ಪೊಲೀಸರ ಪ್ರಕಾರ, ಇಂದು ಮಧ್ಯಾಹ್ನ ಚೆಂಬೂರ್ ರಸ್ತೆ ಸಂಖ್ಯೆ 11 ರಲ್ಲಿ ಶಾಲಾ ಬಸ್ ಪ್ರಯಾಣಿಸುತ್ತಿದ್ದಾಗ ಬಸ್ ಮೇಲೆ ದೊಡ್ಡ ಮರ ಬಿದ್ದಿದೆ. ಈ ವೇಳೆ ಬಸ್ನಲ್ಲಿ 13 ವಿದ್ಯಾರ್ಥಿಗಳಿದ್ದರು. ಮರ ಬಿದ್ದ ಬಳಿಕ ಬಸ್ ಕಂಡಕ್ಟರ್ ಮತ್ತು ಸ್ಥಳೀಯರು ತಕ್ಷಣಾ ರಕ್ಷಣಾ ಕಾರ್ಯಾಚರಣೆ ನಡೆಸಿ ಹಾನಿಗೊಳಗಾದ ಬಸ್ಸಿನಿಂದ ಮಕ್ಕಳನ್ನು ಹೊರತೆಗೆದು ರಕ್ಷಿಸಿದ್ದು, ಗಾಯಗೊಂಡ ಐವರು ವಿದ್ಯಾರ್ಥಿಗಳನ್ನು ಹತ್ತಿರದ ಝೆನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.