ಡೆಹ್ರಾಡೂನ್: ಹಿಮಾಲಯದ ಮಡಿಲು ಉತ್ತರಾಖಂಡದಲ್ಲಿ ಪ್ರಕೃತಿ ಮುನಿಸಿಕೊಂಡಿದೆ. ಕಳೆದ ಎರಡು ದಿನಗಳಿಂದ ಗಿರಿಧಾಮಗಳ ವಲಯದಲ್ಲಿ ಮುಂಗಾರು ಪೂರ್ವ ಭೀಕರ ಮಳೆ ಸುರಿಯುತ್ತಿದ್ದು, ಜಾಗತಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಬದರಿನಾಥ್, ಕೇದಾರ್‌ನಾಥ್ ಮತ್ತು ಸಿಖ್ಖರ ಪವಿತ್ರ ಕ್ಷೇತ್ರ ಹೇಮಕುಂಡ್ ಸಾಹಿಬ್ ಯಾತ್ರೆಯನ್ನು(Badrinath- Kedarnath yatra temporarily halted) ಉತ್ತರಾಖಂಡ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಧಾಮ್‌ಗಳತ್ತ ಸಾಗುವ ಹೆದ್ದಾರಿಗಳ ಮೇಲೆ ಭೀಕರ ಭೂಕುಸಿತ ಸಂಭವಿಸುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.