'ಹ್ಯಾಪಿ ಬರ್ತಡೇ ಧರ್ಮೇಂದ್ರ ಸರ್, ಪ್ಲೀಸ್ ರಿಸೈನ್ ಮಾಡಿ'; ಸಿಜೆಪಿ ಮುಖ್ಯಸ್ಥ ಅಭಿಜಿತ್​ ದೀಪ್ಕೆಯಿಂದ ಸ್ಪೆಷಲ್​ ವಿಶಸ್​..Abhijeet Dipke

Abhijeet Dipke Wishes Dharmendra Pradhan
Abhijeet Dipke Wishes Dharmendra Pradhan
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಅಭಿಜಿತ್​ ದೀಪ್ಕೆ ಹುಟ್ಟುಹಬ್ಬಕ್ಕೆ ಸ್ಪೆಷಲ್​ ಗಿಫ್ಟ್​ ಕೇಳಿದ ಸಿಜೆಪಿ ಮುಖ್ಯಸ್ಥ ಅಭಿಜಿತ್​ ದೀಪ್ಕೆ
  • 'ಪ್ಲೀಸ್ ರಾಜೀನಾಮೆ ಕೊಡಿ' ಎಂದು ಮನವಿ ಮಾಡಿಕೊಂಡ ಕಾಕ್ರೋಚ್​ ಜನತಾ ಪಾರ್ಟಿಯ ಮುಖ್ಯಸ್ಥ
  • ಕೇಂದ್ರ ಸರ್ಕಾರ ನಮ್ಮನ್ನು ಭಯೋತ್ಪಾದಕರಂತೆ ನೋಡುತ್ತಿದೆ ಎಂದು ಕಿಡಿ
ನವದೆಹಲಿ: ಕಾಕ್ರೋಚ್​ ಜನತಾ ಪಾರ್ಟಿಯ ಮುಖ್ಯಸ್ಥ ಅಭಿಜಿತ್​ ದೀಪ್ಕೆ, ಕೇಂದ್ರ ಸಚಿವ  ಧರ್ಮೇಂದ್ರ ಪ್ರಧಾನ್​ ಅವರಿಗೆ ವಿಶೇಷವಾಗಿ ವಿಶ್​ ಮಾಡಿ, ನಿಮ್ಮ ಹುಟ್ಟುಹಬ್ಬಕ್ಕೆ ನಮಗೆ ಸ್ಪೆಷಲ್​ ಗಿಫ್ಟ್​ ಕೊಡಿ ಎಂದು ಕೇಳಿಕೊಂಡಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.
ನೀಟ್​  ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ವಿಚಾರ, ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಉಂಟಾದ ವೈಫಲ್ಯವನ್ನು ಉಲ್ಲೇಖಿಸಿ, ಕಾಕ್ರೋಚ್​ ಜನತಾ ಪಾರ್ಟಿ ಜೂನ್​ 6ರಿಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಹೋರಾಟ ನಡೆಸುತ್ತಿದೆ. ಈ ಮಧ್ಯೆ ಅವರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಷಯ ಕೋರಿರುವುದು ಸಾಕಷ್ಟು ಗಮನಸೆಳೆದಿದೆ. 

ರಾಜೀನಾಮೆ ಕೊಡಿ ಸರ್....

ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ, ಸಿಬಿಎಸ್​​ಸಿ ಪರೀಕ್ಷೆಯಲ್ಲಿ ಉಂಟಾದ ಲೋಪದೋಷ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ಹೊಣೆಯನ್ನು ಹೊತ್ತು ಧರ್ಮೇಂಧ್ರ ಪ್ರಧಾನ್​ ಅವರು ರಾಜೀನಾಮೆ ನೀಡಬೇಕು ಜೂನ್​ 6ರಿಂದ  ಹೋರಾಟ ನಡೆಸುತ್ತಿದೆ.  ರಾಜೀನಾಮೆ ಕೊಡುವವರೆಗೂ ನಾವು ನಮ್ಮ ಪ್ರತಿಭಟನೆಯನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಸಿಜೆಪಿ ಮುಖ್ಯಸ್ಥ   ಅಭಿಜಿತ್​ ದೀಪ್ಕೆ ಈ ಹಿಂದೆ ಹೇಳಿದ್ದರು.
ವಿಡಿಯೋದಲ್ಲಿ ಏನಿದೆ?
ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ 57ನೇ ಹುಟ್ಟುಹಬ್ಬ. ಹೀಗಾಗಿ ಸಿಜೆಪಿ ಮುಖ್ಯಸ್ಥ ಅಭಿಜಿತ್​ ದೀಪ್ಕೆ ಹುಟ್ಟುಹಬ್ಬದ ಶುಭಾಷಯ ಕೋರಿದ್ದಲ್ಲದೆ, ಮತ್ತೊಂದು ಸ್ಪೆಷಲ್​ ಗಿಫ್ಟ್​ ಕೊಟ್ಟಿದ್ದಾರೆ. ವಾಟ್​ ಇಸ್​ ಯುವರ ಎಜುಕೇಶನ್​ ಎಕ್ಸ್​​ಪ್ರೆಸ್ ಯುವರ್​ ಐಡಿಯಾಸ್​ ಎಂದು ಉಲ್ಲೇಖವಾಗಿರುವ ವೈಟ್​ ಬೋರ್ಡ್​ ಮೇಲೆ ಅಭಿಜಿತ್​ ದೀಪ್ಕೆ ಹೀಗೆಂದು ಬರೆದರು, ಹ್ಯಾಪಿ ಬರ್ತಡೇ ಧರ್ಮೇಂದ್ರ ಪ್ರಧಾನ್​​ ಸರ್​​...ಪ್ಲೀಸ್​ ರಾಜೀನಾಮೆ ಕೊಡಿ ಎಂದು ಬರೆದ ನಂತರ ಮಾತನಾಡಿದರು.
ಧರ್ಮೇಂದ್ರ ಪ್ರಧಾನ್​ ಜೀ ನಿಮ್ಗೆ ಹುಟ್ಟು ಹಬ್ಬದ ಶುಭಾಷಯ. ಈ ದಿನ ದಯವಿಟ್ಟು ನಮಗೆ ಗಿಫ್ಟ್​ ಕೊಡಿ. ಅದುವೇ ರಾಜೀನಾಮೆ ಕೊಡುವ ಮೂಲಕ ನಮಗೊಂದು ಉಡುಗೊರೆ ಕೊಡಿ ಎಂದು ಕೇಳಿಕೊಂಡಿದ್ದಾರೆ. ನಾವು ನಿಮಗೆ ರಾಜೀನಾಮೆ ಕಳುಹಿಸಿದರೆ, ಅದರ ಮೇಲೆ ನಿಮ್ಮ ಹೆಬ್ಬೆರಳನ್ನು ಹೊತ್ತಿ ಸಾಕು ಎಂದಿದ್ದಾರೆ. ಇದಕ್ಕೆ ಅವರ ಸುತ್ತ ನೆರೆದಿದ್ದ ವಿದ್ಯಾರ್ಥಿಗಳು ಕೂಗಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. 

ಪ್ರಧಾನಿ ಮೋದಿ ವಿರುದ್ಧ ಕಿಡಿ

'ಪ್ರಧಾನಿ ಮೋದಿ ಅವರು ರಷ್ಯಾ ಮತ್ತು ಉಕ್ರೇನ್​ ಕದನವಿರಾಮಕ್ಕೆ ನಾನೇ ಕಾರಣ ಎಂದು ತಮ್ಮನ್ನು ತಾವೇ ಪ್ರಶಂಸಿಸಿಕೊಳ್ಳುತ್ತಾರೆ. ಆದರೆ, ಇಲ್ಲಿ  ಒಬ್ಬ ಸಚಿವರ ರಾಜೀನಾಮೆ ಪಡೆದುಕೊಳ್ಳಲಾಗುತ್ತಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆಯಾಗೋದನ್ನು ಅವರು ತಡೆಹಿಡಿದಿಲ್ಲ ಯಾಕೆ'  ಎಂದು ಕಿಡಿಕಾರಿದರು. 
'ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದಾಗಿ 17 ಅಭ್ಯರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಅವರ ಸಾವಿಗೆ ಹೊಣೆ ಯಾರು?.  ಧರ್ಮೇಂದ್ರ ಪ್ರಧಾನ್​ ಅವರು ಅಧಿಕಾರದಿಂದ ಕೆಳಗಿಳಿದರೆ, ಸರ್ಕಾರದೊಂದಿಗೆ ಮಾತನಾಡಲು ನಾವು ಸಿದ್ಧ. ಆದರೆ, ಸರ್ಕಾರ ಆ ಕ್ರಮವನ್ನು ಕೈಗೊಳ್ಳದೆ ನಾವು ಭಯೋತ್ಪಾದಕರು ಎನ್ನುವಂತೆ ನೋಡುತ್ತಿದ್ದಾರೆ' ಎಂದು ಗುಡುಗಿದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net