ದೇಶದ ಈ 8 ರಾಜ್ಯಕ್ಕೆ 2 ದಿನ ಶಾಖದ ಅಲೆ ಬೀಸುವ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ; ಕರ್ನಾಟಕದ ಕತೆ ಏನು?

 Heat wave Warning
Heat wave Warning
Published on

ಪ್ರಮುಖ ಮುಖ್ಯಾಂಶಗಳು

  • ಹರಿಯಾಣ, ಪಂಜಾಬ್​ ಸೇರಿದಂತೆ ಉತ್ತರ ಭಾರತದ 8 ರಾಜ್ಯಕ್ಕೆ ಅಲರ್ಟ್​
  • ಉತ್ತರ ಭಾರತದ 8 ರಾಜ್ಯದಲ್ಲಿ ಶಾಖದ ಅಲೆ ಬೀಸುವ ಎಚ್ಚರಿಕೆ
  • ಗೋವ, ಹರಿಯಾಣ, ದೆಹಲಿಯಲ್ಲಿ ಶುಕ್ರವಾರ ಮತ್ತು ಶನಿವಾರ ಬೆಚ್ಚಗಿನ ರಾತ್ರಿ ಅಲರ್ಟ್
Heat wave Warning: ಸೂರ್ಯನ ಶಾಖಕ್ಕೆ ಭೂಮಿ ಮತ್ತು ಜನರು ಬೆಂಡಾಗಿದ್ದಾರೆ. ಸಂಜೆಯಾಗೋದು ಯಾವಾಗ ಕಾದು ನೋಡುತ್ತಿರುವವರು ಒಂದು ಕಡೆಯಾದರೆ, ಬೇಸಿಗೆ ಮುಗಿದರೇ ಸಾಕು ಎನ್ನುವವರು ಮತ್ತೊಂದು ಕಡೆ. ಈ ಮಧ್ಯೆ ಹವಾಮಾನ ಇಲಾಖೆಯು ಭಾರತದ 8 ರಾಜ್ಯಗಳಲ್ಲಿ ಶಾಖದ ಅಲೆ ಬೀಸಲಿದೆ ಎಂದು ಪ್ರಕಟಣೆ ಹೊರಡಿಸಿರುವುದು ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಮತ್ತು ಶನಿವಾರ ಉತ್ತರ ಭಾರತದ ಪಂಜಾಬ್​, ರಾಜಸ್ಥಾನ, ಹರಿಯಾಣ ಹಾಗೂ ಉತ್ತರ ಪ್ರದೇಶ ಸೇರಿದಂತೆ 8 ರಾಜ್ಯದಲ್ಲಿ ಶಾಖದ ಅಲೆ ಬೀಸುವ ಎಚ್ಚರಿಕೆಯನ್ನು ಕೊಟ್ಟಿದೆ. ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಿ, ಹೆಚ್ಚು ಬಿಸಲಿನಲ್ಲಿ ಓಡಾಡದಂತೆ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದೆ.

ಉತ್ತರ ಭಾರತದಲ್ಲಿ ಎಲ್ಲೆಲ್ಲಿ ಶಾಖದ ಅಲೆ?

ಉತ್ತರ ಭಾರತದ ಮರಾಠವಾಡ, ಮಧ್ಯಪ್ರದೇಶ, ಛತ್ತೀಸಗಢಹಾಗೂ ತೆಲಂಗಾಣದ ತಾಪಮಾನ 40-45ರಷ್ಟು ತಾಪಮಾನ ಇದೆ. ಇನ್ನೂ ಹರಿಯಾಣ, ಮಹಾರಾಷ್ಟ್ರ, ಪಂಜಾಬ್​, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ 8 ರಾಜ್ಯದಲ್ಲಿ ಶಾಖದ ಅಲೆ ಬೀಸಲಿದೆ.

ಈ ರಾಜ್ಯದಲ್ಲಿ ಬೆಚ್ಚಗಿನ ರಾತ್ರಿ ಇರಲಿದೆ

ಇನ್ನು ದೆಹಲಿ, ಗೋವ, ಚಂಡೀಗಢ, ಒಡಿಶಾ, ರಾಜಸ್ಥಾನದಲ್ಲಿ ಶುಕ್ರವಾರ ಮತ್ತು ಶನಿವಾರ ರಾತ್ರಿಯಲ್ಲಿಯೂ ಬೆಚ್ಚಗಿನ ವಾತಾವರಣ ಇರಲಿದೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ.
ಕರ್ನಾಟಕದ ಪರಿಸ್ಥಿತಿ ಹೇಗೆ?
ಈಗಾಗಲೇ ಕರ್ನಾಟಕದ ಉತ್ತರ ಭಾಗದಲ್ಲಿ ಶಾಖದ ಪರಿಸ್ಥಿತಿ ಹೆಚ್ಚಾಗಿದೆ. ಕಲಬುರಗಿ, ಬೀದರ್​, ರಾಯಚೂರಿನಲ್ಲಿ ಈಗಾಗಲೇ 41 ಡಿಗ್ರಿಗೆ ಏರಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ 36-37 ಡಿಗ್ರಿ ಹೆಚ್ಚಾಗಿದೆ. ಮೇ ವೇಳೆಗೆ ಇದರ ಪ್ರಖರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹವಾಮಾನ ಇಲಾಖೆ ಹೇಳಿದ್ದೇನು?

ಶಾಖ ಹೆಚ್ಚಿರುವ ಕಾರಣ ಹೆಚ್ಚೆಚ್ಚು ನೀರು ಕುಡಿಯಿರಿ ಸರಿಯಾದ ಸಮಯಕ್ಕೆ ಊಟ ಮಾಡಿ ಎಂದು ಕೇಳಿಕೊಂಡಿದ್ದಾರೆ. ದೇಹಕ್ಕೆ ಶಕ್ತಿ ನೀಡುವ ಪಾನೀಯಗಳಾದ ಮಜ್ಜಿಗೆ, ಆರೆಂಜ್​, ಎಳನೀರು ಹಾಗೂ ಖರ್ಬೂಜ, ಕಲ್ಲಂಗಡಿ ಹಣ್ಣಿನ ಜ್ಯೂಸ್ ಕುಡಿಯುವುದು ಉತ್ತಮ ಎಂದು ಹೇಳಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net