ಗುಜರಾತ್‌ನಲ್ಲಿ ಮೈ ಜುಂ ಎನಿಸುವ ಬೈಕ್ ಅಪಘಾತ: ನೀರು ತುಂಬಿದ ಗುಂಡಿಗೆ ಬಿದ್ದು ಹಾರಿಬಿದ್ದ ದಂಪತಿ; ಸರ್ಕಾರದ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು! Gujarat Bike Accident

ಜುನಾಗಢದಲ್ಲಿ ನೀರು ತುಂಬಿದ ರಸ್ತೆ ಗುಂಡಿಗೆ ಬೈಕ್ ಬಿದ್ದು ಹಾರಿಬಿದ್ದ ದಂಪತಿ
ಜುನಾಗಢದಲ್ಲಿ ನೀರು ತುಂಬಿದ ರಸ್ತೆ ಗುಂಡಿಗೆ ಬೈಕ್ ಬಿದ್ದು ಹಾರಿಬಿದ್ದ ದಂಪತಿ
Published on

ಪ್ರಮುಖ ಮುಖ್ಯಾಂಶಗಳು

  • ಜುನಾಗಢದಲ್ಲಿ ನೀರು ತುಂಬಿದ ರಸ್ತೆ ಗುಂಡಿಗೆ ಬೈಕ್ ಬಿದ್ದು ದಂಪತಿ ಹಾರಿಬಿದ್ದ ಭೀಕರ ವಿಡಿಯೋ ವೈರಲ್!
  • ರಸ್ತೆಯಲ್ಲಿ ಗುಂಡಿಯೋ ಅಥವಾ ಗುಂಡಿಯಲ್ಲಿ ರಸ್ತೆಯೋ?
  • ಮುಂಬೈನಲ್ಲಿ ಮ್ಯಾನ್‌ಹೋಲ್‌ಗೆ ಬಿದ್ದು ವೃದ್ಧ ಸಾವು
ಗುಜರಾತ್​: ಮಳೆಗಾಲ ಪ್ರಾರಂಭವಾಗುತ್ತಿದಂತೆ ದೇಶದಲ್ಲಿ ರಸ್ತೆ ಅವಗಢಗಳ ಸಂಖ್ಯೆ ಹೆಚ್ಚಾಗ ತೊಡಗಿದೆ. ನೀರು ತುಂಬಿದ್ದ ಗುಂಡಿಯೊಂದಕ್ಕೆ ಬೈಕ್​ ಬಿದ್ದ ಪರಿಣಾಮ ದಂಪತಿಗಳಿಬ್ಬರೂ ತೀವ್ರವಾಗಿ ಗಾಯಗೊಂಡಿರುವ ಘಟನೆ ಗುಜರಾತಿನ (Gujarat Bike Accident) ಜುನಾಗಢನಲ್ಲಿ ವರದಿಯಾಗಿದೆ.
ನಿನ್ನೆ (ಗುರುವಾರ, ಜು.2) ಮುಂಬೈನಲ್ಲಿ ತೆರೆದ ಒಳಚರಂಡಿಗೆ ಬಿದ್ದು ವೃದ್ಧನೊಬ್ಬ ಮೃತಪಟ್ಟ ನಂತರ ದೇಶದಲ್ಲಿ ವರದಿಯಾದ ಎರಡನೇ ಘಟನೆ ಇದಾಗಿದೆ.

ಬೈಕ್​ನಿಂದ ಹಾರಿಬಿದ್ದ ದಂಪತಿ!

ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್​ (ಟ್ವಿಟರ್​) ನಲ್ಲಿ ಹಂಚಿಕೆಯಾದ ವಿಡಿಯೋನಲ್ಲಿ ದಂಪತಿಗಳು ನಮ್ಮ ಬೈಕ್​ನಲ್ಲಿ ಸಾಗುತ್ತಿದ್ದಾರೆ. ನಗರದಲ್ಲಿ ಮಳೆ ಜೋರಾಗಿದ್ದ ಕಾರಣ ರಸ್ತೆಯಲ್ಲಿದ್ದ ಗುಂಡಿಯಲ್ಲಿ ನೀರು ತುಂಬಿಕೊಂಡಿದೆ.
ನೀರು ತುಂಬಿಕೊಂಡ ಹಿನ್ನಲೆ ಹುಂಡಿಯನ್ನು ಗುರುತಿಸುವಲ್ಲಿ ವಿಫಲನಾದ ಬೈಕ್​ ಸವಾರ, ಗುಂಡಿಕೆ ಬೈಕ್​ ನುಗ್ಗಿಸಿದ ಪರಿಣಾಮ ಬೈಕ್​ನಿಂದ ದಂಪತಿಗಳು ಹಾರಿ ಬಿದ್ದಿದ್ದಾರೆ. ಕೂಡಲೇ ರಕ್ಷಣೆಗೆ ಕೆಲ ಸಾರ್ವಜನಿಕರು ಬಂದಿದ್ದು, ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆಂದು ತಿಳಿದುಬಂದಿದೆ.

ಸಾರ್ವಜನಿಕರ ಆಕ್ರೋಶ!

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ಜನರ ತಾಳ್ಮೆಯ ಕಟ್ಟೆ ಒಡೆದು ಹೋಗಿದೆ. ನಮ್ಮ ದೇಶದಲ್ಲಿ ದಿನಾಲೂ ಈ ರೀತಿಯ ಘಟನೆ ಖಾಯಂ ನಡೆಯುತ್ತಿದೆ. ಇದಕ್ಕೆಲ್ಲಾ ಹೊಣೆ ಯಾರೆಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ.
ಈ ಘಟನೆಯಲ್ಲಿ ಕೇವಲ ಗಾಯವಾಗಿದೆ, ಒಂದು ವೇಳೆ ಪ್ರಾಣ ಹೋಗಿದ್ದರೆ ಮುಖ್ಯಮಂತ್ರಿಗಳು ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಿರಾ ಎಂದು ಇನ್ನೊಬ್ಬರು ಕೇಳಿದ್ದಾರೆ. ನಮ್ಮ ದೇಶದಲ್ಲಿ ರಸ್ತೆಯಲ್ಲಿ ಗುಂಡಿಯಲ್ಲ, ಗುಂಡಿಯಲ್ಲಿ ರಸ್ತೆ ಇರುತ್ತದೆ ಎಂದು ಮತ್ತೊಬ್ಬರು ವ್ಯಂಗ್ಯವಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮುಂಬೈನಲ್ಲಿ ಮುದಕನ ಬಲಿ

ಮುಂಬೈನಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆ ಬಾಯಿತೆರೆದಿದ್ದ ಒಳಚರಂಡಿಗೆ ವ್ಯಕ್ತಿಯೊಬ್ಬ ಬಿದ್ದು ಮೃತಪಟ್ಟಿರುವ ಘಟನೆ ಮುಂಬೈನ ಚಾಂಡಿ ವಾಲಿ ಪ್ರದೇಶದಲ್ಲಿ ಗುರುವಾರ (ಜು.2) ವರದಿಯಾಗಿದೆ.
ರಾಜ್ಯದಲ್ಲಿ ಭೀಕರ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಮ್ಯಾನ್​ಹೋಲ್​ ತೆರೆದಿರುವುದು ವ್ಯಕ್ತಿಯ ಗಮನಕ್ಕೆ ಬಂದಿಲ್ಲ. ಒಳಚರಂಡಿಯಲ್ಲಿ ಬಿದ್ದ ವ್ಯಕ್ತಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾಗಿ ತಿಳಿದು ಬಂದಿದೆ.
ಘಟನೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ, ಸ್ಥಳಕ್ಕೆ ದಾವಿಸಿದ ರಕ್ಷಣಾ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ಒಳಚರಂಡಿಯಲ್ಲಿ ಇಳಿದು ಮೃತ ವ್ಯಕ್ತಿಯ ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಮೃತ ವ್ಯಕ್ತಿಯನ್ನು 60 ವರ್ಷದ ಅಸ್ಲಂ ಶೇಖ್​​ ಎಂದು ಗುರುತಿಸಲಾಗಿದೆ.
ಈ ಅನಾಹುತ ನಡೆಯಲು ಗುತ್ತಿಗೆದಾರನೇ ಕಾರಣ ಎಂದು ಹೇಳಲಾಗುತ್ತಿದ್ದು, ಗುತ್ತಿಗೆದಾರನ ವಿರುದ್ಧ ಪ್ರಕರಣವನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುತ್ತೆವೆಂದು ಪಾಲಿಕೆ ಉಪ ಮೇಯರ್​​ ಸಂಜಯ್ ಘಾಡಿ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net