ಬಂಗಾಳಲ್ಲಿ ಅರಳಿದೆ ಕಮಲ? ಬಿಜೆಪಿ ಅಧಿಕಾರಕ್ಕೆ ಬಂದ್ರೆ ವಲಸಿಗರನ್ನು ಒದ್ದು ಓಡಿಸ್ತಾರೆ: ಸಂಸತ್ತಿನಲ್ಲಿ ಆತಂಕ ವ್ಯಕ್ತಪಡಿಸಿದ ಬಾಂಗ್ಲಾ ಎಂಪಿ! Illegal Immigrants

ಬಿಜೆಪಿ ಸರ್ಕಾರ ರಚಿಸಿದರೆ ಅಕ್ರಮ ವಲಸಿಗರು ಬಾಂಗ್ಲಾಗೆ ವಾಪಸ್​
ಬಿಜೆಪಿ ಸರ್ಕಾರ ರಚಿಸಿದರೆ ಅಕ್ರಮ ವಲಸಿಗರು ಬಾಂಗ್ಲಾಗೆ ವಾಪಸ್​
Published on

ಪ್ರಮುಖ ಮುಖ್ಯಾಂಶಗಳು

  • ಎಕ್ಸಿಟ್​ ಫೂಲ್​ನಲ್ಲಿ ಬಿಜೆಪಿಗೆ ಬಹುಪರಾಕ್​
  • ಬಿಜೆಪಿ ಸರ್ಕಾರ ರಚಿಸಿದರೆ ಅಕ್ರಮ ವಲಸಿಗರು ಬಾಂಗ್ಲಾಗೆ ವಾಪಸ್​
  • ಆತಂಕ ವ್ಯಕ್ತ ಪಡಿಸಿದ ಬಾಂಗ್ಲಾ ಸಂಸದ ಅಖ್ತರ್​ ಹುಸೇನ್​
  • ಮಮತಾ ಹೇಗೆ ಇಷ್ಟು ವರ್ಷ ಆಡಳಿತ ನಡೆಸಿದ್ದು ನೋಡಿ ಎಂದ ನಿಶಿಕಾಂತ್​ ದುಬೆ
ಢಾಕಾ: ಏಪ್ರಿಲ್​ 29 ರಂದು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಗಿದ್ದಿದ್ದು, ಎಕ್ಸಿಟ್​ ಫೂಲ್​ನಲ್ಲಿ ಭಾರತೀಯ ಜನತಾ ಪಕ್ಷ (BJP) ಗೆ ಬಹುಮತ ದೊರೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರ (Illegal Immigrants) ಸಮುದ್ರವೇ ಢಾಕಾವನ್ನು ಪ್ರವೇಶಿಸಲಿದೆ ಎಂದು ಬಾಂಗ್ಲಾ ಸಂಸದ ಅಖ್ತರ್​ ಹುಸೇನ್​ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ಬಿಜೆಪಿ ಗೆದ್ದರೆ ವಲಸಿಗರು ವಾಪಸ್​!

ಸಂಸತ್ತಿನಲ್ಲಿ ಮಾತನಾಡಿದ ಅಖ್ತರ್​ ಹುಸೇನ್, ಬಾಂಗ್ಲಾದೇಶದ ಬಹುತೇಕ ವಲಸಿಗರು ಬಂಗಾಳದಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಬಂಗಾಳದಲ್ಲಿ ಚುನಾವಣೆ ನಡೆದಿದ್ದು, ಮೇ. 4 ಕ್ಕೆ ಫಲಿತಾಂಶ ಹೊರಬೀಳಲಿದೆ.
ಎಕ್ಸಿಟ್​ ಫೂಲ್ ಪ್ರಕಾರ, ಭಾರತೀಯ ಜನತಾ ಪಕ್ಷ ಬಹುಮತ ಗಳಿಸುತ್ತದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಬಿಜೆಪಿ ಸರ್ಕಾರ ರಚನೆಯಾದರೆ, ಬಂಗಾಳದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರು, ಇಲ್ಲಿಗೆ ಮರಳುತ್ತಾರೆ. ಬಾಂಗ್ಲಾದೇಶದಲ್ಲಿ ರೆಫ್ಯೂಜಿ ಕ್ಯಾಂಪ್​ಗಳನ್ನು ನಿರ್ಮಿಸುವಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸಂಸದನ ಕೌಂಟರ್​!

ಬಾಂಗ್ಲಾ ಸಂಸದ ಮಾತಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ನಿಶಿಕಾಂತ್​ ಧುಬೆ, ನೋಡಿ, ಬಾಂಗ್ಲಾದೇಶದ ಸಂಸದರೇ ಹೇಳುತ್ತಿದ್ದಾನೆ, ಬಿಜೆಪಿ ಗೆದ್ದರೆ ಅಕ್ರಮ ವಲಸಿಗರನ್ನು ಒದ್ದು ಓಡಿಸುತ್ತಾರೆಂದು. ಇಷ್ಟು ವರ್ಷ ಮಮತಾ ಬ್ಯಾನರ್ಜಿ ಹೇಗೆ ಗೆಲ್ಲುತ್ತಿದ್ದಳು ಎಂದು ಎಲ್ಲರಿಗೂ ಗೊತ್ತಗಿದೆ. ನಾವು ಎಸ್​ಐಆರ್ ಜಾರಿ ಮಾಡಿದಾಗ ಏಕೆ ವಿರೋಧ ವ್ಯಕ್ತ ಪಡಿಸಿದರು ಎಂದು ಈಗ ಗೊತ್ತಾಗುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.
ಸಮೀಕ್ಷೆಗಳ ಲೆಕ್ಕಾಚಾರ: ಯಾರಿಗೆ ಎಷ್ಟು ಸ್ಥಾನ..?
ಬಂಗಾಳದ 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದೆ. ಪ್ರಮುಖ ನಾಲ್ಕು ಸಮೀಕ್ಷೆಗಳಲ್ಲಿ ಮೂರು ಸಂಸ್ಥೆಗಳು ಬಿಜೆಪಿಯೇ ಅಧಿಕಾರ ಹಿಡಿಯಲಿದೆ ಎಂದು ಹೇಳಿವೆ.
ಸಮೀಕ್ಷಾ ಸಂಸ್ಥೆ ಬಿಜೆಪಿ (BJP+) ತೃಣಮೂಲ ಕಾಂಗ್ರೆಸ್ (TMC) ಇತರರು
P-Marq 150 - 175 118 - 138 00 - 05
ಮತ್ತೆರಡು ಸಮೀಕ್ಷೆಗಳು 146 - 165 120 - 135 02 - 06
People's Pulse 100 - 115 177 - 187 01 - 04

ನಮ್ಮದೇ ಬಹುಮತ ಖಚಿತ: ಮಮತಾ

ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಮಮತಾ ಬ್ಯಾನರ್ಜಿ, ಈ ಭಾರಿ ಚುನಾವಣೆಯಲ್ಲಿ ನಮಗೆ ಕೇಂದ್ರ ಸರ್ಕಾರ ಎಷ್ಟೇ ತೊಂದರೆ ಕೊಟ್ಟರೂ ಬಂಗಾಲಿಗಳು ನಮ್ಮ ಕೈ ಹಿಡಿದೇ ಹಿಡಿಯುತ್ತಾರೆ. ಈ ಸಲ ನಾವು ಸುಮಾರು 226 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುವ ಮೂಲಕ ಮತ್ತೆ ಸರ್ಕಾರವನ್ನು ರಚಿಸಲಿದ್ದೆವೆ ಎಂದು ಹೇಳಿದ್ದಾರೆ.
ಆದರೆ ಈ ಭಾರಿ ಬಿಜೆಪಿ ಬಂಗಾಳವನ್ನು ಗೆಲ್ಲಲ್ಲು ಏನು ಮಾಡಲು ಸಿದ್ದವಿದೆ, ಆದ್ದರಿಂದ ಮತ ಏಣಿಕೆ ದಿನ ನಾನು ಖುದ್ದಾಗಿ ಪ್ರತಿ ಕ್ಷೇತ್ರಗಳಿಗೆ ತೆರಳುವ ಯೋಜನೆ ಹೊಂದಿದ್ದೆನೆ. ನನಗೆ ನನ್ನ ಮತದಾರರ ಮೇಲೆ ನಂಬಿಕೆಯಿದೆ. ಮೇ.4 ರಂದು ಟಿಎಮ್​ಸಿ ಈ ನೆಲದ ಸರ್ಕಾರವನ್ನು ರಚಿಸುವುದು ನಿಶ್ಚಿತ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net