ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ; ಇಂದಿನಿಂದಲೇ ಸ್ಕಾಚ್​-ವಿಸ್ಕಿ, ಐಷಾರಾಮಿ ಕಾರು, ಕಾಸ್ಮೆಟಿಕ್ಸ್​​​ ಬೆಲೆಯಲ್ಲಿ ಇಳಿಕೆ..India-UK

India-UK FTA Whisky and Scotch cars get cheaper from today
India-UK FTA Whisky and Scotch cars get cheaper from today
Published on

ಪ್ರಮುಖ ಮುಖ್ಯಾಂಶಗಳು

  • ಯುಕೆ ಮತ್ತು ಭಾರತದ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಅಧಿಕೃತ ಜಾರಿ
  • ಇಂದಿನಿಂದ ಕಾರು, ವಿಸ್ಕಿ, ಸ್ಕಾಚ್​​ ಹಾಗೂ ಬ್ಯೂಟಿ ಪ್ರಾಡಕ್ಟ್ದ್​​ ಬೆಲೆಯಲ್ಲಿ ಇಳಿಕೆ
  • ಈ ಒಪ್ಪಂದದಿಂದಾಗಿ ಬ್ರಿಟಿಷ್ ಪ್ರಜೆಗಳಿಗೂ ಭಾರತದ ಶೇ.99ರಷ್ಟು ಪ್ರಾಡಕ್ಟ್ಸ್​ ಕಡಿಮೆ ಬೆಲೆಯಲ್ಲಿ ಸಿಗಲಿದೆ
ನವದೆಹಲಿ: ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವಿನ ಮುಕ್ತ ವ್ಯಾಪಾರ ಆರ್ಥಿಕ ಒಪ್ಪಂದವು ಅಧಿಕೃತವಾಗಿ ಇಂದಿನಿಂದ(ಜು.15)ರಿಂದ ಜಾರಿಯಾಗಿದೆ. ಎರಡೂ ರಾಷ್ಟ್ರಗಳು ಆಮದು ಮತ್ತು ರಫ್ತಿನ ಮೇಲೆ ವಿಧಿಸಲಾಗಿದ್ದ ಸುಂಕವನ್ನು ಗಣನೀಯವಾಗಿ ಕಡಿಮೆ ಮಾಡಿರುವ ಪರಿಣಾಮ, ಯುಕೆಯಿಂದ ಆಮದು ಮಾಡಿಕೊಳ್ಳುವ ಹಲವಾರು ಉತ್ಪನ್ನಗಳು ಈಗ ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತವೆ.
ಕಳೆದ ವರ್ಷ ಪ್ರಧಾನಿ ಮೋದಿ ಅವರು ಯುಕೆ ತೆರಳಿದ್ದಾಗ ಈ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿತ್ತು. 2030ರ ಒಳಗಾಗಿ ಉಭಯ ರಾಷ್ಟ್ರಗಳ ವಾಣಿಜ್ಯ ವಹಿವಾಟನ್ನು ಬರೋಬ್ಬರಿ 100 ಬಿಲಿಯನ್​ ಡಾಲರ್​ಗೆ ಹೆಚ್ಚಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ ಎನ್ನಲಾಗಿದೆ.

ಚಾಕೋಲೇಟ್​​, ಕಾರು ಎಲ್ಲವೂ ಅಗ್ಗ

ಸದ್ಯ ಬ್ರಿಟನ್​ನಿಂದ ಆಮದು ಮಾಡಿಕೊಳ್ಳಲಾಗುವ ಐಷಾರಾಮಿ ಚಾಕೋಲೇಟ್​ ಹಾಗೂ ಸ್ಕಾಚ್​, ವಿಸ್ಕಿ ಹಾಗೂ ಸೌಂದರ್ಯಕ್ಕೆ ಸಂಬಂಧಿಸಿದ ಪ್ರಾಡಕ್ಟ್​, ಕಾರಿನ ಬೆಲೆ ಕಡಿಮೆಯಾಗಲಿದೆ. ಭಾರತೀಯರು ವಿದೇಶಿಯ ಬಿಸ್ಕೇಟ್​, ಗಡಿಯಾರ, ಚಾಕೋಲೇಟ್ ಹಾಗೂ ಕಾರಿಗೆ ದುಬಾರಿ ತೆರಿಗೆ ಕಟ್ಟಬೇಕಿತ್ತು. ಆದರೆ ಇನ್ಮುಂದೆ ಆ ಸಮಸ್ಯೆ ಇರೋದಿಲ್ಲ...ಕ್ರಮೇಣವಾಗಿ ಗ್ರಾಹಕರ ಮೇಲೆ ಬಿದ್ದಿದ್ದ ಹೊರೆ ಕಡಿಮೆಯಾಗಲಿದೆ.

ವಿಸ್ಕಿ ಹಾಗೂ ಸ್ಕಾಚ್​ ಪ್ರಿಯರಿಗೆ ಗುಡ್​ನ್ಯೂಸ್​​

ಮುಕ್ತ ವ್ಯಾಪಾರ ಒಪ್ಪಂದದಿಂದ ಬ್ರಿಟಿಷ್ ಸ್ಕಾಚ್ ಮತ್ತು ವಿಸ್ಕಿ ಉದ್ಯಮಕ್ಕೆ ಭಾರಿ ಪ್ರಮಾಣದಲ್ಲಿ ಲಾಭವಾಗಲಿದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಹೇಳಿದೆ. ಸದ್ಯ ಭಾರತಕ್ಕೆ ಆಮದು ಮಾಡಿಕೊಳ್ಳುವ ಸ್ಕಾಚ್ ಮತ್ತು ವಿಸ್ಕಿ ಮೇಲೆ ಶೇಕಡಾ 150 ರಷ್ಟು ಭಾರಿ ಆಮದು ಸುಂಕವನ್ನು ವಿಧಿಸಲಾಗುತ್ತಿದೆ.
ಆದರೆ, ಈ ಹೊಸ ಒಪ್ಪಂದದ ಅಡಿಯಲ್ಲಿ ಈ ಸುಂಕವನ್ನು ಮುಂದಿನ ಹತ್ತು ವರ್ಷದಲ್ಲಿ ಶೇಕಡಾ 40 ಕ್ಕೆ ಇಳಿಸಲಾಗುತ್ತದೆ. ಸದ್ಯ ಶೇ.75ಕ್ಕೆ ಇಳಿಸಲಾಗಿದೆ. ಇದರ ಪರಿಣಾಮವಾಗಿ, ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸ್ಕಾಚ್ ವಿಸ್ಕಿ ಮತ್ತು ಇತರ ಬ್ರಿಟಿಷ್ ವಿಸ್ಕಿಗಳ ಬೆಲೆಗಳು ಗಣನೀಯವಾಗಿ ಅಗ್ಗವಾಗಲಿವೆ.

ಐಷಾರಾಮಿ ಕಾರು ಈಗ ಅಗ್ಗದ ಬೆಲೆಗೆ

ಯುಕೆಯಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ಪ್ರೀಮಿಯಂ ಕಾರುಗಳಿಗೆ ಶೇ.110 ತೆರಿಗೆ ಕಟ್ಟಬೇಕಾದ ಸಂದರ್ಭವಿತ್ತು. ಆದರೆ, ಇನ್ಮುಂದೆ ಹಂತ ಹಂತವಾಗಿ ಶೇ.10ಕ್ಕೆ ಇಳಿಕೆ ಮಾಡಲಾಗುತ್ತದೆ. ಇದರ ಲಾಭ ಎಲೆಕ್ಟ್ರಿಕ್​​ ವಾಹನಗಳಿಗೂ ಸಿಗಲಿದೆ ಎನ್ನಲಾಗಿದೆ. ಬ್ರಿಟನ್​ನ ಐಷಾರಾಮಿ ಕಾರುಗಳಾದ ಲ್ಯಾಂಡ್ ರೋವರ್, ಆಸ್ಟನ್ ಮಾರ್ಟಿನ್, ಜಾಗ್ವಾರ್, ರೋಲ್ಸ್ ರಾಯ್ಸ್ ಮತ್ತು ಡಿಫೆಂಡರ್ ಕಾರುಗಳು ಭಾರತೀಯರಿಗೆ ಇನ್ನೂ ಕಡಿಮೆ ಬೆಲೆಗೆ ಸಿಗಲಿದೆ.

ಸೌಂದರ್ಯವರ್ಧಕ ಪ್ರಾಡಕ್ಟ್ಸ್​ ಬೆಲೆ ಇಳಿಕೆ

ಬ್ರಿಟನ್​ನಿಂದ ಆಮದಾಗುತ್ತಿದ್ದ ಕಾಸ್ಮೆಟಿಕ್ಸ್​, ಬ್ಯೂಟಿ ಪ್ರಾಡಕ್ಟ್ಸ್​​​ಗಳ ಮೇಲಿನ ಆಮದು ಸುಂಕ ಪ್ರಸ್ತುತ ಶೇ.22ರಷ್ಟು ಇದೆ. ಇದನ್ನು ತಕ್ಷಣಕ್ಕೆ ಜಾರಿ ಬರುವಂತೆ ರದ್ದು ಪಡಿಸಲಾಗುವುದು ಅಥವಾ ಮುಂದಿನ 10 ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ಶೂನ್ಯಕ್ಕೆ ತರಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತದ ವಸ್ತುಗಳಿಗೆ ಶೂನ್ಯ ಸುಂಕ

ಈ ವ್ಯಾಪಾರ ಒಪ್ಪಂದದಿಂದಾಗಿ ಭಾರತದ ರಫ್ತುದಾರರಿಗೂ ಬಂಪರ್​ ಕೊಡುಗೆ ಸಿಕ್ಕಂತಾಗಿದೆ. ಭಾರತದಿಂದ ಯುಕೆಗೆ ರಫ್ತಾಗುವ ಶೇ.99 ವಸ್ತುಗಳಿಗೆ ಶೂನ್ಯ ಸುಂಕ ವಿಧಿಸಲಾಗಿದೆ. ಇದರಿಂದಾಗಿ ಜವಳಿ ವ್ಯಾಪಾರಿಗಳು ಶೇ.10, ರಾಸಾಯನಿಕ ಶೇ.8, ಲೋಹದ ಶೇ.12 ಸುಂಕ ಪಾವತಿ ಮಾಡಬೇಕಾಗಿತ್ತು. ಇದರಿಂದಾಗಿ ಬ್ರಿಟಿಷ್​ ಪ್ರಜೆಗಳಿಗೆ ಇಲ್ಲಿನ ಉಡುಪು, ಪಾದರಕ್ಷೆ ಸೇರಿದಂತೆ ಇತರ ವಸ್ತುಗಳು ಕೈಗೆಟುಕುವ ದರದಲ್ಲಿ ಸಿಗಲಿದೆ.

ಭಾರತ ಮತ್ತು ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಪ್ರಮುಖ ಮಾಹಿತಿ
ಯಾವುದರ ಬೆಲೆ ಇಳಿಕೆಯಾಗಲಿದೆ?

  • ಬ್ರಿಟನ್​ನಿಂದ ಆಮದಾಗುವ ಸ್ಕಾಚ್​ ಮತ್ತು ವಿಸ್ಕಿ ಮೇಲೆ ಇದ್ದ ಶೇ.150ರಷ್ಟು ಸುಂಕವನ್ನು ಶೇಕಡಾ 40 ಕ್ಕೆ ಇಳಿಸಲು ನಿರ್ಧಾರ.
  • ಕೋಟಾ ವ್ಯವಸ್ಥೆಯಡಿ ಐಷಾರಾಮಿ ಕಾರುಗಳ ಮೇಲಿನ ಆಮದು ಸುಂಕವನ್ನು ಶೇಕಡಾ 100 ರಿಂದ ಶೇಕಡಾ 10 ಕ್ಕೆ ಕಡಿತ. ಮೊದಲ ವರ್ಷದಲ್ಲಿ 20,000 ವಾಹನಗಳನ್ನು ರಿಯಾಯಿತಿ ಸುಂಕದ ಅಡಿಯಲ್ಲಿ ಆಮದು ಮಾಡಿಕೊಳ್ಳಬಹುದು.

  1. 3,000cc ಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ (ಪೆಟ್ರೋಲ್) ಮತ್ತು 2,500cc ಗಿಂತ ಹೆಚ್ಚಿನ ಸಾಮರ್ಥ್ಯದ (ಡೀಸೆಲ್) 10,000 ಕಾರುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 110 ರಿಂದ ಶೇಕಡಾ 30 ಕ್ಕೆ ಇಳಿಸಲಾಗುವುದು.
  2. 1,500cc ಇಂದ 3,000cc ನಡುವಿನ ಎಂಜಿನ್ ಸಾಮರ್ಥ್ಯ ಹೊಂದಿರುವ 5,000 ಕಾರುಗಳ ಮೇಲಿನ ಸುಂಕವನ್ನು ಶೇಕಡಾ 66 ರಿಂದ ಶೇಕಡಾ 50 ಕ್ಕೆ ಇಳಿಸಲಾಗುವುದು.
  3. ಮುಂಬರುವ 15 ವರ್ಷಗಳಲ್ಲಿ ಈ ಸುಂಕಗಳನ್ನು ಕ್ರಮೇಣವಾಗಿ ಶೇಕಡಾ 10 ಕ್ಕೆ ಇಳಿಸಲಾಗುತ್ತದೆ.

ಕಾಸ್ಮೆಟಿಕ್ಸ್​ ಬೆಲೆ ಇಳಿಕೆ

ಬ್ರಿಟನ್​ನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು ಬ್ಯೂಟಿ ಪ್ರಾಡಕ್ಟ್ಸ್​ ಬೆಲೆಯೂ ಕಡಿಮೆಯಾಗುವ ನಿರೀಕ್ಷೆ ಇದೆ.

ಸುಂಕ ಮುಕ್ತ ಭಾರತ

ಪ್ರಸ್ತುತ ಈ ಉತ್ಪನ್ನಗಳ ಮೇಲೆ ಶೇಕಡಾ 22 ರವರೆಗೆ ಆಮದು ಸುಂಕವಿದ್ದು, ಇದನ್ನು ತಕ್ಷಣವೇ ರದ್ದುಗೊಳಿಸಲಾಗುವುದು ಅಥವಾ ಮುಂದಿನ 10 ವರ್ಷಗಳ ಅವಧಿಯಲ್ಲಿ ಕ್ರಮೇಣ ಶೂನ್ಯಕ್ಕೆ (0%) ಇಳಿಸಲಾಗುವುದು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net