ಗುಡ್ ಲಕ್ ವಿಜಯ್ ಎನ್ನುತ್ತಲೇ ಟಾಂಗ್​..ಡಿಎಂಕೆ vs ಟಿವಿಕೆ ಫೈಟ್ ಬಗ್ಗೆ ಪಿ. ಚಿದಂಬರಂ ಹೇಳಿದ್ದೇನು.? | Chidambaram

Chidambaram | ಕಾಂಗ್ರೆಸ್​ನ ಹಿರಿಯ ನಾಯಕ ಪಿ. ಚಿದಂಬರಂ
Chidambaram | ಕಾಂಗ್ರೆಸ್​ನ ಹಿರಿಯ ನಾಯಕ ಪಿ. ಚಿದಂಬರಂ
Published on
ಚೆನ್ನೈ: ನಟ ಟಿವಿಕೆ ವಿಜಯ್​ಗೆ ಶುಭ ಹಾರೈಸಿರುವ ಕಾಂಗ್ರೆಸ್​ನ ಹಿರಿಯ ನಾಯಕ ಪಿ. ಚಿದಂಬರಂ, ಅದಕ್ಕೆ ವ್ಯತಿರಿಕ್ತ ಎಂಬಂತೆ ಅವರ ರಾಜಕೀಯ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವೇ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.
ಎದುರಾಗಲಿರುವ ಚುನಾವಣೆಯಲ್ಲಿ ಸ್ಪರ್ಧೆ ಇರುವುದು ಟಿವಿಕೆ ಮತ್ತು ಡಿಎಂಕೆ ನಡುವೆ ಮಾತ್ರ ಎಂಬ ವಿಜಯ್ ಹೇಳಿಕೆಗೆ ಪ್ರತಿಕ್ರಿಯಿಸಿದ ಚಿದಂಬರಂ, ವಿಜಯ್‌ಗೆ ನನ್ನ ಶುಭಾಶಯಗಳು ಆದರೆ ಅವರ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ, ಇಂಡಿಯಾ ಬಣ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಮೈತ್ರಿಕೂಟದ ಬಲವು ಅದರ ಅನುಭವದಲ್ಲಿದ್ದು, ಇಂಡಿಯಾ ಮೈತ್ರಿಕೂಟವು ತುಂಬಾ ಬಲಿಷ್ಠವಾಗಿದೆ, ಹಲವಾರು ಚುನಾವಣೆಗಳನ್ನು ಎದುರಿಸಿದೆ ಮತ್ತು ಚುನಾವಣಾ ಪ್ರಚಾರಗಳನ್ನು ಹೇಗೆ ನಡೆಸಬೇಕೆಂದು ತಿಳಿದಿದೆ. ಚುನಾವಣಾ ಸ್ಪರ್ಧೆಗಳು ವೈಯಕ್ತಿಕ ಕ್ಷೇತ್ರಗಳನ್ನು ಅವಲಂಬಿಸಿದ್ದು, ಮೈತ್ರಿಕೂಟವು ಮೇಲುಗೈ ಸಾಧಿಸುತ್ತದೆ ಎಂಬ ನಂಬಿಕೆಯನ್ನು ಪುನರುಚ್ಚರಿಸಿದರು.
ಸೀಟು ಹಂಚಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಚಿದಂಬರಂ ನಿರಾಕರಿಸಿದ್ದು, ಈ ವಿಷಯದ ಕುರಿತಾಗಿ ಚರ್ಚೆ ನಡೆಸಿದ ಬಳಿಕವೇ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು. ಕಾಂಗ್ರೆಸ್ 40 ಸ್ಥಾನಗಳನ್ನು ಬಯಸಬಹುದು ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಚಿದಂಬರಂ, ಪತ್ರಕರ್ತರು ಇಂತಹ ಪ್ರಶ್ನೆಗಳನ್ನು ಎತ್ತುವುದು ವಾಡಿಕೆಯಾಗಿದೆ ಮತ್ತು ಮಾತುಕತೆಯ ಮೂಲಕ ವಿಷಯವನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net