ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಚಿನ್ನ ಖರೀದಿಸುವ ದೇಶಗಳಲ್ಲಿ ಒಂದಾಗಿದೆ. ಇಲ್ಲಿ ಚಿನ್ನವನ್ನು ಕೇವಲ ಆಭರಣವಾಗಿ ಮಾತ್ರವಲ್ಲದೆ ಭವಿಷ್ಯದ ಉಳಿತಾಯದ ನಿಧಿಯಾಗಿಯೂ ನೋಡಲಾಗುತ್ತದೆ. ಆದರೆ ಉದ್ಯಮ ಸಂಸ್ಥೆಗಳ ಪ್ರಕಾರ, ಇದು ದೇಶದಲ್ಲಿ ಬಳಕೆಯಾಗದ ಚಿನ್ನವಾಗಿ ಉಳಿದುಬಿಡುತ್ತದೆ. ಆದ್ದರಿಂದ, ಹೊಸ ಪ್ರಸ್ತಾವಿತ ನಿಯಮಾವಳಿಗಳ ಪ್ರಕಾರ, ದೇಶಾದ್ಯಂತ ಇರುವ ಚಿನ್ನದ ವ್ಯಾಪಾರಿಗಳನ್ನು ಈ ಯೋಜನೆಯಲ್ಲಿ ಕಲೆಕ್ಷನ್ ಪಾರ್ಟ್‌ನರ್ಸ್ ಆಗಿ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ.