2023ರಲ್ಲಿ ದುಬೈಯಿಂದ ಬಂದ ಮೂವರು ವಿದೇಶಿ ಪ್ರಜೆಗಳು ಪ್ಯಾಂಟ್ ಒಳಭಾಗದಲ್ಲಿ ಚಿನ್ನ ಮರೆಮಾಚಿ ಸಾಗಿಸಲು ಯತ್ನಿಸಿದ್ದ ಪ್ರಕರಣವೂ ದೊಡ್ಡ ಸುದ್ದಿಯಾಗಿತ್ತು. ಅದೇ ರೀತಿಯಲ್ಲಿ ಈ ಬಾರಿ ಕೂಡ ಚಿನ್ನವನ್ನು ಪ್ಯಾಂಟ್ ಒಳಗೆ ಅಡಗಿಸಲಾಗಿರುವುದು ಗಮನ ಸೆಳೆದಿದೆ. ಈ ಘಟನೆ ಬಳಿಕ ದೆಹಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಮತ್ತಷ್ಟು ಕಠಿಣಗೊಳಿಸಲಾಗಿದೆ. ಪ್ರಯಾಣಿಕರ ರಿಸ್ಕ್ ಪ್ರೊಫೈಲಿಂಗ್, ರಿಯಲ್ ಟೈಮ್ ಡೇಟಾ ವಿಶ್ಲೇಷಣೆ ಮತ್ತು ಹೈಟೆಕ್ ಸ್ಕ್ಯಾನಿಂಗ್ ವ್ಯವಸ್ಥೆಗಳ ಬಳಕೆ ಹೆಚ್ಚಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ,(ಏಜೆನ್ಸೀಸ್).