ಹರಿಜನ, ಗಿರಿಜನ ಪದ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ ಹರಿಯಾಣ ಬಿಜೆಪಿ ಸರ್ಕಾರ | Haryana government

ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ
ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ
Published on
ಚಂಡೀಗಢ: ಹರಿಯಾಣದ ಬಿಜೆಪಿ ಸರ್ಕಾರ ತನ್ನ ಎಲ್ಲಾ ಆಡಳಿತಾತ್ಮಕ ಇಲಾಖೆಗಳು, ಸಾರ್ಜಜನಿಕ ಮತ್ತು ಶಿಕ್ಷಣ ಸಂಸ್ಥೆಗಳು ಸೇರಿ ಎಲ್ಲಾ ಕಡೆ ಪರಿಶಿಷ್ಟ ಜಾತಿಗಳು, ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಸಂವಹನಗಳಲ್ಲಿ ಹರಿಜನ ಮತ್ತು ಗಿರಿಜನ ಪದಗಳನ್ನು ಕಟ್ಟುನಿಟ್ಟಾಗಿ ಬಳಸುವುದನ್ನು ತಪ್ಪಿಸಬೇಕು ಅಧಿಕೃತವಾಗಿ ಆದೇಶ ಹೊರಡಿಸಿದೆ.
ಈ ಕುರಿತು ಹರಿಯಾಣದ ಸಿಎಸ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಸರ್ಕಾರವು ರಾಜ್ಯದ ಎಲ್ಲಾ ಆಡಳಿತ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ಮಂಡಳಿಗಳು, ನಿಗಮಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ವಿಭಾಗೀಯ ಆಯುಕ್ತರು, ಉಪ ಆಯುಕ್ತರು, ಉಪ-ವಿಭಾಗೀಯ ಅಧಿಕಾರಿಗಳು(ಸಿವಿಲ್) ಮತ್ತು ವಿಶ್ವವಿದ್ಯಾಲಯಗಳ ರಿಜಿಸ್ಟ್ರಾರ್‌ಗಳಿಗೆ ಎಲ್ಲಾ ಅಧಿಕೃತ ವಿಷಯಗಳು ಮತ್ತು ಪತ್ರವ್ಯವಹಾರಗಳಲ್ಲಿ 'ಹರಿಜನ' ಮತ್ತು 'ಗಿರಿಜನ' ಪದಗಳ ಬಳಕೆಯನ್ನು ಕಟ್ಟುನಿಟ್ಟಾಗಿ ತಪ್ಪಿಸಲು ನಿರ್ದೇಶನಗಳನ್ನು ನೀಡಿದೆ ಎಂದು ಹೇಳಿದ್ದಾರೆ.
ಭಾರತದ ಸಂವಿಧಾನವು ಎಸ್‌ಸಿ ಮತ್ತು ಎಸ್‌ಟಿಗಳನ್ನು ಸೂಚಿಸಲು ಈ ಅಭಿವ್ಯಕ್ತಿಗಳನ್ನು ಬಳಸುವುದಿಲ್ಲ. ಮತ್ತು ಕೆಲವು ಇಲಾಖೆಗಳು ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಹೀಗಾಗಿ ಎಲ್ಲಾ ಇಲಾಖೆಗಳು ಮತ್ತು ಅಧಿಕಾರಿಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಹಾತ್ಮ ಗಾಂಧಿಯವರು ಪರಿಶಿಷ್ಟ ಜಾತಿಯ ಜನರನ್ನು ಹರಿಜನರು ಅಂದರೆ ದೇವರ ಜನ ಎಂದು ಕರೆದರು. ಆದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಹರಿಜನ ಪದ ಬಳಕೆಯನ್ನು ವಿರೋಧಿಸಿದ್ದು, ದಲಿತರು ಎಂದು ಕರೆಯಲು ಆದ್ಯತೆ ನೀಡಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net