ಮಂಗಳವಾರ(ಆ. 25) ಸದನದಲ್ಲಿ ಮಾತನಾಡಿರುವ ಅವರು, ಕರ್ನಾಟಕ ಅರಣ್ಯ ಇಲಾಖೆ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ತಮಿಳು ಪುರುಷರು ಸಾವನ್ನಪ್ಪಿದ್ದು, ಮೃತ ಆಂಥೋನಿ ಸಮಿ, ಜಾನ್ ರೋಸ್ ಪೀಟರ್ ಮತ್ತು ಕುಮಾರ್ ಅವರ ಮರಣೋತ್ತರ ಪರೀಕ್ಷೆಯ ವರದಿಗಳು ಅವರನ್ನು ಬಹಳ ಹತ್ತಿರದಿಂದ ಚಿತ್ರಹಿಂಸೆ ನೀಡಿ ಗುಂಡು ಹಾರಿಸಲಾಗಿದೆ ಎಂದು ಸೂಚಿಸುತ್ತವೆ ಎಂದು ಆರೋಪಿಸಿದ್ದಾರೆ.