ಕಿಶ್ತ್ವಾರ್ ಜಿಲ್ಲೆಯಲ್ಲಿ 12,000 ಅಡಿ ಎತ್ತರದಲ್ಲಿ ಜೈಷ್-ಇ-ಮೊಹಮ್ಮದ್ ಉಗ್ರರ ಅಡಗುತಾಣವನ್ನು ಭದ್ರತಾ ಪಡೆಗಳು ಭೇದಿಸಿದ ಕೆಲವು ದಿನಗಳ ನಂತರ ಈ ಎನ್‌ಕೌಂಟರ್ ನಡೆದಿದೆ. ಈ ಅಡಗುತಾಣವು ಬಹು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಹೊಂದಿದ್ದು, ಏಕಕಾಲದಲ್ಲಿ ನಾಲ್ಕು ಉಗ್ರರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿತ್ತು. ಆಹಾರ, ಅಡುಗೆ ಅನಿಲ, ದೇಸಿ ತುಪ್ಪ, ಧಾನ್ಯಗಳು ಮತ್ತು ಕಂಬಳಿಗಳಂತಹ ಅಗತ್ಯ ವಸ್ತುಗಳು ಪತ್ತೆಯಾಗಿದ್ದವು (ಏಜೆನ್ಸೀಸ್).