ಪವಿತ್ರ ಗಂಗಾನದಿ ಬಳಿ ಡ್ರಿಂಕ್ಸ್​ ಪಾರ್ಟಿ ವಿರೋಧಿಸಿದ ಪೊಲೀಸ್; 'ನಮ್ಮಿಂದ್ಲೆ ನಿಮ್ಗೆ ಆದಾಯ'ಎಂದು ಯುವತಿ ದರ್ಪ..Ganga River

Ganga River
Ganga River
Published on

ಪ್ರಮುಖ ಮುಖ್ಯಾಂಶಗಳು

  • ಉತ್ತರಖಂಡದ ಋಷಿಕೇಶದ ಬಳಿ ಮದ್ಯ ಸೇವಿಸಿದ ಯುವತಿ, ಪೊಲೀಸರಿಂದ ವಿರೋಧ
  • ಪ್ರವಾಸಿ ಮಹಿಳೆ ಮದ್ಯ ಸೇವನೆ ಪ್ರಶ್ನಿಸಿದ್ದಕ್ಕೆ ಪೊಲೀಸರ ವಿರುದ್ಧ ವಾಗ್ದಾಳಿ
  • ನಮ್ಮಿಂದಲೇ ನಿಮ್ಮ ಜೀವನಕ್ಕೆ ಆದಾಯ ಎಂದು ಕಿರಿಕ್​ ಮಾಡ್ಕೊಂಡ ಮಹಿಳೆ
ಋಷಿಕೇಶ: ಗಂಗಾ ನದಿಯು ಭಾರತದ ಅತ್ಯಂತ ಪವಿತ್ರ ನದಿ. ಹಿಂದೂ ಧರ್ಮದಲ್ಲಿ ಈ ತಾಯಿಯನ್ನು ದೇವತೆಯಾಗಿ ಪೂಜಿಸಲಾಗುತ್ತದೆ. ಹೀಗಾಗಿಯೇ ಗಂಗಾರತಿಯಂತಹ ಪೂಜೆಗಳು ಸಹ ಈ ಮಾತೆಗೆ ನಡೆಯುತ್ತದೆ. ಇಲ್ಲಿ ಸ್ನಾನ ಮಾಡುವುದರಿಂದ ಪಾಪ ತೊಳೆದು ಮೋಕ್ಷ ಸಿಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಆದ್ರೆ ಇಂತಹ ಪ್ರದೇಶದ ಬಳಿ ಯುವತಿಯೊಬ್ಬಳ ಮದ್ಯ ಸೇವನೆಯನ್ನು ಪೊಲೀಸರು ಪ್ರಶ್ನಸಿದ್ದಕ್ಕೆ ಅವರ ವಿರುದ್ಧವೇ ವಾಗ್ದಾಳಿ ನಡೆಸಿದ ಘಟನೆ ಋಷಿಕೇಶದಲ್ಲಿ ಬೆಳಕಿಗೆ ಬಂದಿದೆ.
ಹರಿಯಾಣದ ಪ್ರವಾಸಿ ಮಹಿಳೆಯೊಬ್ಬಳು ಉತ್ತರಾಖಂಡದ ನೀಲಕಂಠ ಮಾರ್ಗದಲ್ಲಿರುವ ಫೂಲ್ ಚಟ್ಟಿ ಪ್ರದೇಶದ ಗಂಗಾನದಿ ಬಳಿ ಮದ್ಯ ಸೇವಿಸುತ್ತಿದ್ದರು. ಇದನ್ನು ಇಲ್ಲಿಯೇ ಗಸ್ತು ತಿರುಗುತ್ತಿದ್ದ ಪೊಲೀಸ್​​ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಅವರ ಮೇಲೆಯೇ ಮಾತಿಗೆ ತಿರುಗಿಬಿದ್ದ ಯುವತಿ ನಮ್ಮಿಂದಲೇ ನಿಮ್ಮ ಬದುಕಿಗೆ ಆದಾಯ ಎನ್ನುವ ಮುಖೇನ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಘಟನೆ ಏಪ್ರಿಲ್​.6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಋಷಿಕೇಶವು ಆಧ್ಯಾತ್ಮಿಕ ವಲಯ. ಪವಿತ್ರ ನದಿಯ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಅನೇಕ ಪ್ರದೇಶಗಳಲ್ಲಿ ಮದ್ಯ ಮತ್ತು ಮಾಂಸಾಹಾರ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮಾನದಂಡವನ್ನು ಕಾಪಾಡಿಕೊಳ್ಳಲು ಇಲ್ಲಿನ ಪೊಲೀಸರು ಘಾಟ್​ ಸೆಕ್ಷನ್​ಗಳಲ್ಲಿ ಮತ್ತು ನದಿ ದಂಡೆಗಳ ಬಳಿ ಮೇಲ್ವಿಚಾರಣೆ ನಡೆಸುವ ಕ್ರಮವಿದೆ. ಹೀಗಾಗಿ ಯುವತಿ ಮಾಡುತ್ತಿದ್ದ ತಪ್ಪನ್ನು ನಿಲ್ಲಿಸಲು ಹೋದ ಪೊಲೀಸರಿಗೆ ಆಕೆ ಅನುಚಿತವಾಗಿ ಮಾತನಾಡಿರುವುದರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಅರ್ಧ ಚಡ್ಡಿ ಟೀ ಶರ್ಟ್​ ಧರಿಸಿದ ಯುವತಿ ತನ್ನ ಸುತ್ತ-ಮುತ್ತ ನೆರೆದಿರುವ ಜನರ ವಿಡಿಯೋವನ್ನು ಚಿತ್ರೀಕರಿಸುತ್ತಾ.ಪೊಲೀಸರು ನಿಂತಿದ್ದ ವ್ಯಾನ್​ ಬಳಿಯು ತೆರಳಿದ್ದಾಳೆ. ಆಗ ಮಾತಿನ ಚಕಮಕಿಗೆ ಇಳಿದಿದ್ದಾಳೆ. ಈವೇಳೆ ನಿಮ್ಮ ಜೀವನೋಪಾಯವು ನಮ್ಮ ಮೇಲೆ ಅವಲಂಬಿತವಾಗಿದೆ. ನಾವು ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿದರೆ ಮಾತ್ರ ನಿಮ್ಗೆ ಆದಾಯ ಸಿಗೋದು ಎಂದು ಹೇಳಿದ್ದಾಳೆ.

ನೆಟ್ಟಿಗರು ಏನಂದ್ರು?

ಮೇಡಂ ನೀವು ಪ್ರವಾಸಿಗರು, ಹಣ ಕೊಡ್ತಿದ್ದೀರಿ ಸರಿ. ಆದ್ರೆ ಗಂಗಾ ನದಿ ನಿಮ್ಮ ವೈಯಕ್ತಿಕ ಬಾರ್​ ಅಲ್ಲ. ಇದು ಶಾಂತಿ ಮತ್ತು ಆಧ್ಯಾತ್ಮಕತೆಯತ್ತ ತೆರಳಲು ಇಲ್ಲಿಗೆ ಬನ್ನಿ ಹರಿಯಾಣದಲ್ಲಿ ಪಾರ್ಟಿ ಮಾಡಿ, ಇಲ್ಲಿಗೆ ಬರಬೇಡಿ. ವಾತಾವರಣವನ್ನು ಗೌರವಿಸಿ ಅಥವಾ ಮನೆಯಲ್ಲಿಯೇ ಇರಿ ಎಂದಿದ್ದಾರೆ. ಪ್ರವಾಸೋದ್ಯಮದಿಂದ ಆದಾಯ ಸಿಗುತ್ತೆ ಹೌದು. ಆದರೆ, ಪವಿತ್ರ ಸ್ಥಳದಲ್ಲಿ ನಿಮ್ಮಿಷ್ಟದಂತೆ ಇರ್ಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net