ಪೊಲೀಸ್ ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದ ಸೀಮಾ, "ಸಾಹೇಬ್ರೇ, ನನ್ನ ಜೀವನ ಹಾಳಾಗುತ್ತದೆ. ಆತ ಮಾಡಿರುವ ಅಪರಾಧಗಳ ಬಗ್ಗೆ ನನಗೆ ತಿಳಿಯದು. ಮನೆಯಲ್ಲಿ ಅತಿಥಿಗಳು ಕಾಯುತ್ತಿದ್ದಾರೆ, ಹಳದಿ ಶಾಸ್ತ್ರ ಮುಗಿದಿದೆ. ದಯವಿಟ್ಟು ಕೇವಲ ಎರಡು ಗಂಟೆಗಳ ಕಾಲ ನನ್ನ ಪತಿಯನ್ನು ಬಿಟ್ಟುಬಿಡಿ, ಮದುವೆ ವಿಧಿವಿಧಾನಗಳನ್ನು ಮುಗಿಸುತ್ತೇವೆ," ಎಂದು ಅಂಗಲಾಚಿದ್ದಾಳೆ. ಪೊಲೀಸರು ಇದಕ್ಕೆ ಒಪ್ಪದಿದ್ದಾಗ, "ಕನಿಷ್ಠ ಪೊಲೀಸ್ ವಶದಲ್ಲಾದರೂ ನಮಗೆ ಮದುವೆ ಮಾಡಿಕೊಳ್ಳಲು ಅವಕಾಶ ಕೊಡಿ" ಎಂದು ವಿನಂತಿಸಿದ್ದಾಳೆ. ಆದರೆ ಪೊಲೀಸರು ಈ ಯಾವುದೇ ಬೇಡಿಕೆಗೆ ಮಣಿಯದೆ ಆಕಾಶ್‌ನನ್ನು ಜೈಲಿಗಟ್ಟಿದ್ದಾರೆ.