ಹವಾಮಾನ ವೈಪರೀತ್ಯ; ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆ; ಕನಿಷ್ಠ 89 ಮಂದಿ ಸಾವು | Uttar Pradesh

ಮಳೆಯಿಂದ ಕಾರ್ ಮೇಲೆ ಮರ ಉರುಳಿ ಬಿದ್ದಿರುವುದು.
ಮಳೆಯಿಂದ ಕಾರ್ ಮೇಲೆ ಮರ ಉರುಳಿ ಬಿದ್ದಿರುವುದು.
Published on
ಲಖನೌ: ಉತ್ತರ ಪ್ರದೇಶದ(Uttar Pradesh) ಹಲವಾರು ಜಿಲ್ಲೆಗಳಲ್ಲಿ ಬುಧವಾರ(ಮೇ 13) ಸುರಿದ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಿಂದಾಗಿ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿಬಿದ್ದು, ಮನೆಗಳಿಗೆ ಹಾನಿಯಾಗಿ ಕನಿಷ್ಠ 89 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಇಲಾಖೆ ಮಾಹಿತಿ ನೀಡಿದೆ.
ಬುಧವಾರ ಬೆಳಿಗ್ಗೆ 8ರಿಂದ ರಾತ್ರಿ 11.30ರ ನಡುವೆ ರಾಜ್ಯಾದ್ಯಂತಬಿರುಗಾಳಿ ಸಹಿತ ಭಾರೀ ಮಳೆ ಬಿದ್ದಿದೆ. ಈ ವೇಳೆ ಹಲವಾರು ಮನೆಗಳ ಗೋಡೆಗಳು, ಮರಗಳು ಉರುಳಿ ಬಿದ್ದಿದ್ದು, ಸಿಡಿಲಿಗೆ ಹೆಚ್ಚಿನ ಸಾವುಗಳು ಸಂಭವಿಸಿವೆ. ಅತಿಹೆಚ್ಚು ಹಾನಿಗೊಳಗಾದ ಜಿಲ್ಲೆಯಲ್ಲಿ ಪ್ರಯಾಗ್​ರಾಜ್ ಸೇರಿದ್ದು, ಅಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. ಸಂತ ರವಿದಾಸ್ ನಗರದಲ್ಲಿ 14 ಜನ, ಫತೇಪುರದಲ್ಲಿ 11 ಹಾಗೂ ಮಿರ್ಜಾಪುರದಲ್ಲಿ 10 ಜನರು ಮೃತಪಟ್ಟಿದ್ದಾರೆ.
ಉನ್ನಾವ್, ಬದೌನ್, ಬರೇಲಿ ಹಾಗೂ ಪ್ರತಾಪ್‌ಗಢ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಬಿರುಗಾಳಿಯಿಂದ ಮರಗಳು ಉರುಳಿ, ಮನೆಗಳಿಗೆ ಹಾನಿಯಾಗಿ, ಗೋಡೆ ಕುಸಿತ ಸಂಭವಿಸಿವೆ. ಒಟ್ಟಿ 53 ಮಂದಿ ಗಾಯಗೊಂಡಿದ್ದು, 114 ಪ್ರಾಣಿಗಳು ಸಾವನ್ನಪ್ಪಿವೆ ಎಂದು ಹೇಳಲಾಗಿದೆ.
ಮಳೆಯ ಕುರಿತು ಮೊದಲೇ ಮುನ್ಸೂಚನೆ ನೀಡಿದ್ದ ಭಾರತೀಯ ಹವಮಾನ ಇಲಾಖೆ, ಪಶ್ಚಿಮದ ಹವಾಮಾನ ವೈಪರೀತ್ಯದಿಂದಾಗಿ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಗುಡುಗು ಮತ್ತು ಮಿಂಚಿನ ಮಳೆಯಾಗುವ ಎಚ್ಚರಿಕೆಯನ್ನು ನೀಡಿತ್ತು.
ಇನ್ನೂ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಬುಧವಾರ ಅಕಾಲಿಕ ಹವಾಮಾನದಿಂದ ಸಂಭವಿಸಿದ ಜೀವಹಾನಿ ಮತ್ತು ಹಾನಿಯನ್ನು ಗಮನದಲ್ಲಿಟ್ಟುಕೊಂಡು, 24 ಗಂಟೆಗಳ ಒಳಗೆ ಪರಿಹಾರವು ಸಂತ್ರಸ್ತ ಕುಟುಂಬಗಳಿಗೆ ತಲುಪುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net