ಎಚ್ ಡಿ ಕುಮಾರಸ್ವಾಮಿ ಅವರು ದುಬಾರಿ ವಾಚ್ ಧರಿಸುತ್ತಾರೆ ಎಂಬ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಆರೋಪಕ್ಕೆ ಕುಮಾರಸ್ವಾಮಿ ಸ್ಥಳದಲ್ಲೇ ತಮ್ಮ ಕೈಗಡಿಯಾರವನ್ನು ಮಾಧ್ಯಮಗಳಿಗೆ ತೋರಿಸಿ ಉತ್ತರ ನೀಡಿದರು. ನೋಡಿ, ನನ್ನ ಕೈಯಲ್ಲಿ ಇರುವುದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರವಿರುವ ತೀರಾ ಸಾಧಾರಣ ವಾಚ್. ನನ್ನ ಬಳಿ ದುಬಾರಿ ವಾಚ್‌ಗಳಿವೆ ಎಂದು ಅವರಿಗೆ ಅನ್ನಿಸಿದರೆ, ಅವರದ್ದೇ ಸರ್ಕಾರ ಇದೆಯಲ್ಲ? ಎಸ್‌ಐಟಿ ತನಿಖಾ ತಂಡವನ್ನು ನನ್ನ ಮನೆಗೆ ಕಳುಹಿಸಿ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.