತಿಬಿಂಬಿಸುತ್ತದೆ. ದೇಶದ ಶೇ.43ಕ್ಕಿಂತ ಹೆಚ್ಚು ಜನರು ಹಿಂದಿಯನ್ನು ಮಾತನಾಡುತ್ತಾರೆ. ಶಿಕ್ಷಣ, ಆಡಳಿತ, ಸಿನಿಮಾ (ಬಾಲಿವುಡ್), ಮಾಧ್ಯಮ ಮತ್ತು ಡಿಜಿಟಲ್ ಸಂವಹನ ಕ್ಷೇತ್ರಗಳಲ್ಲಿ ಹಿಂದಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಭಾರತೀಯ ಸಂಸ್ಕೃತಿಗೆ ಜಾಗತಿಕ ಮಟ್ಟದಲ್ಲಿ ಗುರುತನ್ನು ತಂದುಕೊಡುತ್ತಿದೆ.