ಮಗಳನ್ನು ಟ್ಯಾಂಕ್‌ನಲ್ಲಿ ಮುಳುಗಿಸಿ ಕೊಂದು, ತಾನೂ ಆ*ತ್ಮಹತ್ಯೆ ಮಾಡಿಕೊಂಡ ತಾಯಿ! Daughter

crime
crime
Published on
ಗುಜರಾತ್​​: ಗುಜರಾತ್‌ನ ಛೋಟಾ ಉದಯಪುರದಲ್ಲಿ ಮಹಿಳೆಯೊಬ್ಬರು ತನ್ನ ಮಗಳನ್ನು ( Daughter) ಬಾವಿಯಲ್ಲಿ ಮುಳುಗಿಸಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ತನಿಖೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೀಪಲ್ಸಾತ್ ಗ್ರಾಮದ ನಿವಾಸಿ ಸಂಗೀತಾ ಭಿಲ್ ತನ್ನ ಮಗಳ ಹಾಗೂ ಗಂಡನ ಜೊತೆ ವಾಸವಾಗಿದ್ದರು. ಪತಿ ಗಿರೀಶ್ ಹಾಲು ಖರೀದಿಸಲು ಹೋಗಿದ್ದರು. ಈ ವೇಳೆ ತನ್ನ ಎಂಟು ತಿಂಗಳ ಮಗಳನ್ನು ಮನೆಯ ಸಮೀಪವಿರುವ ತೆರೆದ ತೊಟ್ಟಿಯಲ್ಲಿ ಮುಳುಗಿಸಿ ಸಾಯಿಸಿದ್ದಾಳೆ.
ಗಿರೀಶ್ ಮನೆಗೆ ಬಂದು ನೋಡಿದಾಗ ಅವರ ಮಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಕಂಡುಬಂದಿದೆ, ಆದರೆ ಸಂಗೀತಾ ಎಲ್ಲೂ ಕಾಣಿಸಿಲ್ಲ. ಪತ್ನಿ ಕಾಣೆಯಾಗಿದ್ದಾಳೆ ನಮ್ಮ ಮಗಳು ಸಾವನ್ನೊಪ್ಪಿದ್ದಾಳೆಂದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮನೆಯಿಂದ ಸುಮಾರು 150 ಮೀಟರ್ ದೂರದಲ್ಲಿರುವ ಮರಕ್ಕೆ ನೇತಾಡುತ್ತಿರುವ ಸ್ಥಿತಿಯಲ್ಲಿ ಸಂಗೀತಾ ಅವರ ಶವ ಪತ್ತೆಯಾಗಿದೆ.
ಇಬ್ಬರೂ ಓಡಿಹೋಗಿ ವಿವಾಹವಾಗಿ ಜೀವನ ನಡೆಸುತ್ತಿದ್ದರು. ಕೌಟುಂಬಿಕ ಕಲಹದಿಂದಾಗಿ ಸಂಗೀತಾ ಒತ್ತಡಕ್ಕೊಳಗಾಗಿದ್ದಾಳೆ ಮತ್ತು ಆಕೆಯ ಪೋಷಕರು ಗಿರೀಶ್‌ನಿಂದ ಅವಳನ್ನು ದೂರವಿಡುತ್ತಾರೆ ಎಂದು ಭಯಭೀತಳಾಗಿದ್ದಳು ಎನ್ನಲಾಗಿದೆ.ಈ ಪ್ರಕರಣದ ತನಿಖೆ ಮುಂದುವರೆದಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net