ಅಭರಣ ಪ್ರಿಯರಿಗೆ ಗುಡ್​ ನ್ಯೂಸ್​: ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಇಳಿಕೆ..! Gold- Silver Price Drop

ಅಭರಣ ಪ್ರಿಯರಿಗೆ ಗುಡ್​ ನ್ಯೂಸ್​: ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಇಳಿಕೆ..!
ಅಭರಣ ಪ್ರಿಯರಿಗೆ ಗುಡ್​ ನ್ಯೂಸ್​: ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಇಳಿಕೆ..!
Published on
ನವದೆಹಲಿ: ದೇಶದಲ್ಲಿ ಬಜೆಟ್ ಮಂಡನೆಯಾದ ಬೆನ್ನಲ್ಲೇ ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದ್ದರೆ, ಭಾರಿ ಬೆಲೆ ಏರಿಕೆಯ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರಿಗೆ ದೊಡ್ಡ ಆಘಾತ ಎದುರಾಗಿದೆ. ಸೋಮವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ (Gold- Silver Price Drop)ಬೆಲೆಗಳು ಅಕ್ಷರಶಃ ನೆಲಕಚ್ಚಿವೆ. ಕೇವಲ ಮೂರೇ ದಿನಗಳಲ್ಲಿ ಬೆಳ್ಳಿ ಬೆಲೆ ತನ್ನ ದಾಖಲೆಯ ಗರಿಷ್ಠ ಮಟ್ಟದಿಂದ ಬರೋಬ್ಬರಿ 1.5 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚು ಕುಸಿತ ಕಂಡಿದೆ.

ಬೆಲೆ ಇಳಿಕೆಯ ಪ್ರಮುಖ ಅಂಕಿ-ಅಂಶಗಳು

ಚಿನ್ನ: ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಫೆಬ್ರವರಿ ಡೆಲಿವರಿಯ ಚಿನ್ನದ ಬೆಲೆ ಸುಮಾರು ₹5,719 ಇಳಿಕೆಯಾಗಿ ₹1,36,498 ಕ್ಕೆ ತಲುಪಿದೆ. ಇನ್ನು ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ಪ್ರಕಾರ, 10 ಗ್ರಾಂ ಚಿನ್ನದ ಬೆಲೆ ₹1,65,500 ಕ್ಕೆ ಇಳಿಕೆಯಾಗಿದೆ.
ಬೆಳ್ಳಿ: ಬೆಳ್ಳಿಯ ಬೆಲೆಯಲ್ಲಿ ಸುನಾಮಿಯೇ ಎದ್ದಿದೆ. ಒಂದೇ ದಿನದಲ್ಲಿ ₹23,908 (9%) ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಕೆಜಿ ಬೆಳ್ಳಿ ₹2,41,744 ಕ್ಕೆ ಕುಸಿದಿದೆ. ದೆಹಲಿ ಮಾರುಕಟ್ಟೆಯಲ್ಲಿ ಒಂದೇ ದಿನ ₹72,500 ಇಳಿಕೆಯಾಗಿ ₹3,12,000 ಕ್ಕೆ ಬಂದು ನಿಂತಿದೆ.

ಇಂದಿನ ಮಾರುಕಟ್ಟೆ ದರಗಳು (ಫೆ.2)

ಸೋಮವಾರ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಹೀಗಿದೆ.
24 ಕ್ಯಾರೆಟ್ ಚಿನ್ನ: 10 ಗ್ರಾಂಗೆ ಸುಮಾರು ₹1,51,530 (ಇದು ಹಿಂದಿನ ವಾರ ₹1,80,000 ದಾಟಿತ್ತು).
22 ಕ್ಯಾರೆಟ್ ಚಿನ್ನ: 10 ಗ್ರಾಂಗೆ ಸುಮಾರು ₹1,38,900.
ಬೆಳ್ಳಿ: ಪ್ರತಿ ಕೆಜಿಗೆ ₹3,00,000. ಕಳೆದ ವಾರ ₹4.18 ಲಕ್ಷದ ಗರಿಷ್ಠ ಮಟ್ಟ ತಲುಪಿದ್ದ ಬೆಳ್ಳಿ, ಈಗ ಬರೋಬ್ಬರಿ ₹1.18 ಲಕ್ಷದಷ್ಟು ಇಳಿಕೆಯಾಗಿದೆ.

ಬೆಲೆ ಕುಸಿತಕ್ಕೆ ಪ್ರಮುಖ 5 ಕಾರಣಗಳು

ಕೆವಿನ್ ವಾರ್ಷ್ ಮತ್ತು ಅಮೆರಿಕದ ಪ್ರಭಾವ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆವಿನ್ ವಾರ್ಷ್ ಅವರನ್ನು ಫೆಡರಲ್ ರಿಸರ್ವ್ ಮುಖ್ಯಸ್ಥರನ್ನಾಗಿ ನೇಮಿಸಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ತಂದಿದೆ. ವಾರ್ಷ್ ಅವರು ಕಠಿಣ ಆರ್ಥಿಕ ನೀತಿಗಳನ್ನು ಬೆಂಬಲಿಸುವವರು. ಇದು ಡಾಲರ್ ಮೌಲ್ಯವನ್ನು ಹೆಚ್ಚಿಸಿದ್ದು, ಚಿನ್ನದ ಮೇಲಿನ ಹೂಡಿಕೆಯನ್ನು ಜನರು ಹಿಂಪಡೆಯುವಂತೆ ಮಾಡಿದೆ.

ಬಜೆಟ್ 2026ರ ಘೋಷಣೆಗಳು

ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕದಲ್ಲಿ ಯಾವುದೇ ಕಡಿತ ಮಾಡದಿದ್ದರೂ, ಮಾರುಕಟ್ಟೆಯ ಚಂಚಲತೆಯಿಂದಾಗಿ ಬೆಲೆಗಳು ಕುಸಿದಿವೆ. ಅಲ್ಲದೆ, ಹಣಕಾಸು ಶಿಸ್ತಿನ ಬಗ್ಗೆ ಬಜೆಟ್‌ನಲ್ಲಿ ನೀಡಿದ ಒತ್ತು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದೆ.

SGB ತೆರಿಗೆ ನಿಯಮದಲ್ಲಿ ಬದಲಾವಣೆ

ಸವರನ್ ಗೋಲ್ಡ್ ಬಾಂಡ್ (SGB) ಗಳ ಮೇಲೆ ಈ ಮೊದಲು ಇದ್ದ ಬಂಡವಾಳ ಲಾಭ ತೆರಿಗೆ ವಿನಾಯಿತಿಯನ್ನು ಈಗ ಕೇವಲ ಮೂಲ ಚಂದಾದಾರರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಸೆಕೆಂಡರಿ ಮಾರ್ಕೆಟ್‌ನಲ್ಲಿ ಬಾಂಡ್ ಖರೀದಿಸುವವರಿಗೆ ಈ ಲಾಭ ಸಿಗುವುದಿಲ್ಲ ಎಂದು ಘೋಷಿಸಿರುವುದು ಚಿನ್ನದ ಬಾಂಡ್‌ಗಳ ಮೇಲಿನ ಬೇಡಿಕೆ ಕಡಿಮೆ ಮಾಡಿದೆ.

ದಾಖಲೆಯ ಲಾಭದ ಬುಕಿಂಗ್ 

ಜನವರಿ 29 ರಂದು ಚಿನ್ನ ಮತ್ತು ಬೆಳ್ಳಿ ಸಾರ್ವಕಾಲಿಕ ದಾಖಲೆ ಬರೆದಿದ್ದವು. ಬೆಲೆ ಅತಿಯಾಗಿ ಏರಿದಾಗ ಹೂಡಿಕೆದಾರರು ತಕ್ಷಣವೇ ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಮುಂದಾದರು ಇದು ಮಾರುಕಟ್ಟೆ ಕುಸಿಯಲು ಪ್ರೇರೇಪಿಸಿತು.

ಅಂತಾರಾಷ್ಟ್ರೀಯ ದರಗಳ ಕುಸಿತ

 ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $5,000 ಗಿಂತ ಕೆಳಕ್ಕೆ ಕುಸಿದಿದೆ. ಬೆಳ್ಳಿ ಬೆಲೆಯೂ ಶೇ. 30ಕ್ಕಿಂತ ಹೆಚ್ಚು ಪತನಗೊಂಡಿದ್ದು, ಇದು ಭಾರತೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net