ಕಿಡ್ನಿ, ಲಿವರ್ ಫೇಲ್ ಆಗೋದು ಗ್ಯಾರಂಟಿ: 1,400 ಕೆಜಿ ನಕಲಿ ಪನೀರ್​ ಮುಟ್ಟುಗೋಲು ಹಾಕಿದ ಸೂರತ್​ ಪೊಲೀಸ್​! Fake Paneer

 ಪಾಮ್ ಆಯಿಲ್ ಮತ್ತು ರಾಸಾಯನಿಕ ಬಳಸಿ ತಯಾರಿಸಲಾಗುತ್ತಿದ್ದ 1,400 ಕೆಜಿ ನಕಲಿ ಪನೀರ್ ಜಪ್ತಿ
ಪಾಮ್ ಆಯಿಲ್ ಮತ್ತು ರಾಸಾಯನಿಕ ಬಳಸಿ ತಯಾರಿಸಲಾಗುತ್ತಿದ್ದ 1,400 ಕೆಜಿ ನಕಲಿ ಪನೀರ್ ಜಪ್ತಿ
Published on

ಪ್ರಮುಖ ಮುಖ್ಯಾಂಶಗಳು

  • ಸೂರತ್‌ನಲ್ಲಿ ಪೊಲೀಸರ ಭರ್ಜರಿ ದಾಳಿ
  • ಪಾಮ್ ಆಯಿಲ್ ಮತ್ತು ರಾಸಾಯನಿಕ ಬಳಸಿ ತಯಾರಿಸಲಾಗುತ್ತಿದ್ದ 1,400 ಕೆಜಿ ನಕಲಿ ಪನೀರ್ ಜಪ್ತಿ
  • ಈ ಪನೀರ್​ ತಿಂದರೆ ಕಿಡ್ನಿ ಲಿವರ್​ ಡಮಾರ್​!
ಸೂರತ್​: ಭಾರತದಲ್ಲಿ ದೊರೆಯುವ ಆಹಾರ ಪದಾರ್ಥಗಳ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಜನ ಸಾಮಾನ್ಯರು ಪ್ರತಿದಿನ ಉಪಯೋಗಿಸುವ ಆಹಾರ ವಸ್ತುಗಳಲ್ಲಿ ಕಲಬೆರಿಕೆ ಪ್ರಮಾಣ ಹೆಚ್ಚುತ್ತಿದೆ.
ಕೆಲ ದಿನಗಳ ಹಿಂದೆ ಗುಜರಾತಿನ ಸೂರತ್​ನಲ್ಲಿ, ಸೂರತ್​ ಪೊಲೀಸರು ಮತ್ತು ಆಹಾರ ಸುರಕ್ಷತಾ ಪಡೆಗಳು ನಡೆಸಿದ ಜಂಟಿದಾಳಿಯಲ್ಲಿ ಸುಮಾರು 1,400 ಕಿ.ಲೋ ನಕಲಿ ಪನೀರ್ ​(Fake Paneer) ನ್ನು ಜಪ್ತಿಮಾಡಿದ ಘಟನೆ ವರದಿಯಾಗಿದೆ.
ಪಾಂಡೇಸರಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಪನೀರ್ (ಕಾಟೇಜ್ ಚೀಸ್) ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು ಸುಮಾರು 28 ಲಕ್ಷ ಮೌಲ್ಯದ ಪನೀರ್​ನ್ನು ಮುಟ್ಟುಗೋಲು ಹಾಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ನಕಲಿ ಪನೀರ್​ನ್ನು ಪಾಮ್​ ಎಣ್ಣೆ ಮತ್ತು ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗುತ್ತಿದ್ದು, ಇದನ್ನು ಸುತ್ತ-ಮುತ್ತಲಿನ ಸ್ಥಳೀಯ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಆರೋಗ್ಯ ಸುರಕ್ಷತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಕಲಿ ಹಾಲಿನಿಂದ ನಕಲಿ ಪನೀರ್​!

ಜಪ್ತಿಯಾಗಿರುವ ಪನೀರ್​ನ್ನು ಮಾಡಲು ನಕಲಿ ಹಾಲನ್ನು, ಕನಿಷ್ಟ ದರ್ಜೆಯ ಮೊಸರು ಮತ್ತು ಕೊಳೆತ ಲಿಂಬೆಹಣ್ಣನ್ನು ಬಳಕೆ ಮಾಡುತ್ತಿದ್ದಾಗಿ ದಾಳಿ ವೇಳೆ ತಿಳಿದುಬಂದಿದೆ. ಈ ವಿಷಪೂರಿತ ಪನೀರ್​ನ್ನು ಜನ ಸೇವಿಸಿದರೆ, ಹೃದಯ, ಲಿವರ್​ ಮತ್ತು ಕಿಡ್ನಿ ವೈಫಲ್ಯದಂತ ಗಂಭೀರ ಸಮಸ್ಯೆಗಳು ಜನರಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದು ಆರೋಗ್ಯಾಧಿಕಾರಿಗಳ ಅಭಿಪ್ರಾಯವಾಗಿದೆ.

ನೈರ್ಮಲ್ಯತೆ ಎನ್ನುವುದೇ ಇಲ್ಲ

ಪೊಲೀಸರು ಮತ್ತು ಆರೋಗ್ಯ ಸುರಕ್ಷತಾಧಿಕಾರಿಗಳು ನಡೆಸಿದ ಪ್ರದೇಶವು ಕೊಳಚೆ ಪ್ರದೇಶಕ್ಕಿಂತ ಕನಿಷ್ಟವಾಗಿದ್ದು, ಪರಮ ಗಲೀಜಿನಿಂದ ಕೂಡಿರುವ ಕೋಣೆಯಲ್ಲಿ ಈ ನಕಲಿ ಪನೀರ್​ನ್ನು ತಯಾರಿಸಲಾಗುತ್ತಿದ್ದದ್ದು ತಿಳಿದುಬಂದಿದೆ.
ಸದ್ಯ ಈ ನಕಲಿ ಪನೀರ್​ ಉತ್ಪಾದನಾ ಘಟಕಕ್ಕೆ ಬೀಗ ಜಡಿಯಲಾಗಿದ್ದು, ಘಟಕದ ಮಾಲೀಕನ ವಿರುದ್ಧ ಆಹಾರ ಸುರಕ್ಷತಾ ನಿಯಮಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net