ಬೆಳ್ಳಿ 11,000 ರೂ. ಏರಿಕೆ! ಚಿನ್ನ? ಬಲು ದುಬಾರಿ ಆಯ್ತು ಗೋಲ್ಡ್​-ಸಿಲ್ವರ್​ ಬೆಲೆ; ಹೀಗಿದೆ ಇಂದಿನ ದರ | Gold Rates

ಚಿನ್ನ-ಬೆಳ್ಳಿ ಬೆಲೆ
ಚಿನ್ನ-ಬೆಳ್ಳಿ ಬೆಲೆ
Published on

ಪ್ರಮುಖ ಮುಖ್ಯಾಂಶಗಳು

  • ಸಂಕ್ರಾಂತಿ ಹಬ್ಬಕ್ಕೂ ಮುನ್ನ ಬೆಳ್ಳಿ ಬೆಲೆ ಇನ್ನಷ್ಟು ದುಬಾರಿ
  • ಚಿನ್ನಕ್ಕೆ ಪೈಪೋಟಿ ಕೊಡುತ್ತಿವೆ ಬೆಳ್ಳಿ ದರಗಳು
  • ಇಂದು ಒಂದೇ ದಿನ ಬೆಳ್ಳಿ ಕೆಜಿಗೆ 11,000 ರೂ. ಏರಿಕೆ
ನವದೆಹಲಿ: ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಜನರು ತಯಾರಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಚಿನ್ನ-ಬೆಳ್ಳಿಯ ಬೆಲೆಗಳು ಭಾರೀ ಅಚ್ಚರಿ ಮೂಡಿಸಿವೆ. ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟವನ್ನು ಮೀರಿ ಹೊಸ ದಾಖಲೆಯನ್ನು ನಿರ್ಮಿಸುತ್ತಿರುವ ಚಿನ್ನದ ಬೆಲೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಮಧ್ಯೆ, ಇಂದು ಒಂದೇ ದಿನ ಕೆಜಿ ಬೆಳ್ಳಿಯ ಬೆಲೆಯಲ್ಲಿ 11,000 ರೂ. ಹೆಚ್ಚಾಗಿರುವುದು ಸದ್ಯ ಗ್ರಾಹಕರನ್ನು ಕಂಗಾಲಾಗಿಸಿದೆ.
ಕಳೆದ ಎರಡು ದಿನಗಳ ಬಳಿಕ ಇಂದು ತೀವ್ರವಾಗಿ ಹೆಚ್ಚಳ ಕಂಡಿದೆ. ಈ ಏರಿಕೆಯು ಬೆಳ್ಳಿ ಬೆಲೆಯನ್ನು ಚಿನ್ನದೊಂದಿಗೆ ಪೈಪೋಟಿ ನೀಡುವಂತೆ ಮಾಡುತ್ತಿದೆ. ಈ ವರ್ಷವೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೊಸ ಸಂಚಲನ ಸೃಷ್ಟಿಸುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಇಂದು, 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆ 1,150 ರೂ. ಹೆಚ್ಚಾಗಿದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆ 11,000 ರೂ. ಜಾಸ್ತಿಯಾಗಿದೆ. ಇದರೊಂದಿಗೆ, ಬುಲಿಯನ್ ಮಾರುಕಟ್ಟೆಯಲ್ಲಿ ಕೆಜಿ ಬೆಳ್ಳಿಯ ಬೆಲೆ 2,60,000 ರೂ.ಗೆ ತಲುಪಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ

  • ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,40,460 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,28,750 ರೂ. ಆಗಿದೆ.
  • ಮುಂಬೈ, ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,40,610 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,28,900 ರೂ.ಗೆ ಬಂದು ನಿಂತಿದೆ.
  • ಇನ್ನು ಹೈದರಾಬಾದ್​ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,40,460 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,28,750 ರೂ. ಆಗಿದೆ.

ಬೆಳ್ಳಿ ಬೆಲೆ

  • ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಯ ಬೆಲೆ 2,60,000 ರೂ.ಗೆ ಮಾರಾಟವಾಗುತ್ತಿದೆ.
  • ಇನ್ನು ಹೈದರಾಬಾದ್ ಮತ್ತು ಚೆನ್ನೈನಲ್ಲಿ, ಕೆಜಿ ಬೆಳ್ಳಿಯ ಬೆಲೆ 2,75,000 ರೂ.ಗೆ ತಲುಪಿದೆ. (7,000 ರೂ. ಏರಿಕೆ)
ಗಮನಿಸಿ: ಮೇಲೆ ತಿಳಿಸಲಾದ ದರಗಳು ಬೆಳಗಿನ ಮಾರುಕಟ್ಟೆಯ ವಿವರ ಆಧರಿಸಿ. ಈ ದರಗಳು ಮಧ್ಯಾಹ್ನದ ನಂತರ ಸಾಕಷ್ಟು ಬದಲಾವಣೆಗೆ ಒಳಪಟ್ಟಿರುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net