ಸಂದರ್ಶಕಿಯಾಗಿ ಬದಲಾದ ಬ್ಯಾಟರ್​​ ಹರ್ಲೀನ್ ಡಿಯೋಲ್ | Harleen Deol

Harleen Deol | ಹರ್ಲೀನ್ ಡಿಯೋಲ್
Published on
ದೆಹಲಿ: ವಿಶ್ವಕಪ್ ವಿಜೇತ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಭೇಟಿಯ ವೇಳೆ ಬ್ಯಾಟರ್​ ಹರ್ಲೀನ್ ಡಿಯೋಲ್ (Harleen Deol), ಪ್ರಧಾನಿ ಮೋದಿ ಚರ್ಮದ ಆರೈಕೆಯ ಬಗ್ಗೆ ಕೇಳಿದಾಗ ಅಲ್ಲಿ ನೆರೆದಿದ್ದ ಎಲ್ಲ ಸದಸ್ಯರು ನಗೆಗಡಲಲ್ಲಿ ತೇಲಿದ ಕ್ಷಣಕ್ಕೆ ಪ್ರಧಾನಿಯವರ ಲೋಕ ಕಲ್ಯಾಣ ಮಾರ್ಗದ ನಿವಾಸ ಸಾಕ್ಷಿಯಾಗಿದೆ.
ಪ್ರಾರಂಭದಲ್ಲಿ ಭಾರತ ತಂಡದ ಐತಿಹಾಸಿಕ ವಿಶ್ವಕಪ್ ಗೆಲುವಿನ ಬಗ್ಗೆ ನಡೆದ ಚರ್ಚೆ, ಹರ್ಲೀನ್​ರ ಪ್ರಶ್ನೆಯಿಂದಾಗಿ ಹಾಸ್ಯ ಪ್ರಸಂಗಕ್ಕೆ ತಿರುಗಿತು. ಪ್ರಧಾನಿ ಮೋದಿ, ಹರ್ಲೀನ್​ರ ಹಾಸ್ಯಪ್ರಜ್ಞೆ ಮತ್ತು ಒತ್ತಡದಲ್ಲಿದ್ದರೂ ವಾತಾವರಣವನ್ನು ಹಗುರವಾಗಿಡುವ ಸಾಮರ್ಥ್ಯವನ್ನು ಶ್ಲಾಘಿಸಿದರು ಎಂದು ವರದಿಯಾಗಿದೆ.
ಆಟಗಾರ್ತಿಯಾಗಿ ಪ್ರಧಾನಿ ನಿವಾಸ ಪ್ರವೇಶಿಸಿದ್ದ ಹರ್ಲೀನ್, ಕೆಲವೇ ಹೊತ್ತಿನಲ್ಲಿ ತಾತ್ಕಾಲಿಕ ಸಂದರ್ಶಕಿರಾಗಿ ಬದಲಾದರು, ಕ್ರಿಕೆಟ್‌ಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳುಬಹುದು ಎಂದು ಎಲ್ಲರು ಲೆಕ್ಕಾಚಾರ ಹಾಕಿದಾಗ ಡಿಯೋಲ್​ರ ಮಾತು ಇಡೀ ಕೋಣೆಯನ್ನು ಆಶ್ಚರ್ಯಚಕಿತರನ್ನಾಗಿಸುವಂತೆ ಮಾಡಿತು.

ಹರ್ಲೀನ್ ಡಿಯೋಲ್ ಕೇಳಿದ್ದೇನು..?

ಸರ್, ನಿಮ್ಮ ಚರ್ಮ ಯಾವಾಗಲೂ ಹೊಳೆಯುತ್ತಿರುತ್ತದೆ. ದಯವಿಟ್ಟು ನಿಮ್ಮ ಚರ್ಮದ ಆರೈಕೆ ದಿನಚರಿ ಏನು ಎಂದು ಹೇಳಬಲ್ಲಿರಾ?" ಹರ್ಲೀನ್ ನಗುತ್ತಾ ಕೇಳಿದರು. ಈ ಅನಿರೀಕ್ಷಿತ ಪ್ರಶ್ನೆ ಪ್ರಧಾನಿ ಮೋದಿ ಸೇರಿದಂತೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ಇದಕ್ಕೆ ನಗುತ್ತಲೇ ಉತ್ತರಿಸಿದ ಮೋದಿ ಆ ಕುರಿತಾಗಿ ನಾನು ಯೋಚಿಸುವುದಿಲ್ಲ ಎಂದರು.
ಇದೇ ವೇಳೆ ಮಾತನಾಡಿದ ಮುಖ್ಯ ತರಬೇತುದಾರ ಅಮೋಲ್ ಮುಜುಂದಾರ್, ನಾನು ಬೆರೆಯುವಂತಹ ವ್ಯಕ್ತಿತ್ವಗಳು ಇವು. ಇದು ನನ್ನ ಕೂದಲು ಬಿಳಿಯಾಗುವಂತೆ ಮಾಡಿದೆ ಎಂದು ಪ್ರಧಾನಿಯವರಿಗೆ ಹೇಳಿದರು. ಇದೇ ವೇಳೆ ಭಾರತದ ಹಿಂದಿನ ಇಂಗ್ಲೆಂಡ್ ಪ್ರವಾಸದ ನೆನಪನ್ನು ಹಂಚಿಕೊಂಡ ಮುಜುಂದಾರ್, ತಂಡಕ್ಕೆ ಕಿಂಗ್ ಚಾರ್ಲ್ಸ್ ಜೊತೆ ಛಾಯಾಚಿತ್ರ ತೆಗೆಯಲು ಅವಕಾಶ ನೀಡಿದಾಗ, ಶಿಷ್ಟಾಚಾರದ ಪ್ರಕಾರ ಒಂದೇ ಫ್ರೇಮ್‌ನಲ್ಲಿ ಒಮ್ಮೆ 20 ಜನರಿಗೆ ಮಾತ್ರ ಅವಕಾಶವಿತ್ತು. ಆಗ ಸಹಾಯಕ ಸಿಬ್ಬಂದಿಗೆ ಪೋಸ್ ನೀಡಲು ಸಾಧ್ಯವಾಗಲಿಲ್ಲ ಎಂದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net