ಗುಜರಾತ್: ಯೂರಿಯಾ, ಕಾಸ್ಟಿಕ್ ಸೋಡಾ ಬಳಸಿ ನಕಲಿ ಹಾಲು ತಯಾರಿಕೆ! ಪೊಲೀಸರ ದಾಳಿಯಲ್ಲಿ ಬಯಲಾಯ್ತು ಭಯಾನಕ ಸತ್ಯ | Milk

ನಕಲಿ ಹಾಲನ್ನು ತಯಾರುಸಿದ್ದ ಕಿರಾತಕರನ್ನು ಬಂಧಿಸಿದ ಪೊಲೀಸರು
ನಕಲಿ ಹಾಲನ್ನು ತಯಾರುಸಿದ್ದ ಕಿರಾತಕರನ್ನು ಬಂಧಿಸಿದ ಪೊಲೀಸರು
Published on

ಪ್ರಮುಖ ಮುಖ್ಯಾಂಶಗಳು

  • ಗುರಾತಿನಲ್ಲಿ ಕಲಬೆರಿಕೆ ಹಾಲು ತಯಾರಿಕೆ
  • ಐದು ಜನ ಆರೋಪಿಗಳ ಜತೆಗೆ ಸುಮಾರು 71 ಲಕ್ಷ ಮೌಲ್ಯದ ಕಚ್ಚಾವಸ್ತುಗಳ ವಶ
  • ಯೂರಿಯಾ, ಕಾಸ್ಟಿಕ್ ಸೋಡಾ ಮತ್ತು ಡಿಟರ್ಜೆಂಟ್ ಬಳಸಿ ನಕಲಿ ಹಾಲು ತಯಾರಿಸುತ್ತಿದ್ದ ಕಿರಾತಕರು
ಗುಜರಾತ್​: ಹಾಲನ್ನು ಕಲಿಯುಗದ ಅಮೃತವೆಂದು ಕರೆಯಲಾಗುತ್ತದೆ. ಹಾಲಿ (Milk) ನ ಉತ್ಪಾದನೆ ಅತ್ಯಂತ ಸರಳ ಪ್ರಕ್ರಿಯೆಯಾಗಿದ್ದು, ಇದರಲ್ಲಿ ರಾಕೆಟ್​​ ಸೈನ್ಸ್​ನ ಅಗತ್ಯವೇನು ಇರುವುದಿಲ್ಲ.
ಆದರೆ ಅಮೃತ ಸಮಾನವಾದ ಹಾಲವನ್ನು ಗುಜರಾತ್​ನ ಸಬರ್ಕಾಂತ ಜಿಲ್ಲೆಯಲ್ಲಿ ಸುಮಾರು ಐದು ವರ್ಷಗಳಿಂದ ರಹಸ್ಯವಾಗಿ ರಾಸಾಯನಿಕಗಳ ಮಿಶ್ರಣವನ್ನು ಬಳಸಿ ಸಂಶ್ಲೇಷಿತ ಹಾಲನ್ನು ತಯಾರಿಸಲಾಗುತ್ತಿದ್ದು, ಭಾನುವಾರ ನಡೆದ ಪೊಲೀಸ್​ ಕಾರ್ಯಾಚರಣೆಯಲ್ಲಿ ಈ ಕರ್ಮಕಾಂಡ ಬಯಲಾಗಿದೆ.
ಪೊಲೀಸರು ನಡೆಸಿದ ಈ ದಾಳಿಯಲ್ಲಿ ಒಬ್ಬ ಬಾಲಾಪರಾಧಿ ಸೇರಿ ಒಟ್ಟು ಐದು ಜನರ ಜತೆಗೆ ಸುಮಾರು 71 ಲಕ್ಷ ಮೌಲ್ಯದ ಕಚ್ಚಾ ಸಾಮಾನುಗಳನ್ನು ವಶಕ್ಕೆ ಪಡೆಯಲಾಗಿದೆ. ಹೀಗೆ ರಾಸಾಯನಿಕಗಳ ಮಿಶ್ರಣದಿಂದ ತಯಾರಾಗುತ್ತಿದ್ದ ಹಾಲನ್ನು ಸುತ್ತ ಮುತ್ತಲಿನ ಪಟ್ಟಣ ಮತ್ತು ಹಳ್ಳಿಗಳಿಗೆ ಸರಬರಾಜು ಮಾಡಲಾಗುತ್ತಿತ್ತೆಂದ ತಿಳಿದು ಬಂದಿದೆ.
ಕಲಬೆರಿಕೆ ಹಾಲನ್ನು ಮಾರಾಟ ಮಾಡುತ್ತಿರುವ ಕುರಿತು ನಿಖರ ಗುಪ್ತಚರ ಮಾಹಿತಿ ದೊರೆತ ಹಿನ್ನಲೆಯಲ್ಲಿ ಈ ಕಾರ್ಯಾಚರನೆ ನಡೆದಿದ್ದು, ದಾಳಿ ವೇಳೆ ಸ್ವಲ್ಪ ಪ್ರಮಾಣದ ನೈಜ ಹಾಲಿಗೆ ಯೂರಿಯಾ ಮತ್ತು ರಾಸಾಯನಿಕಗಳನ್ನು ಬೆರೆಸಿ ಕಲಬೆರಿಕೆ ಮಾಡಲಾಗುತ್ತಿತ್ತು ಎನ್ನುವುದು ತಿಳಿದು ಬಂದಿದೆ. ಈ ಘಟನೆಯು ಆರೋಗ್ಯ ಮತ್ತು ಗ್ರಾಹಕ ಸುರಕ್ಷತೆಯ ಬಗ್ಗೆ ಗಂಭೀರವಾದ ಕಳವಳವನ್ನು ಹುಟ್ಟುಹಾಕಿದೆ ಎಂದರೆ ತಪ್ಪಾಗದು.

ವಿಷಯುಕ್ತ ಹಾಲು ಹೇಗೆ ತಯಾರಾಗುತ್ತದೆ?

ಅಧಿಕಾರಿಗಳ ಪ್ರಕಾರ, ಘಟಕದ ಕಾರ್ಮಿಕರು ನಿಜವಾದ ಹಾಲಿನ ಬಣ್ಣ, ದಪ್ಪ ಮತ್ತು ಪ್ರೋಟೀನ್ ಮಟ್ಟವನ್ನು ಅನುಕರಿಸಲು ವಿವಿಧ ವಸ್ತುಗಳನ್ನು ಮಿಶ್ರಣ ಮಾಡುತ್ತಿದ್ದರು. ಕಾಸ್ಟಿಕ್ ಸೋಡಾ, ಡಿಟರ್ಜೆಂಟ್ ಮತ್ತು ರಸಗೊಬ್ಬರವನ್ನು 300 ಲೀಟರ್ ನೈಜ ಹಾಲನೊಟ್ಟಗೆ ಬರೆಸಿ ಸುಮಾರು 1,800 ಲೀಟರ್‌ಗಳಾಗಿ ಪರಿವರ್ತಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ತಯಾರಾದ ರಾಸಾಯನಿಕ ಹಾಲನ್ನು ಚಿಕ್ಕ-ಚಿಕ್ಕ ಪ್ಯಾಕೆಟ್​ಗಳಲ್ಲಿ ತುಂಬಿಸಿ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net