ವಾರಣಾಸಿ ಏರ್​​ಪೋರ್ಟ್​ನಲ್ಲಿ ಗುಂಡಿನ ಸದ್ದು: ಪ್ರಯಾಣಿಕನ ಪಿಸ್ತೂಲ್​ನಿಂದ ಫೈರಿಂಗ್​; ಇಬ್ಬರು ಸಿಬ್ಬಂದಿಗೆ ಗಾಯ! Gunshots in Varanasi Airport

ಪ್ರಯಾಣಿಕನ ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಘಟನೆ
ಪ್ರಯಾಣಿಕನ ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಘಟನೆ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಯಾಣಿಕನ ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಘಟನೆ
  • ವಾರಣಾಸಿ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರ್ಘಟನೆ
  • ಶಸ್ತ್ರಾಸ್ತ್ರ ಪರೀಕ್ಷೆ ವೇಳೆ ಇಬ್ಬರು ವಿಮಾನ ನಿಲ್ದಾಣ ಸಿಬ್ಬಂದಿಗಳಿಗೆ ಗಾಯ
ವಾರಣಾಸಿ: ಉತ್ತರ ಪ್ರದೇಶದ ಲಾಲ್​ ಬಹದ್ದೂರ್​ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Gunshots in Varanasi Airport) ದಲ್ಲಿ ಪ್ರಯಾಣಿಕನೊಬ್ಬ ತನ್ನ ಪಿಸ್ತೂಲ್​ನಿಂದ ಗುಂಡು ಹಾರಿಸಿದ ಘಟನೆ ನಡೆದಿದ್ದು, ಈ ಸಂದರ್ಭದಲ್ಲಿ ಇಬ್ಬರು ವಿಮಾನ ನಿಲ್ದಾಣ ಸಿಬ್ಬಂದಿ ಗಾಯಗೊಂಡಿದ್ದಾರೆ.
ಈ ಘಟನೆ ಸೋಮವಾರ (ಆ.16) ಬೆಳಿಗ್ಗೆ 9.30 ರ ಸುಮಾರಿಗೆ ಸಂಭವಿಸಿದ್ದು, ತಮ್ಮ ಪತ್ನಿ ಜತೆ ಆಗಮಿಸಿದ್ದ ವ್ಯಕ್ತಿಯೊಬ್ಬ ಏರ್​ ಇಂಡಿಯಾ ಎಕ್ಸ್​​ಪ್ರೆಸ್​​ ಮೂಲಕ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದ.
ವಿಮಾನ ಪ್ರಯಾಣಕ್ಕೂ ಮುನ್ನ ಶಸ್ತ್ರಾಸ್ತ್ರ ಪರೀಕ್ಷೆ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಆ ವ್ಯಕ್ತಿಯನ್ನು ಅಜಂಗಢದ ನಿವಾಸಿ, ಕಮಲೇಶ್​ ರೈ ಎಂದು ಗುರುತಿಸಲಾಗಿದ್ದು, ಮಾಹಿತಿ ಪ್ರಕಾರ ಇತ ತನ್ನ ಬಳಿ ಪಿಸ್ತೂಲ್​ಇದೆ ಎಂದು ಮೊದಲೇ ಘೋಷಿಸಿದ್ದಾರೆ.

ಪರವಾನಗಿ ಪಡೆದ ಪಿಸ್ತೂಲ್​ ಇದಾಗಿದೆ. ಆದರೆ ಪರೀಕ್ಷೆ ಸಂದರ್ಭದಲ್ಲಿ ಬಂದೂಕಿನಿಂದ ಗುಂಡು ಏಕಾಏಕಿ ಸಿಡಿದಿದೆ. ಮೊದಲ ಗುಂಡು ನೆಲಕ್ಕೆ ಬಡಿದರೆ, ಎರಡನೇ ಗುಂಡು ವಿಮಾನ ನಿಲ್ದಾಣದ ಪುರಷ ಸಿಬ್ಬಂದಿಯ ಕೈಗೆ ನುಗ್ಗಿದೆ, ಹಾಗೂ ಮೂರನೇ ಗುಂಡು ಮಹಿಳಾ ಸಿಬ್ಬಂದಿಯ ತೊಡೆಯನ್ನು ಸೀಳಿದೆ.


ಕೂಡಲೇ ಗಾಯಗೊಂಡ ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಕಮಲೇಶ್​ ರೈ ಹಾಗೂ ಆತನ ಬಂದೂಕನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಬಗ್ಗೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net