ಮದುವೆ ಮಂಟಪದಿಂದ ಓಡಿದ ವರ, ರಸ್ತೆಯಲ್ಲಿ ಬೆನ್ನಟ್ಟಿದ ವಧು! ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ ಈ ವಿಡಿಯೋ.. Kaithal Wedding

Kaithal Wedding  (ಚಿತ್ರ X)
Kaithal Wedding (ಚಿತ್ರ X)
Published on
ಹರಿಯಾಣ: ಮದುವೆ ಮನೆ ಎಂದರೆ ಸಂಭ್ರಮ, ಸಡಗರ, ಗಟ್ಟಿಮೇಳದ ಸದ್ದು ಇರಬೇಕು. ಆದರೆ ಹರಿಯಾಣದ ಕೈಥಾಲ್ ಜಿಲ್ಲೆಯಲ್ಲಿ ನಡೆದ ವಿಚಿತ್ರ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಆದಾಗ್ಯೂ, ಮದುವೆ ಶಾಸ್ತ್ರಗಳು ನಡೆಯುತ್ತಿದ್ದಾಗಲೇ ವರನಿಗೆ ಬಂದ ಒಂದು (Kaithal Wedding) ಅಪರಿಚಿತ ಫೋನ್ ಕಾಲ್​ನಿಂದ ವರ ಮಂಟಪದಿಂದಲೇ ಕಾಲ್ಕಿತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಒಂದು ಫೋನ್ ಕಾಲ್, ಬದಲಾದ ಚಿತ್ರಣ!

ವರದಿಗಳ ಪ್ರಕಾರ, ಕೈಥಾಲ್‌ನಲ್ಲಿ ಮದುವೆ ಸಮಾರಂಭ ಅತ್ಯಂತ ವೈಭವದಿಂದ ಜರುಗುತ್ತಿತ್ತು. ಇನ್ನೇನು ಕೆಲವೇ ಕ್ಷಣಗಳಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ಅದೇ ವೇಳೆಗೆ ವರನ ಮೊಬೈಲ್‌ಗೆ ಒಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ, ನೀನು ಮದುವೆಯಾಗುತ್ತಿರುವ ಹುಡುಗಿ ನನ್ನ ಮಾಜಿ ಪ್ರೇಯಸಿ ಎಂದು ಹೇಳಿದ್ದಾನೆ. ಅಷ್ಟಕ್ಕೇ ನಿಲ್ಲಿಸದ ಆ ವ್ಯಕ್ತಿ, ಅದಕ್ಕೆ ಸಾಕ್ಷಿಯಾಗುವಂತೆ ಕೆಲವು ಖಾಸಗಿ ಫೋಟೋಗಳನ್ನು ಕಳುಹಿಸಿದ್ದಾನೆ ಎನ್ನಲಾಗಿದೆ.

ಫೋಟೋ ನೋಡಿ ಮಂಟಪದಿಂದಲೇ ಓಡಿದ ವರ!

ಮೊಬೈಲ್‌ನಲ್ಲಿ ಬಂದ ಫೋಟೋಗಳನ್ನು ನೋಡುತ್ತಿದ್ದಂತೆ ದಿಗ್ಭ್ರಮೆಗೊಂಡ ವರ, ಮದುವೆ ಶಾಸ್ತ್ರಗಳನ್ನು ಅರ್ಧಕ್ಕೆ ನಿಲ್ಲಿಸಿ ಅಲ್ಲಿಂದ ದಿಢೀರನೆ ಓಡಲು ಪ್ರಾರಂಭಿಸಿದ್ದಾರೆ. ವರ ದಿಕ್ಕಾಪಾಲಾಗಿ ಓಡುತ್ತಿರುವುದನ್ನು ಗಮನಿಸಿದ ಅತಿಥಿಗಳು ಆಶ್ಚರ್ಯಚಕಿತರಾಗಿದ್ದಾರೆ.

ವರನ ಬೆನ್ನಟ್ಟಿದ ವಧು ಮತ್ತು ಕುಟುಂಬಸ್ಥರು

ವರ ಓಡುತ್ತಿರುವುದನ್ನು ಕಂಡ ವಧು ಮತ್ತು ಆಕೆಯ ಕುಟುಂಬಸ್ಥರು ಹಾಗೂ ಮದುವೆಗೆ ಬಂದಿದ್ದ ಅತಿಥಿಗಳು ವರನನ್ನು ಹಿಡಿಯಲು ಬೆನ್ನತ್ತಿ ಓಡುತ್ತಿರುವ ವಿಡಿಯೋ ಅಲ್ಲಿನ ಜನರ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ಈಗ ಈ ಇಡೀ ಹೈಡ್ರಾಮಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net