ಆತನಿಗೆ ಲಿಂಗ ಬದಲಾಯಿಸಿ ಹೆಣ್ಣಾಗುವ ಆಸೆ; ಅದೇ ತಾಯಿಗೆ ಮಗನಾಗಿ ಇರಬೇಕೆಂಬ ಬಯಕೆ! ಇಬ್ಬರ ಜಗಳ ದುರಂತದಲ್ಲಿ ಅಂತ್ಯ

ಮಗ ಶಸ್ತ್ರ ಚಿಕಿತ್ಸೆ ಮೂಲಕ ಲಿಂಗಪರಿವರ್ತನೆ ಮಾಡಿಕೊಳ್ಳಲು ಬಯಸಿದ್ರೆ, ತಾಯಿಗೆ ಅವನು ತನ್ನ ಮಗನಾಗಿಯೇ ಇರಬೇಕೆಂಬ ಆಸೆ. ಇಬ್ಬರ ನಡುವಿನ ವಾಗ್ವಾದವು ದುರಂತದಲ್ಲಿ ಅಂತ್ಯ ಕಂಡಿದ್ದು, ಯುವಕ ಸ್ಪ್ಯಾನರ್ ತಗೊಂಡು ತಾಯಿ ತಲೆಗೆ ಹೊಡೆದು ಕೊಂದಿದ್ದಾನೆ.
ಆತನಿಗೆ ಲಿಂಗ ಬದಲಾಯಿಸಿ ಹೆಣ್ಣಾಗುವ ಆಸೆ; ಅದೇ ತಾಯಿಗೆ ಮಗನಾಗಿ ಇರಬೇಕೆಂಬ ಬಯಕೆ! ಇಬ್ಬರ ಜಗಳ ದುರಂತದಲ್ಲಿ ಅಂತ್ಯ
Published on: 

ಲಖನೌ: ಹದಿಹರೆಯದ ಮಗ ತನ್ನ ದೇಹದಲ್ಲಿನ ಹಾರ್ಮೊನ್ಸ್​ ಬದಲಾವಣೆಯಿಂದ ತನ್ನನ್ನು ತಾನೂ ಹುಡುಗಿಯಾಗಿ ಗುರುತಿಸಿಕೊಳ್ಳಲು ಇಷ್ಟುಪಟ್ಟು, ಶಸ್ತ್ರ ಚಿಕಿತ್ಸೆ ಮೂಲಕ ಲಿಂಗಪರಿವರ್ತನೆ ಮಾಡಿಕೊಳ್ಳಲು ಬಯಸಿದ್ರೆ, ತಾಯಿಗೆ ಅವನು ತನ್ನ ಮಗನಾಗಿಯೇ ಇರಬೇಕೆಂಬ ಆಸೆ. ಇಬ್ಬರ ನಡುವಿನ ವಾಗ್ವಾದವು ದುರಂತದಲ್ಲಿ ಅಂತ್ಯ ಕಂಡಿದ್ದು, ಯುವಕ ಸ್ಪ್ಯಾನರ್ ತಗೊಂಡು ತಾಯಿ ತಲೆಗೆ ಹೊಡೆದು ಕೊಂದಿದ್ದಾನೆ.

ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಈ ಘಟನೆ ನೆಡೆದಿದೆ. 17 ವರ್ಷದ ಯುವಕನೊಬ್ಬ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ಆತನ ಬಯಕೆಯೂ ಕುಟುಂಬಸ್ಥರು ಒಪ್ಪಿಗೆಯಾಗಿರಲಿಲ್ಲ. ಶಸ್ತ್ರಚಿಕಿತ್ಸೆಯ ಬದಲಿಗೆ ವೈದ್ಯಕೀಯ ಮತ್ತು ಮಾನಸಿಕ ಸಮಾಲೋಚನೆಯನ್ನು (ಕೌನ್ಸೆಲಿಂಗ್) ಆಯ್ಕೆ ಮಾಡಿಕೊಳ್ಳುವಂತೆ ಕುಟುಂಬಸ್ಥರು ಸಲಹೆ ನೀಡಿದ್ದಾರೆ.

ಆದರೆ ಗುರುವಾರ ತಾಯಿ ಮತ್ತೊಮ್ಮೆ ಅದೇ ಸಲಹೆ ನೀಡಿದ್ದಾರೆ. ಇದರಿಂದಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸ್ಪ್ಯಾನರ್​ನಿಂದ ತಲೆಗೆ ಹೊಡೆದು ತಾಯಿಯನ್ನೇ ಕೊಂದಿದ್ದಾನೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ನಾಕಾ ಹಿಂದೋಲಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Also Read
13 ಕೋಟಿ ಮತದಾರರ ಹೆಸರು ಡಿಲಿಟ್ ಮಾಡಲಾಗಿದೆ ಎಂದು ಹೇಳುವುದು ತಪ್ಪು: ಸ್ಪಷ್ಟನೆ ನೀಡಿದ ಚುನಾವಣಾ ಆಯೋಗ |Election Commission
ಆತನಿಗೆ ಲಿಂಗ ಬದಲಾಯಿಸಿ ಹೆಣ್ಣಾಗುವ ಆಸೆ; ಅದೇ ತಾಯಿಗೆ ಮಗನಾಗಿ ಇರಬೇಕೆಂಬ ಬಯಕೆ! ಇಬ್ಬರ ಜಗಳ ದುರಂತದಲ್ಲಿ ಅಂತ್ಯ

ವಿಚಾರಣೆ ವೇಳೆ ಯುವಕ ಯುವಕ ತಾನೇ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಗೆ ಬಳಸಲಾದ ಸ್ಪ್ಯಾನರ್ ಹಾಗೂ ಇತರ ಸಾಕ್ಷ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇನ್ನೂ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಟೇಷನ್ ಹೌಸ್ ಆಫೀಸರ್ ವಿವೇಕ್ ಕುಮಾರ್ ಚೌಧರಿ, ಯುವಕನಲ್ಲಿನ ಹಾರ್ಮೋನ್ ಬದಲಾವಣೆಗೆ ಸಂಬಂಧಿಸಿದಂತೆ ಕುಟುಂಬವು ಈಗಾಗಲೇ ವೈದ್ಯರ ಸಲಹೆ ಪಡೆಯುತ್ತಿತ್ತು ಮತ್ತು ಆ ಅಪ್ರಾಪ್ತ ವ್ಯಕ್ತಿಗೆ ಸಮಾಲೋಚನೆ ವ್ಯವಸ್ಥೆ ಮಾಡುತ್ತಿತ್ತು. ಆದ್ರೆ ಯುವಕ ತನ್ನನ್ನು ತಾನು ಯುವತಿ ಎಂದು ಗುರುತಿಸಿಕೊಳ್ಳಲು ಬಯಸಿದ್ದ, ಮತ್ತು ಜಗತ್ತು ಕೂಡ ತನ್ನನ್ನು ಹಾಗೆಯೇ ಸ್ವೀಕರಿಸಬೇಕೆಂದು ಅಪೇಕ್ಷೆ ಪಡುತ್ತಿದ್ದ. ಶಸ್ತ್ರಚಿಕಿತ್ಸೆಯ ವಿಷಯವೇ ತಾಯಿ ಮತ್ತು ಮಗನ ಕೊಲೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಏಕಾಂತ ಇಷ್ಟಪಡುತ್ತಿದ್ದ ಯುವಕ

ಅಪ್ರಾಪ್ತ ಯುವಕ ಯಾವಾಗಲೂ ಏಕಾಂತವನ್ನು ಇಷ್ಟಪಡುತ್ತಿದ್ದ ಮತ್ತು ಪೋಷಕರು ಪ್ರೀತಿಯಿಂದ ಮೈಮುಟ್ಟಿ ಮುದ್ದಾಡುವುದನ್ನು ಕೂಡ ಅಸಹನೀಯವೆಂದು ಭಾವಿಸುತ್ತಿದ್ದ ಎನ್ನಲಾಗಿದೆ. ಆತನ ತಂದೆ ಲಖನೌದಲ್ಲಿ ಆತನಿಗಾಗಿ ಪ್ರತ್ಯೇಕ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. ಅಲ್ಲಿಗೆ ಕುಟುಂಬದ ಯಾರೊಬ್ಬರೂ ಭೇಟಿ ನೀಡುತ್ತಿರಲಿಲ್ಲ. ಆದರೆ, ಮಗ ತನ್ನೊಂದಿಗೇ ವಾಸಿಸಬೇಕೆಂದು ತಾಯಿ ಬಯಸಿದ್ದರು ಎನ್ನಲಾಗಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net