ಬಿಕ್ಕಟ್ಟಿನ ಬೆನ್ನಲ್ಲೇ ಬಿಗ್ ರಿಲೀಫ್: ಅಡುಗೆ ಅನಿಲದ ಒತ್ತಡ ತಗ್ಗಿಸಲು ಸೀಮೆಎಣ್ಣೆ ಭಾಗ್ಯ! LPG crisis

 LPG crisis (ಸಾಂದರ್ಭಿಕ ಚಿತ್ರ)
LPG crisis (ಸಾಂದರ್ಭಿಕ ಚಿತ್ರ)
Published on
ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಎಲ್‌ಪಿಜಿ ( LPG crisis) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಬಿಕ್ಕಟ್ಟನ್ನು ಎದುರಿಸುವ ಸಲುವಾಗಿ ಕೇಂದ್ರ ಸರ್ಕಾರ ಸೀಮಿತ ಅವಧಿಗೆ ಮನೆಗಳಿಗೆ ಸೀಮೆಎಣ್ಣೆ  ಪೂರೈಕೆ ಮಾಡಲು ನಿರ್ಧರಿಸಿದೆ.
ಈ ತಾತ್ಕಾಲಿಕ ವ್ಯವಸ್ಥೆಯಡಿಯಲ್ಲಿ, ಅಡುಗೆ ಮತ್ತು ಮೂಲಭೂತ ಬೆಳಕಿನ ಅಗತ್ಯಗಳನ್ನು ಪೂರೈಸುವ ಸಲುವಾಗಿ 60 ದಿನಗಳವರೆಗೆ ಸೀಮೆಎಣ್ಣೆಯನ್ನು ವಿತರಿಸಲಾಗುತ್ತದೆ. ವಿಶೇಷವಾಗಿ ಬಡ ಕುಟುಂಬಗಳಿಗೆ, ಎಲ್​ಪಿಜಿ ಮೇಲೆ ಅವಲಂಬಿಸಿದವರೆಗೆ ಇಂಧನ ಬಳಕೆಯಲ್ಲಿ  ಯಾವುದೇ ತೊಂದರೆಗಳು ಆಗದಂತೆ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಧಿಕಾರಿಗಳು ಆಯ್ದ ಪೆಟ್ರೋಲ್ ಪಂಪ್‌ಗಳ ಮೂಲಕ ಈ ಸೌಲಭ್ಯವನ್ನು ಒದಗಿಸಲು ನಿರ್ಧರಿಸಿದ್ದಾರೆ. ಆದಾಗ್ಯೂ, ಪ್ರತಿ ಜಿಲ್ಲೆಯಲ್ಲಿ ತಲಾ ಎರಡು ಪೆಟ್ರೋಲ್ ಪಂಪ್‌ಗಳನ್ನು ಸೀಮೆಎಣ್ಣೆ ಪೂರೈಕೆಗಾಗಿ ಪ್ರತ್ಯೇಕವಾಗಿ ಗೊತ್ತುಪಡಿಸಲಾಗುತ್ತದೆ.
ಈ ಹಿಂದೆ ಪಿಡಿಎಸ್ ವ್ಯವಸ್ಥೆಯಡಿಯಲ್ಲಿ ಸೀಮೆಎಣ್ಣೆ ಮುಕ್ತ ಎಂದು ಘೋಷಿಸಲ್ಪಟ್ಟ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಈಗ ಕೇಂದ್ರ ಸರ್ಕಾರವು ಸೀಮೆಎಣ್ಣೆ ಹಂಚಿಕೆಯನ್ನು ಪುನಃ ವಿಸ್ತರಿಸಲು ನಿರ್ಧರಿಸಿದೆ. ಈ ಕುರಿತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. 

ಹಾರ್ಮುಜ್ ಬಿಕ್ಕಟ್ಟು: ಎಲ್‌ಪಿಜಿ ಪೂರೈಕೆ ಖಚಿತಪಡಿಸಿದ ಭಾರತ

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಅಸ್ಥಿರತೆ ಮತ್ತು ಜಾಗತಿಕ ಇಂಧನ ಪೂರೈಕೆ ಮಾರ್ಗಗಳಲ್ಲಿ ಹೆಚ್ಚುತ್ತಿರುವ ಅಡತಡೆಗಳ ನಡೆವೆಯೂ ಭಾರತವು ತನಗೆ ಬೇಕಾದ ಇಂಧನ ಸಂಪೂನ್ಮೂಲಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾರ್ಮುಜ್ ಜಲಸಂಧಿಯ ಸುತ್ತ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಹಲವಾರು ದೇಶಗಳು ಸಂದಿಗ್ಧತೆ ಎದುರಿಸುತ್ತಿದ್ದರೂ, ಭಾರತದ ಪೂರೈಕೆ ಮಾರ್ಗಗಳು ಸದ್ಯಕ್ಕೆ ಸ್ಥಿರವಾಗಿವೆ.
ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಎಲ್​ಪಿಜಿ ಸಾಗಿಸುತ್ತಿದ್ದ ಎರಡು ಭಾರತೀತ ಧ್ವಜ ಹೊತ್ತ ಹಡಗುಗಳು  ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ. ಇರಾನ್ ಮತ್ತು ಇರಾನ್​ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ಈ ಪ್ರದೇಶದಲ್ಲಿನ ಸಮುದ್ರ ಸಂಚಾರದ ಮೇಲೆ ಪರಿಣಾಮ ಬೀರಿರುವ ಸಮಯದಲ್ಲಿ ಇದು ಸಂಭವಿಸಿದೆ.
'ಬಿಡಬ್ಲ್ಯೂ ಟಿವೈಆರ್' (BW Tyr) ಮತ್ತು 'ಬಿಡಬ್ಲ್ಯೂ ಇಎಲ್‌ಎಂ' (BW Elm) ಎಂಬ ಎರಡು ಬೃಹತ್ ಸರಕು ನೌಕೆಗಳು ಒಟ್ಟು ಸುಮಾರು 94,000 ಟನ್ ಅಡುಗೆ ಅನಿಲವನ್ನು ಹೊತ್ತು ಭಾರತದತ್ತ ಸಾಗುತ್ತಿವೆ.  ಅಧಿಕೃತ ಮೂಲಗಳ ಪ್ರಕಾರ ಬಿಡಬ್ಲ್ಯೂ ಟಿವೈಆರ್ ಮುಂಬೈ ಬಂದರಿನತ್ತ ಮುನ್ನುಗ್ಗುತ್ತಿದ್ದು, ಮಾರ್ಚ್ 31ರೊಳಗೆ ತಲುಪುವ ನಿರೀಕ್ಷೆ ಇದೆ. ಹಾಗೆಯೇ ಬಿಡಬ್ಲ್ಯೂ ಇಎಲ್‌ಎಂ ಏಪ್ರಿಲ್ 1 ರಂದು ನವಮಂಗಳೂರಿನಲ್ಲಿ ಡಾಕ್ ಮಾಡಲು ನಿರ್ಧರಿಸಲಾಗಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net