ಜಿ ರಾಮ್ ಜಿ ಮಸೂದೆ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮತ್ತು ಗಾಂಧಿಯವರ ದೃಷ್ಟಿಕೋನವನ್ನು ಈಡೇರಿಸುವ ಗುರಿಯನ್ನು ಹೊಂದಿದೆ, ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಕಲ್ಪನೆಯಾಗಿದ್ದರು, ಹಳೆ ಯ ನರೇಗಾ ಯೋಜನೆಯಲ್ಲಿ ಸಾಕಷ್ಟು ನ್ಯೂನತೆಗಳಿದ್ದ ಕಾರಣ, ಈ ಹೊಸ ಮಸೂದೆಯನ್ನು ಚರ್ಚೆ ನಡೆಸಿದ ಬಳಿಕವೇ ತರಲಾಗಿದೆ. ಹಿಂದಿನ ಯುಪಿಎ ಸರ್ಕಾರವು ಜವಾಹರ್ ರೋಜ್‌ಗಾರ್ ಯೋಜನೆಯನ್ನು ಈ ಹಿಂದೆ ಮರುನಾಮಕರಣ ಮಾಡಿತ್ತು, ಹಾಗೆಂದ ಮಾತ್ರಕ್ಕೆ ಅವರನ್ನು ನೆಹರುಗೆ ಅಗೌರವ ಮಾಡಿದ್ದಾರೆ ಎನ್ನಲು ಸಾಧ್ಯವಿಲ್ಲ ಎಂದರು.