ಅಸಭ್ಯ, ಅಶ್ಲೀಲ ಪದಗಳ ಬಳಕೆಯನ್ನು ಕೇಳುವ ಕೆಲವರು, ಸಭ್ಯರು ಇರುವ ಸ್ಥಳದಲ್ಲಿ ಇಂತಹ ಬೈಗುಳಗಳನ್ನು ಸಂಪೂರ್ಣವಾಗಿ ನಿಲ್ಲಿಸಿ ಎಂದು ಪದ ಬಳಕೆ ಮಾಡುವವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೋಗಿ, ನೇರ ಕಪಾಳಕ್ಕೆ ಎರಡು ಕೊಟ್ಟು ಅಂಥವರ ಬಾಯಿ ಮುಚ್ಚಿಸುತ್ತಾರೆ. ಆದರೆ, ಇಲ್ಲೊಂದು ರಾಜ್ಯದ ಗ್ರಾಮದಲ್ಲಿ ತಮ್ಮ ಊರಿನ ಜನರು, ಒಂದೇ ಒಂದು ಕೆಟ್ಟ ಪದ ಬಳಸಿದ್ದು ಅಥವಾ ಆಡಿದ್ದು ಗೊತ್ತಾದರೆ, ಅವರಿಗೆ 500 ರೂ. ದಂಡ, ಇಲ್ಲವೇ 1 ಗಂಟೆಗಳ ಕಾಲ ಕ್ಲೀನಿಂಗ್ ಕೆಲಸವೇ ಶಿಕ್ಷೆಯಾಗಿದೆ.