ಅಷ್ಟೇ ಅಲ್ಲದೆ, ಸ್ಥಳೀಯ ಬಹರಾಂಪುರ ಕೇಂದ್ರ ಕಾರಾಗೃಹದ ಸಾಮರ್ಥ್ಯ ಕೇವಲ 4,800 ಜನರನ್ನು ಹಿಡಿಯುವಷ್ಟಿದೆ ಎಂದು ವ್ಯಂಗ್ಯವಾಡಿದ್ದ ಕಬೀರ್, ನಾವು ಹತ್ತು ಸಾವಿರ ಜನರನ್ನು ಕರೆದುಕೊಂಡು ರಸ್ತೆಗಿಳಿಯುತ್ತೇವೆ, ಜೈಲು ತುಂಬಿಸುತ್ತೇವೆ. ನೀವು ನಮ್ಮನ್ನು ಎಷ್ಟು ದಿನ ಜೈಲಿನಲ್ಲಿಟ್ಟು ಊಟ ಹಾಕುತ್ತೀರಾ ನೋಡೋಣ ಎಂದು ಸವಾಲು ಹಾಕಿದ್ದರು. ಜೊತೆಗೆ, ಚುನಾವಣೆಗೂ ಮುನ್ನ ತಮ್ಮ ಸೋದರಸಂಬಂಧಿಯನ್ನು ಬಂಧಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಕಾಲರ್ ಪಟ್ಟಿ ಹಿಡಿದು ಠಾಣೆಯಿಂದ ಹೊರಗೆಳೆಯುವುದಾಗಿಯೂ ಬೆದರಿಕೆ ಹಾಕಿದ್ದರು.