‘ಬೇಕಂತಲೇ ಡಿಕ್ಕಿ ಹೊಡೆದಿದ್ದಾನೆ, ನನ್ನನ್ನು ಕೊಲ್ಲುವುದೇ ಉದ್ದೇಶ!’ ಗುರುಗ್ರಾಮ್ ಪ್ರಕರಣದ ಸಂತ್ರಸ್ತೆ ಸಿಯಾ ಪ್ರಥಮ ಪ್ರತಿಕ್ರಿಯೆ Biker Girl Sia

ಗುರುಗ್ರಾಮ್​ ರೋಡ್​ ರೇಜ್​ ಪ್ರಕರಣದ ಸಂತ್ರಸ್ತೆ ಸಿಯಾ ಪ್ರಥಮ ಪ್ರತಿಕ್ರಿಯೆ
ಗುರುಗ್ರಾಮ್​ ರೋಡ್​ ರೇಜ್​ ಪ್ರಕರಣದ ಸಂತ್ರಸ್ತೆ ಸಿಯಾ ಪ್ರಥಮ ಪ್ರತಿಕ್ರಿಯೆ
Published on
ಗುರುಗ್ರಾಮ್​: ಸದ್ಯ ಗುರುಗ್ರಾಮ್​ನ ಖ್ಯಾತ ಗಾಲ್ಫ್​ಕೋರ್ಸ್​ ರಸ್ತೆಯಲ್ಲಿ ಕಾರೊಂದು ಮಹಿಳಾ ಬೈಕರ್​ಗೆ ಗುದ್ದಿರುವ ಸುದ್ದಿ ಎಲ್ಲಡೆ ಭಾರಿ ಸದ್ದು ಮಾಡುತ್ತಿದ್ದು, ಸೋಷಿಯಲ್​ ಮೀಡಿಯಾನಲ್ಲಿ ಟ್ರೆಂಡಿಂಗ್​ ಟಾಕಿಪ್​ ಆಗಿ ಬದಲಾಗಿದೆ. ವಾರಾಂತ್ಯದಲ್ಲಿ ಗೆಳೆಯರ ಜೊತೆಗೆ ಬೈಕ್​ ರೈಡ್​ಗೆ ತೆರಳಿದ್ದ ಯುವತಿಯೊಬ್ಬಳಿಗೆ ಕಾರೊಂದು ಬೇಕಂತಲೇ ಗುದ್ದಿ ರೋಡ್​ ರೇಜ್​ ಮೆರೆದಿರುವ ಘಟನೆ ಭಾರಿ ವಿವಾದಕ್ಕೆ ಕಾರಣವಾಗಿದೆ. 
ಸದ್ಯ, ಕಾರನ್ನು ಚಲಾಯಿಸುತ್ತಿದ್ದ, ಅಂತಾರಾಷ್ಟ್ರೀಯ ಬಾಡಿಬಿಲ್ಡರ್​ ಕಲ್ಯಾಣ್ ಬೈನ್ಸ್ಲಾಎಂಬಾತನನ್ನು ರಾಜಸ್ಥಾನದಲ್ಲಿ ಬಂಧಿಸಿ, ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಈಗ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಬೈಕರ್​ ಸಿಯಾ (Biker Girl Sia), ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. 

ನನ್ನನ್ನು ಕೊಲ್ಲುವುದೇ ಅವನ ಉದ್ದೇಶವಾಗಿತ್ತು!

ಸಿಯಾ ಹೇಳುವಂತೆ, ನಾನು ನನ್ನ ಎಪ್ರಿಲ್ಲಾ ಆರ್​ಎಸ್​ 457 ಸ್ಪೋರ್ಟ್ಸ್ ಬೈಕ್ ಮೇಲೆ ಗೆಳೆಯರ ಜೊತೆಗೆ ರೈಡ್​​ಗೆ ತೆರಳಿದ್ದೆ. ನಾನು ಗಾಲ್ಫ್ ಕೋರ್ಸ್​ ರಸ್ತೆಗೆ ಬರುತ್ತಿದ್ದಂತೆ, ಈ ಬಿಳಿ ಬಣ್ಣದ ಕಾರೊಂದು ನನ್ನ ಪಕ್ಕದಲ್ಲಿಯೇ ಹೋಗುತ್ತಿತ್ತು.
ಆ ಕಾರಿನಲ್ಲಿದ್ದ ಕೆಲ ಯುವಕರು ನನ್ನನ್ನು ಚುಡಾಯಿಸುವ ರೀತಿ ಏನೇನೋ ಮಾತನಾಡುತ್ತಿದ್ದರು. ನಾನು ನನ್ನ ಬೈಕಿನಿಂದ ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳುವಂತೆ ಹೇಳಿದೆ. ಅದಕ್ಕೆ ಅವರು ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ನನಗೆ ಅಲ್ಲಿದ್ದ ಎಲ್ಲರೂ ಮದ್ಯದ ನಶೆಯಲ್ಲಿರುವಂತೆ ಕಾಣಿಸಿತು. ಹೀಗಾಗಿ ನಾನು ನನ್ನ ಬೈಕ್​ ಅನ್ನು ಅವರ ಕಾರಿನಿಂದ ದೂರ ತೆಗೆದುಕೊಳ್ಳಲು ಮುಂದಾದೆ.
ನಾನು, ಸ್ವಲ್ಪ ಮುಂದೆ ಹೋದ ನಂತರ, ಇವರು ನನ್ನನ್ನು ಬೆನ್ನಟ್ಟಿ ಬಂದು ಬೇಂಕಂತಲೇ ಡಿಕ್ಕಿ ಹೊಡೆದಿದ್ದಾರೆ. ದಿಢೀರನೇ ಈ ಘಟನೆ ನಡೆದ ಹಿನ್ನಲೆ ನಾನು ನನ್ನ ಬೈಕಿನಿಂದ ಕೆಳಗೆ ಬಿದ್ದೆ, ನನ್ನ ಬೈಕ್​ ಸುಮಾರು 50 ಮೀಟರ್​ ಸ್ಕಿಡ್​ಆಯಿತು. ಈ ಎಲ್ಲಾ ದೃಶ್ಯಗಳು ನನ್ನ ಹಾಗೂ ನನ್ನ ಗೆಳೆಯನ ಹೆಲ್ಮೆಟ್​ ಕ್ಯಾಮರಾನಲ್ಲಿ ಸೆರೆಯಾಗುವೆ. ಆ ಯುವಕರು ನನ್ನನ್ನು ಕೊಲ್ಲಲೆಂದೇ ಈ ರೀತಿ ಮಾಡಿದ್ದಾರೆಂದು ಸಿಯಾ ಆರೋಪಿಸಿದ್ದಾರೆ.

ತಪ್ಪು ಮಾಡದಿದ್ದರೆ ಓಡಿದ್ದೇಕೆ?

ಈ ಘಟನೆ ನಂತರ, ಆರೋಪಿ ಕಲ್ಯಾಣ್ ಬೈನ್ಸ್ಲಾಕೂಡ ಹೇಳಿಕೆ ನೀಡಿದ್ದರು. ಅದರಲ್ಲಿ ಅವರು ಆ ಯುವತಿ ಸುಮ್ಮನ್ನೆ ಮುಂದೆ ಹೋಗುವುದು, ನಿಲ್ಲುವುದು ಮಾಡುತ್ತಿದ್ದಳು. ನಾನು ಬೇಕಂತ ಡಿಕ್ಕಿ ಮಾಡಿಲ್ಲ. ಇದು ಕೇವಲ ಆಕಸ್ಮಿಕವಾಗಿ ನಡೆದ ಘಟನೆ ಎಂದು ಸ್ಪಷ್ಟಿಕರಣ ನೀಡಿದ್ದರು.
ಇದಕ್ಕೆ ಉತ್ತರಿಸಿರುವ ಸಿಯಾ, ಇದೊಂದು ಕೇವಲ ಆಕಸ್ಮಿಕ ಘಟನೆ ಬೇಕಂತಲೇ ಮಾಡಿಲ್ಲವೆಂದು ಅವರು ಹೇಳುತ್ತಿದ್ದಾರೆ. ಹಾಗೆದರೆ, ನನ್ನನ್ನು ಏಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಲಿಲ್ಲ? ಆಸ್ಪತ್ರೆ ಬಿಡಿ ನನ್ನ ಗೆಳೆಯ ಅವರಿಗೆ ಕಾರಿನಿಂದ ಇಳಿಯಲು ಹೇಳಿದರೂ ಏಕೆ ನಿಲ್ಲಲಿಲ್ಲ? ತಪ್ಪು ಮಾಡಿಲ್ಲದ ಮೇಲೆ ಏಕೆ ಅಲ್ಲಿಂದ ಓಡಿ ಹೋದರಿ? ಎಂದು ಪ್ರಶ್ನಿಸಿದ್ದಾರೆ.
ತುಂಬಾ ಧನ್ಯವಾದಗಳು!
ನನ್ನ ಈ ಅಪಘಾತದ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆದಾಗ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಈ ಸಂದರ್ಭದಲ್ಲಿ ಈ ವಿಡಿಯೋವನ್ನು ಹಂಚಿಕೊಂಡು, ಆರೋಪಿಗಳ ನಿಜರೂಪ ಬಯಲಾಗುವಂತೆ ಮಾಡಿದ ಎಲ್ಲಾ ಜನರಿಗೆ ತುಂಬಾ ಧನ್ಯವಾದಗಳು. 
ಅಂತೆಯೇ, ನಾನು ಆದಷ್ಟ ಬೇಗ ಗುಣಮುಖವಾಗಲೆಂದು ಹಾರೈಸಿದ ಎಲ್ಲಾ ಒಳ್ಳೆಯ ಮನಸ್ಸುಗಳಿಗೆ ನಾನು ಋಣಿಯಾಗಿದ್ದೇನೆ. ಹಾಗೂ ಆ ಕಾರಿನ ಚಾಲಕನ ವಿರುದ್ಧ ಕಾನೂನು ಹೋರಾಟ ಮುಂದುವರಿಸಲಿದ್ದೆನೆಂದು ಸಿಯಾ ಹೇಳಿದ್ದಾರೆ, (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net