ಅಸ್ಸಾಂನಲ್ಲಿ ಭಾರಿ ಮಳೆ, ಪ್ರವಾಹ; ಕಳೆದ 24 ಗಂಟೆಗಳಲ್ಲಿ 21 ಮಂದಿ ಸಾವು: ಸಾವಿರಾರು ಮನೆಗಳು ಜಲಾವೃತ | Assam
ಸಾಂದರ್ಭಿಕ ಚಿತ್ರ
Published on:
Copied
Follow Us
ಗುವಾಹಟಿ: ಅಸ್ಸಾಂನಲ್ಲಿ(Assam) ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಕಳೆದ 24 ಗಂಟೆಗಳಲ್ಲಿ 16 ಜಿಲ್ಲೆಗಳಲ್ಲಿ 21 ಜನರು ಸಾವನ್ನಪ್ಪಿದ್ದಾರೆ ಮತ್ತು 5.64 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ ಎಂದು ಬುಧವಾರ(ಜು. 22) ವರದಿಯಾಗಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿದ ತಡರಾತ್ರಿಯ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಶಿವಸಾಗರ್ ಜಿಲ್ಲೆಯಲ್ಲಿ 13 ಸಾವುಗಳು ಸಂಭವಿಸಿವೆ. ಬಳಿಕ ಚಾರೈಡಿಯೊದಲ್ಲಿ ಐದು, ಗೋಲಾಘಾಟ್‌ನಲ್ಲಿ ಎರಡು ಮತ್ತು ಜೋರ್ಹತ್‌ನಲ್ಲಿ ಒಬ್ಬರು ಮೃತಪಟ್ಟಿದ್ದು, ಈವರೆಗೆ ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 31ಕ್ಕ ಏರಿಕೆಯಾಗಿದೆ.
ಗೋಲಾಘಾಟ್, ಕಮ್ರೂಪ್, ಹೊಜೈ, ದಿಬ್ರುಗಢ, ಬಿಸ್ವನಾಥ್, ಧೇಮಾಜಿ, ಸೋನಿತ್‌ಪುರ್, ಉದಲ್‌ಗುರಿ, ನಾಗಾಂವ್, ಚರೈಡಿಯೊ, ಕಮ್ರೂಪ್ (ಮೆಟ್ರೊ), ಜೋರ್ಹತ್, ತಿನ್ಸುಕಿಯಾ, ಕರ್ಬಿ ಆಂಗ್ಲಾಂಗ್, ಲಖಿಂಪುರ ಮತ್ತು ಶಿವಸಾಗರ್ ಸೇರಿ ಒಟ್ಟು 6 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಪೀಡಿತರಾಗಿದ್ದಾರೆ ಎಂದು ಹೇಳಿದೆ.
44 ಕಂದಾಯ ವೃತ್ತಗಳಲ್ಲಿ 872 ಗ್ರಾಮಗಳು ಜಲಾವೃತಗೊಂಡಿವೆ. ಶಿವಸಾಗರ್‌ನಲ್ಲಿ ಒಟ್ಟು 3,59,535 ಜನರು, ಜೋರ್ಹತ್‌ನಲ್ಲಿ 87,662 ಮತ್ತು ಚಾರೈಡಿಯೊದಲ್ಲಿ 72,646 ಜನರು ಬಾಧಿತರಾಗಿದ್ದಾರೆ. ಎಪ್ಪತ್ತೊಂದು ಪರಿಹಾರ ಶಿಬಿರಗಳು, 12,284 ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡಲಾಗಿದ್ದು, 202 ಪರಿಹಾರ ವಿತರಣಾ ಕೇಂದ್ರಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ.
ಇನ್ನೂ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದು, ಬುಧವಾರದಿಂದ ಅತಿ ಹೆಚ್ಚು ಹಾನಿಗೊಳಗಾದ ಚರೈಡಿಯೋ, ನಜೀರಾ, ಶಿವಸಾಗರ್, ಸೋನಾರಿ, ಜೋರ್ಹತ್ ಮತ್ತು ಟಿಯೋಕ್‌ಗಳಲ್ಲಿನ ಪ್ರವಾಹ ಪೀಡಿತ ಪ್ರದೇಶಗಳು ಮತ್ತು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆಗಳನ್ನು ಪರಿಶೀಲಿಸುತ್ತೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).