ಹಿಮಂತ ಶರ್ಮಾ ಒಬ್ಬ 2 ರೂಪಾಯಿ ಭಿಕ್ಷುಕ: ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ಓವೈಸಿ ವಾಗ್ದಾಳಿ | Asaduddin Owaisi

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ
Published on

ಪ್ರಮುಖ ಮುಖ್ಯಾಂಶಗಳು

  • ಹಿಮಂತಾ ಶರ್ಮಾ ಒಬ್ಬ ಎರಡು ರೂಪಾಯಿ ಬಿಕ್ಷುಕ ಎಂದ ಓವೈಸಿ
  • ಇತ್ತೀಚೆಗೆ ಮೀಯಾ ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿದ್ದ ಹಿಮಂತಾ ಶರ್ಮಾ
  • ನನ್ನ ಸಮುದಾಯದವರ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದ ಓವೈಸಿ
ನಿಜಾಮಾಬಾದ್‌: ಶನಿವಾರ (ಫೆ.7) ನಿಜಾಮಾಬಾದ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ AIMIM ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಒಬ್ಬ ಎರಡು ರೂಪಾಯಿ ಭಿಕ್ಷುಕ ಎಂದು ಕರೆದಿದ್ದಾರೆ. ಇತ್ತೀಚೆಗೆ ಮಿಯಾ ಮುಸ್ಲಿಮರ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೀಡಿದ್ದ ಹೇಳಿಕೆಗೆ ಓವೈಸಿ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಹಿಮಂತಾ ಬಡವರ ವಿರೋಧಿ: ಓವೈಸಿ

ನೀವೇನಾದರೂ ಮಿಯಾ ಮುಸ್ಲಿಮರ ಆಟೋರಿಕ್ಷಾದಲ್ಲಿ ಪ್ರಯಾಣಿಸಿದರೆ, ಅವರು 5 ರೂಪಾಯಿ ಬಾಡಿಗೆ ಕೇಳಿದರೆ ನೀವು 4 ರೂಪಾಯಿ ಕೊಡಿ ಎಂಬ ಹೇಳಿಕೆಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಶರ್ಮಾ ನೀಡಿದ್ದರು.
ಈ ಹೇಳಿಕೆ ತಿರುಗೇಟು ನೀಡುತ್ತಾ ಓವೈಸಿ, ಆಟೋ ಬಾಡಿಗೆ ಐದು ರೂಪಾಯಿಯಾಗಿದ್ದರೆ, ನಾಲ್ಕು ರೂಪಾಯಿಗಳನ್ನು ನೀಡಿ ಎಂದು ಹೇಳುತ್ತಾರೆ, ನಾನು ನಿಮಗೆ ಎರಡು ರೂಪಾಯಿಗಳ ಈ ದಾನವನ್ನು ನೀಡುತ್ತಿದ್ದೇನೆ, ನೀವು ಅದನ್ನು ಸ್ವೀಕರಿಸುತ್ತೀರಾ? ಎಂದು ಕೇಳಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಬಡ ಆಟೋ ಚಾಲಕರು ಮತ್ತು ಸಣ್ಣ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ, ಅವರೊಬ್ಬ ಬಡವರ ವಿರೋಧಿ ಮತ್ತು ಸಂಕುಚಿತ ಮನಸ್ಸಿನವರು ಎಂದು ಓವೈಸಿ ಕರೆದಿದ್ದಾರೆ.
ರಾಜಕೀಯ ವಿವಾದಕ್ಕೆ ಕಾರಣವಾದ ಹೇಳಿಕೆಗಳು
ಮಿಯಾ ಮುಸ್ಲಿಮರು ಕಡಿಮೆ ಬೆಲೆಗಳ ಮೂಲಕ ಜನರನ್ನು ಆಕರ್ಷಿಸುತ್ತಾರೆ ಎಂದು ಶರ್ಮಾ ಅವರ ಹಿಂದಿನ ಹೇಳಿಕೆಯಿಂದ ಈ ವಿವಾದ ಹುಟ್ಟಿಕೊಂಡಿದೆ, ಇದು ಆರ್ಥಿಕ ಜಿಹಾದ್ ನ ಒಂದು ರೂಪ ಮತ್ತು ದೊಡ್ಡ ಪಿತೂರಿಯ ಭಾಗವೆಂದು ಬಣ್ಣಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಓವೈಸಿ, ತಮ್ಮ ಸಮುದಾಯವನ್ನು ಅವಮಾನಿಸುವವರನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net