

ವೈವಾಹಿಕ ಜೀವನದಲ್ಲಿ ಕಲಹ, ಹಲ್ಲೆ ಆರೋಪ ಆತ್ಮಹತ್ಯೆ ಮಾಡಿಕೊಂಡ ಗುಜರಾತಿನ ವ್ಯಕ್ತಿ.
ಹಾರಾಷ್ಟ್ರದ ಹರಿಶ್ಚಂದ್ರಗಢದಲ್ಲಿರುವ ಕೊಂಕಣಕಡಾ ಪ್ರಪಾತದಿಂದ ಹಾರಿ ಆತ್ಮಹತ್ಯೆ.
ಏಕಪಕ್ಷೀಯ ಕಾನೂನಿಂದ ಮುಗ್ಧ ಯುವಕರಿಗೆ ಸಮಸ್ಯೆಯಾಗುತ್ತಿದೆ ಎಂದು ವಿಡಿಯೋದಲ್ಲಿ ಉಲ್ಲೇಖ.
ನವ ದೆಹಲಿ: ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು, ಮಹಾರಾಷ್ಟ್ರದ ಹರಿಶ್ಚಂದ್ರಗಢದಲ್ಲಿರುವ 1,700 ಅಡಿ ಎತ್ತರದ ಅಡಿ ಎತ್ತರವಿರುವ ಕೊಂಕಣಕಡಾ ಪ್ರಪಾತದಿಂದ ಹಾರಿ ಪ್ರಾಣ ಕಳೆದುಕೊಂಡಿದ್ದ ಘಟನೆ ಎರಡು ದಿನದ ಹಿಂದೆ ವರದಿಯಾಗಿತ್ತು. ಸದ್ಯ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ತಿರುವೊಂದು ಸಿಕ್ಕಿದೆ.
ಹೌದು, ಗುಜರಾತ್ನ ಭಾವನಗರದ ನಿವಾಸಿ ವಿಶ್ವರಾಜ್ಸಿನ್ಹ್ ಮಯೂರ್ಸಿನ್ಹ್ ಗೋಹಿಲ್ (24) ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು, ಸಾಯುವುದಕ್ಕೂ ಮುನ್ನ ರೆಕಾರ್ಡ್ ಮಾಡಿದ್ದ 13 ನಿಮಿಷಗಳ ವೀಡಿಯೊದಲ್ಲಿ ವಿವಸಿರಿದ್ದಾರೆ. ಅವರ ಸಾವಿಗೆ ತಮ್ಮ ಮಾಜಿ ಪತ್ನಿ ಕಾರಣ ಹಾಗೂ ಕಾನೂನು ಬದಲಾವಣೆ ಬಗ್ಗೆ ಹಾಗೂ ಕೌಟುಂಬಿಕ ದೌರ್ಜನ್ಯ ಕಾಯ್ದೆಗಳ ದುರ್ಬಳಕೆ ಬಗ್ಗೆ ಮಾತನಾಡಿದ್ದಾರೆ.
ಪೋಸ್ಟ್ ಆಫೀಸ್ ಉದ್ಯೋಗಿ ವಿಶ್ವರಾಜ್ಸಿನ್ಹ್ ಮಯೂರ್ಸಿನ್ಹ್ ಗೋಹಿಲ್ (24) ಮತ್ತು ಪತ್ನಿ ಫೆಬ್ರವರಿ 8 ರಂದು ಮದುವೆಯಾಗಿದ್ದರು. ಆದರೆ, ಅವರ ದಾಂಪತ್ಯ ಜೀವನ ಸುಖವಾಗಿರಲಿಲ್ಲ. ಮದುವೆಯಾಗಿ ಎಂಟೇ ತಿಂಗಳಿಗೆ ಇಬ್ಬರು ದೂರವಾದರು. ಆಕೆ, ಸೆ.12ರಂದು ಹಿಂಸಾಚಾರದ ದೂರು ದಾಖಲಿಸಿದ್ದರು, ಇದಕ್ಕಾಗಿ ಅವರು ಅಕ್ಟೋಬರ್ 9 ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದೇ ನೋವಿನಲ್ಲಿ ಇದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
'ಇಂದು ನಾನು ಕಂದಕಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದೇನೆ. ಏನಾಯಿತು ಎಂದು ನೀವು ಆಶ್ಚರ್ಯ ಪಡುತ್ತಿರಬೇಕು?. ಜೀವನದಲ್ಲಿ ಏನೂ ಉಳಿದಿಲ್ಲ, ಭರವಸೆ ಇಲ್ಲ... ಮತ್ತು ಇದು ಒಳ್ಳೆಯ ಸಂಬಂಧವಿಲ್ಲ. ಮದುವೆಯು ಜೀವನದ ಒಂದು ಪ್ರಮುಖಘಟ್ಟ ಇದು ಜೀವನವಿಡೀ ಉಳಿಯುವ ಪವಿತ್ರ ಬಂಧನ ಎನ್ನಲಾಗುತ್ತದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ, ಇಬ್ಬರ ಆಲೋಚನೆ,ಸ್ವಭಾವ, ಅಭ್ಯಾಸ ಹೊಂದಿಕೆಯಾದಾಗ ಅಲ್ಲಿ ಸಂಘರ್ಷ ಮೂಡುವುದು ಸಹಜ, ನಂತರ ಡಿವೋರ್ಸ್ ಪಡೆದುಕೊಳ್ಳಲಾಗುತ್ತದೆ' ಎಂದಿದ್ದಾರೆ.
ಮುಂದುರೆದು, 'ಇಂತಹ ದುರ್ಘಟನೆ ನನ್ನ ಜೀವನದಲ್ಲಿಯೂ ಸಂಭವಿಸುತ್ತೆ ಎನ್ನುವುದನ್ನು ನಾನು ಊಹೆ ಮಾಡಿರಲಿಲ್ಲ. ನನ್ನ ತಾಯಿ ಮತ್ತು ನನ್ನ ಸಹೋದರ, ನಾನು ನನ್ನ ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದೇವೆ ಎಂದು ಕತೆ ಕಟ್ಟಿ, ಎಫ್ಐಆರ್ ದಾಖಲಿಸಲಾಗಿದೆ. ನನ್ನ ಮನೆಯಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಇದರಿಂದ ನಾನು ಮಾನಸಿಕ, ಆರ್ಥಿಕ ಮತ್ತು ಸಾಮಾಜಿಕ ಒತ್ತಡದಿಂದಾಗಿ ನಾನು ಸಾಯುತ್ತಿದ್ದೇನೆ ಎಂದಿದ್ದಾರೆ
'ಅವರ ಚಿನ್ನ ನಮ್ಮ ಬಳಿಯೇ ಇದೆ ಎಂದು ಅವರು ಹೇಳಿಕೊಳ್ಳುತ್ತಾರೆ. ಸತ್ಯ ಹೇಳಬೇಕೆಂದರೆ, ಆಕೆಯ ಪೋಷಕರು ಬಲವಂತವಾಗಿ ಆಕೆಯನ್ನು ಎಳೆದುಕೊಂಡು ಹೋಗುತ್ತಿದ್ದಾಗ, ಆಕೆಯೇ ತಾನು ಹೋಗಲು ಬಯಸುವುದಿಲ್ಲ ಎಂದು ಹೇಳಿದ್ದಳು. ನಮ್ಮ ಸಮುದಾಯದವರೇ ಇದಕ್ಕೆ ಸಾಕ್ಷಿ. ಆಕೆ ನಮ್ಮ ಚಿನ್ನವನ್ನು ಧರಿಸಿ ಹೊರಟುಹೋದಳು, ಆದರೆ ನಾವು ನಮ್ಮ ವಸ್ತುಗಳನ್ನು ಹಿಂತಿರುಗಿಸುವಂತೆ ಕೇಳಿದಾಗ ನಮ್ಮ ಮೇಲೆ ಆರೋಪ ಹೊರಿಸಿದರು' ಎಂದಿದ್ದಾರೆ.
ನನ್ನ ಮಾವ ನನ್ನ ಮಗ ಎಂದು ಕರೆದುಕೊಳ್ಳುತ್ತಿದ್ದರು. ಆದರೆ, ಯಾವುದೇ ತಂದೆ ಹೀಗೆ ಮಗನನ್ನು ಮಾನಸಿಕವಾಗಿ ಛಿದ್ರಗೊಳಿಸುತ್ತಾರೆಯೇ? ಸುಳ್ಳು ಪ್ರಕರಣ ದಾಖಲಿಸುತ್ತಾರೆಯೇ.ಒಬ್ಬ ತಂದೆ ಕ್ಷಮಿಸಿ ಅವನಿಗೆ ಅವಕಾಶ ನೀಡುತ್ತಾರೆ. ಆದರೆ, ಅವರು ಹಾಗೆ ನಡೆದುಕೊಂಡಿಲ್ಲ. ನಾನಿಂದು ಸಾಯುತ್ತಿದ್ದೇನೆ,.ನನ್ನ ಹೆತ್ತವರು, ನನ್ನ 16 ವರ್ಷದ ಕಿರಿಯ ಸಹೋದರನ ಗತಿ ಗತಿ ಏನಾಗುತ್ತದೆ ತಿಳಿದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸೆಕ್ಷನ್ 498A (ಕೌಟುಂಬಿಕ ಹಿಂಸೆ) ಒಳಗೊಂಡ ಶೇಕಡಾ 90 ರಿಂದ 92 ರಷ್ಟು ಪ್ರಕರಣಗಳು ಸುಳ್ಳು ಮತ್ತು ಕಟ್ಟುಕಥೆ ಎಂದು ನಿಮಗೆ ತಿಳಿದಿದೆಯೇ? ಯಾವುದೇ ಪುರಾವೆ ಅಥವಾ ಆಧಾರವಿಲ್ಲದೆ ಕೇವಲ ಮೌಖಿಕ ಆರೋಪಗಳ ಆಧಾರದ ಮೇಲೆ ಇದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ. ಇದು ಮಹಿಳೆಯ ಆಯುಧವಾದಾಗ ದುರುಪಯೋಗ ಪಡಿಸಿಕೊಳ್ಳಲಾಗುತ್ತದೆ.
ಕಾನೂನು ಸಂಪೂರ್ಣ ಏಕಪಕ್ಷೀಯವಾಗಿದೆ. ಇಂದಿನ ಜೆನ್ ಜೀ ಯುವಕರು ಮದುವೆ ಮಾಡಿಕೊಳ್ಳಲು ಹೆದರುತ್ತಿದ್ದಾರೆ.ಸೆಕ್ಷನ್ 498Aಯಿಂದ ಮುಗ್ಧ ಯುವಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಆಕೆಯ ಆರೋಪಗಳು ಸಾಬೀತಾಗಬೇಕು ಇದೇ ನನ್ನ ಸವಾಲು. ನನ್ನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ, (ಏಜೆನ್ಸೀಸ್).