ಸರ್ಕಾರಿ ಆಸ್ಪತ್ರೆಯೋ ಅಥವಾ ಸಾವಿನ ಮನೆಯೋ? ವೈದ್ಯರ ಅಭಾವ; ಗಾಯಾಳುವಿಗೆ ಹೊಲಿಗೆ ಹಾಕಿದ ಸೆಕ್ಯೂರಿಟಿ ಗಾರ್ಡ್​! Security Guard Become Surgeon

ಸರ್ಜನ್ ಆಗಿ ಬದಲಾದ ಸೆಕ್ಯೂರಿಟಿ ಗಾರ್ಡ್​
ಸರ್ಜನ್ ಆಗಿ ಬದಲಾದ ಸೆಕ್ಯೂರಿಟಿ ಗಾರ್ಡ್​
Published on

ಪ್ರಮುಖ ಮುಖ್ಯಾಂಶಗಳು

  • ಸರ್ಜನ್ ಆಗಿ ಬದಲಾದ ಸೆಕ್ಯೂರಿಟಿ ಗಾರ್ಡ್​
  • ಬಿಹಾರಾದ ಬಗಾಹಾದಲ್ಲಿ ನಡೆದಿರುವ ಘಟನೆ
  • ಆಸ್ಪತ್ರೆಯಲ್ಲಿ ವೈದ್ಯರ ಅಭಾವ; ಸ್ಟಿಚ್​ ಹಾಕಿದ ಸೆಕ್ಯೂರಿಟಿ
  • ಬಿಹಾರದ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 49 ರಷ್ಟು ವೈದ್ಯರ ಕೊರತೆ
ಬಿಹಾರ್​: ಬಾಲಿವುಡ್​ ನಟ ಸಂಜಯ್​ ದತ್ ಅಭಿನಯದ ಜನಪ್ರೀಯ ಸಿನಿಮಾ ಎಂದರೆ ಅದು, ಮುನ್ನಾ ಭಾಯ್​ ಎಂಬಿಬಿಎಸ್​. ಈ ಸಿನಿಮಾದಲ್ಲಿ ಸಂಜಯ್​ ದತ್ ರೌಡಿಯಾಗಿದ್ದರೂ ತನ್ನ ತಂದೆಯ ಮುಂದೆ ಡಾಕ್ಟರ್​ ಎಂಬಂತೆ, ಆಸ್ಪತ್ರೆ ನಡೆಸುತ್ತಿರುವಂತೆ ತೋರಿಸಿ ಕೊಳ್ಳಯತ್ತಾನೆ. ಮಾನವೀಯ ಸಂಬಂಧ ಹಾಗೂ ಹಾಸ್ಯಭರಿತವಾಗಿದ್ದ ಈ ಸಿನಿಮಾವನ್ನು ವೀಕ್ಷಕರು ಸಖತ್​ ಎಂಜಾಯ್​ ಮಾಡಿದ್ದರು.
ಈಗ ಇದೇ ರೀತಿಯ ಘಟನೆಯೊಂದು ಬಿಹಾರದ ಬಗಾಹಾದಲ್ಲಿ ನಡೆದಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಅಲಭ್ಯವಿದ್ದ ಕಾರಣ ಸೆಕ್ಯೂರಿಟಿ ಗಾರ್ಡ್​ ಶಸ್ತ್ರ ಚಿಕಿತ್ಸೆ (Security Guard Become Surgeon) ಕೈಗೊಂಡ ಘಟನೆ ವರದಿಯಾಗಿದೆ.

ಡಾಕ್ಟರ್​ ಇಲ್ಲ ಮತ್ತೇನು ಮಾಡುವುದು?

ಈ ವೈರಲ್​ ಘಟನೆಯು ಬಗಾನಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಇಲ್ಲಿ ವೈದ್ಯರ ಶಾರ್ಟೆಜ್​ಇದ್ದು ತುರ್ತಾಗಿ ಯಾವುದೇ ರೋಗಿ ಆಸ್ಪತ್ರೆಗೆ ದಾಖಲಾದರೆ ಪರೀಕ್ಷಿಸಲು ವೈದ್ಯರೇ ಇಲ್ಲದಂತಾಗಿದೆ.
ಇದೇ ಸಂದರ್ಭದಲ್ಲಿ ಒಬ್ಬ ರೋಗಿ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ಬಂದಿದ್ದಾನೆ, ತೀವ್ರವಾಗಿ ಗಾಯಗೊಂಡಿದ್ದ ಆತನ ನೋವನ್ನು ನೋಡಲಾಗದ ಸೆಕ್ಯೂರಿಟಿ ಗಾರ್ಡ್​ ಕೆಲಸದಲ್ಲಿ ನಿರತನಾಗಿದ್ದ ವ್ಯಕ್ತಿ ಆಪರೇಷನ್​ ಕೋಣೆಗೆ ಬಂದು ಗಾಯಗೊಂಡವರಿಗೆ ಹೊಲಿಗೆ ಹಾಕಿ, ಚಿಕಿತ್ಸೆ ನೀಡಿದ್ದಾನೆ.

ಹೆಚ್ಚು ಕಡಿಮೆ ಯಾಗಿದ್ದರೆ ಯಾರು ಹೊಣೆ?

ಸೆಕ್ಯೂರಿಟಿ ಗಾರ್ಡ್​ನಿಂದ ಚಿಕಿತ್ಸೆ ಪಡೆದ ವಾಸಿಮ್​ ಅಕ್ರಂ ಮತ್ತು ಸುರೇಂದ್ರ ಪಾಸಿ ಎಂಬ ರೋಗಿಗಳು, ನಾವು ಅಫಘಾತಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದೆವು, ಆಗ ವೈದ್ಯರೂ ಸಹ ಇದ್ದರು. ಆದರೆ ನಮ್ಮ ಗಾಯಕ್ಕೆ ಹೊಲಿಗೆ ಹಾಕಲು ಸೆಕ್ಯೂರಿಟಿ ಗಾರ್ಡ್​ ಬಂದಿದ್ದಾನೆ. ದೇವರ ಪುಣ್ಯದಲ್ಲಿ ನಮಗೆ ಏನು ಆಗಿಲ್ಲ, ಆದರೆ ಒಂದುವೇಳೆ ನಮ್ಮ ಪ್ರಾಣಕ್ಕೆ ಕುತ್ತು ಬಂದಿದ್ದರೆ ಯಾರು ಹೊಣೆ ಹೊತ್ತು ಕೊಳ್ಳುತ್ತಿದ್ದರೆಂದು ಅವರು ಪ್ರಶ್ನೆ ಮಾಡಿದ್ದಾರೆ.

ಬಿಹಾರದಲ್ಲಿ ಶೇ. 49 ರಷ್ಟು ವೈದ್ಯರ ಕೊರತೆಯಿದೆ

ಈ ಘಟನೆ ವಿಡಿಯೋಗಳು ಸೋಷಿಯಲ್​ ಮೀಡಿಯಾನಲ್ಲಿ ಹರಿದಾಡಲು ಶುರು ಮಾಡಿದ ನಂತರ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಡಾ. ಅಶೋಕ್​ ಕುಮಾರ್ ತಿವಾರಿ ಅವರಿಗೆ ಘಟನೆ ಕುರಿತು ವಿವರಣೆ ಕೇಳಲಾಗಿದೆ.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ತಿವಾರಿ, ಕೇವಲ ನಮ್ಮ ಆಸ್ಪತ್ರೆ ಮಾತ್ರವಲ್ಲ ಬಿಹಾರದಲ್ಲಿರುವ ಎಲ್ಲಾ ಆಸ್ಪತ್ರೆಗಳು ಅರ್ಧದಷ್ಟು ಸಿಬ್ಬಂದಿಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ. ಸಿಎಜಿ ವರದಿ ಪ್ರಕಾರ, ಬಿಹಾರದಲ್ಲಿ ಶೇ.49 ರಷ್ಟು ಸಿಬ್ಬಂದಿ ಕೊರೆತೆಯಿದೆ. ಅಂದರೆ ಪ್ರತಿ 2,148 ಜನರಿಗೆ ಒಬ್ಬ ವೈದ್ಯರಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 1,000 ಜನರಿಗೆ ಒಬ್ಬ ವೈದ್ಯರಿರಬೇಕೆಂದು ಹೇಳಲಾಗುತ್ತದೆ ಎಂದು ತಿವಾರಿ ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net