Gratuity: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಹೊಸ ಕಾರ್ಮಿಕ ಸಂಹಿತೆಗಳು ಉದ್ಯೋಗಿಗಳ ವೇತನ ಶ್ರೇಣಿ, ಕೆಲಸದ ಅವಧಿ ಮತ್ತು ನಿವೃತ್ತಿ ಸೌಲಭ್ಯಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ತರುತ್ತಿವೆ. ಈ ಪೈಕಿ ಅತ್ಯಂತ ಪ್ರಮುಖವಾದುದು 'ಗ್ರಾಚ್ಯುಟಿ' (Gratuity) ಪಾವತಿಯ ನಿಯಮ. ಒಂದು ಸಂಸ್ಥೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಉದ್ಯೋಗಿಗೆ ಕಂಪನಿಯು ನೀಡುವ ಕೃತಜ್ಞತಾ ಧನವೇ ಗ್ರಾಚ್ಯುಟಿ. ಆದರೆ, ಹೊಸ ನಿಯಮಗಳ ಪ್ರಕಾರ, ನೀವು ಕೆಲಸ ಬಿಡುವ ಸಮಯ ಸ್ವಲ್ಪ ವ್ಯತ್ಯಾಸವಾದರೂ ನಿಮ್ಮ ಕೈಸೇರಬೇಕಾದ ಲಕ್ಷಾಂತರ ರೂಪಾಯಿ ಗ್ರಾಚ್ಯುಟಿ ಹಣ ಕೈತಪ್ಪಿ ಹೋಗಬಹುದು.