ಪ್ರತಿಕೂಲ ಹವಾಮಾನ: ದಟ್ಟ ಮಂಜಿನಿಂದಾಗಿ ದಿಕ್ಕು ಬದಲಾಯಿಸಿದ ಮೋದಿ ಹೆಲಿಕಾಪ್ಟರ್..PM Modi

PM Modi
PM Modi
Published on
ಕೋಲ್ಕತ್ತಾ: ( PM Modi) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​​ ಹವಾಮಾನ ವೈಪರಿತ್ಯದಿಂದಾಗಿ ತಾಹರ್‌ಪುರದಲ್ಲಿ ಗೊತ್ತುಪಡಿಸಿದ ಹೆಲಿಪ್ಯಾಡ್ ಬದಲಿಗೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ಪ್ರಧಾನಿ ಮೋದಿಯವರ ಹಶ್ಚಿಮ ಬಂಗಾಳ ಭೇಟಿಗೆ ಪ್ರತಿಕೂಲ ಹವಾಮಾನ ಪರಿಸ್ಥಿತಿ ಅಡ್ಡಿಯಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯಗಳು ಹೊಗೆಯಿಂದ ಆವೃತವಾಗಿವೆ. ಆದಾಗ್ಯೂ, ಪ್ರಧಾನಿ ಮೋದಿ ಶನಿವಾರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು. ಪ್ರಧಾನಿಯನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದಿಂದ ಅಡಚಣೆಯಾಯಿತು. ಪರಿಣಾಮವಾಗಿ, ಹೆಲಿಕಾಪ್ಟರ್ ತಾಹರ್‌ಪುರದಲ್ಲಿ ಗೊತ್ತುಪಡಿಸಿದ ಹೆಲಿಪ್ಯಾಡ್ ಬದಲಿಗೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಅದಾಗ್ಯೂ, ಅನುಕೂಲಕರ ಪರಿಸ್ಥಿತಿಗಳು ಮರಳುವವರೆಗೆ ಪ್ರಧಾನಿ ವಿಮಾನ ನಿಲ್ದಾಣದಲ್ಲಿಯೇ ಇರುತ್ತಾರೆ ಎನ್ನಲಾಗಿದೆ.
ಬೆಳಿಗ್ಗೆ 10.40 ಕ್ಕೆ ಕೋಲ್ಕತ್ತಾಗೆ ಬಂದಿಳಿದ ಪ್ರಧಾನಿ ಮೋದಿ, ಹೆಲಿಕಾಪ್ಟರ್ ಮೂಲಕ ನಾಡಿಯಾ ಜಿಲ್ಲೆಯ ತಾಹೆರ್‌ಪುರಕ್ಕೆ ತೆರಳಿದರು. ಅವರು ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಬೇಕಿತ್ತು. ಬಿಜೆಪಿಯ ಪರಿವರ್ತನ ಸಂಕಲ್ಪ ಸಭೆಯಲ್ಲೂ ಭಾಗವಹಿಸಿ ಭಾಷಣ ಮಾಡಬೇಕಿತ್ತು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ, ಹೆಲಿಕಾಪ್ಟರ್ ಕೋಲ್ಕತ್ತಾದಲ್ಲಿ ಮತ್ತೆ ಇಳಿಯಿತು.
ದಟ್ಟವಾದ ಮಂಜಿನಿಂದಾಗಿ ರ್ಯಾಲಿ ಸ್ಥಳವನ್ನು ತಲುಪಲು ವಿಫಲವಾದ ನಂತರ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ವರ್ಚುವಲ್ ಮೂಲಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ಇಂದು ಮಧ್ಯಾಹ್ನ ಕಡಿಮೆ ಗೋಚರತೆಯಿಂದಾಗಿ ಅವರ ಹೆಲಿಕಾಪ್ಟರ್ ತಾಹೆರ್‌ಪುರ್ ಹೆಲಿಪ್ಯಾಡ್‌ನಲ್ಲಿ ಇಳಿಯಲು ವಿಫಲವಾದ ನಂತರ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಬೇಕಾಯಿತು. ಅದು ಸ್ವಲ್ಪ ಸಮಯದವರೆಗೆ ಹೆಲಿಪ್ಯಾಡ್ ಮೇಲೆ ಹಾರಾಡುತ್ತಿತ್ತು ಮತ್ತು ಯು-ಟರ್ನ್ ತೆಗೆದುಕೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಹೆರ್‌ಪುರದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದವರನ್ನು ವೈಯಕ್ತಿಕವಾಗಿ ಉದ್ದೇಶಿಸಿ ಮಾತನಾಡಲು ಸಾಧ್ಯವಾಗದಿದ್ದಕ್ಕಾಗಿ ಅವರು ಕ್ಷಮೆಯಾಚಿಸಿದರು.
ಇತ್ತೀಚೆಗೆ ಚುನಾವಣಾ ಆಯೋಗವು ವಿಶೇಷ ಮತದಾರರ ಸಮೀಕ್ಷೆಯನ್ನು ನಡೆಸಿತು. ಚುನಾವಣಾ ಆಯೋಗವು ಸುಮಾರು 58 ಲಕ್ಷ ಮತಗಳನ್ನು ತಿರಸ್ಕರಿಸಿದೆ. ಮುಂದಿನ ವರ್ಷದ ಆರಂಭದಲ್ಲಿ ಹಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ನಡೆಯಲಿವೆ. ಚುನಾವಣಾ ಆಯೋಗವು ಮತದಾರರ ಪಟ್ಟಿಯ ಮೊದಲ ಕರಡನ್ನು ಘೋಷಿಸಿದ ನಂತರ ಪ್ರಧಾನಿ ಮೋದಿ ಬಂಗಾಳಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಕಳೆದ ಐದು ತಿಂಗಳಲ್ಲಿ ಇದು ಮೂರನೇ ಭೇಟಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net