ಈ ಹೊಸ ಇಂಧನ ವಿತರಣಾ ಜಾಲದ ವಿಸ್ತರಣೆಯ ಕುರಿತು ಮಾತನಾಡಿದ ಕೇಂದ್ರ ಸಚಿವರು, ಮುಂಬರುವ ಕೆಲವೇ ವಾರಗಳಲ್ಲಿ ದೇಶಾದ್ಯಂತ ಕನಿಷ್ಠ 50 ರಿಂದ 100 ಇ85 ಇಂಧನ ಮಾರಾಟ ಮಳಿಗೆಗಳು (ಡಿಸ್ಪೆನ್ಸಿಂಗ್ ಸ್ಟೇಷನ್) ಕಾರ್ಯಾರಂಭ ಮಾಡಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರಂಭಿಕ ಹಂತದಲ್ಲಿ ರಾಷ್ಟ್ರ ರಾಜಧಾನಿ ವಲಯ (NCR) ಮತ್ತು ಮಹಾರಾಷ್ಟ್ರದ ಪುಣೆ-ಮುಂಬೈ-ನಾಗ್ಪುರ ವಲಯಗಳಲ್ಲಿ ಈ ಮಳಿಗೆಗಳನ್ನು ಲಭ್ಯವಾಗುವಂತೆ ಮಾಡಲಾಗುವುದು. ಈ ವರ್ಷದ ಅಂತ್ಯದ ವೇಳೆಗೆ ಇಂತಹ ಮಳಿಗೆಗಳ ಸಂಖ್ಯೆಯನ್ನು 500 ಕ್ಕೆ ಹೆಚ್ಚಿಸಲು ಮತ್ತು 2027 ರ ಅಂತ್ಯದ ವೇಳೆಗೆ ದೇಶಾದ್ಯಂತ ಸರಿಸುಮಾರು 5,000 ಇ85 ಇಂಧನ ಮಾರಾಟ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಗುರಿ ಚಿಂತನೆ ನಡೆಸಿದೆ ಎಂದು ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ(ಏಜೆನ್ಸೀಸ್).