ಆಭರಣ ಪ್ರಿಯರಿಗೆ ಬಿಗ್ ಶಾಕ್: ಕುಸಿತ ಕಂಡಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ! ಇಂದಿನ ಬೆಲೆ ಎಷ್ಟು? Gold Rate

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ಮೂರು ದಿನಗಳಿಂದ ಇಳಿಕೆಯತ್ತ ಸಾಗುವ ಮೂಲಕ ಆಭರಣ ಪ್ರಿಯರಿಗೆ ಖುಷಿ ನೀಡಿದ್ದ ಚಿನ್ನದ ದರ
  • ಇಂದು ದಿಢೀರ್​ ಏರಿಕೆ ಕಾಣುವ ಮೂಲಕ ಮತ್ತೆ ಹಳದಿ ಲೋಹ ಆಭರಣ ಪ್ರಿಯರಿಗೆ ಶಾಕ್​ ನೀಡಿದೆ
  • ಇದೀಗ ಮಾರುಕಟ್ಟೆಯಲ್ಲಿ ಮತ್ತೆ ಚಿನ್ನದ ಬೆಲೆ 10 ಗ್ರಾಂಗೆ 1.59 ಲಕ್ಷ ರೂ.ಗಿಂತಲೂ ಹೆಚ್ಚಿದೆ
Gold Rate: ಕಳೆದ ಮೂರು ದಿನಗಳಿಂದ ಇಳಿಕೆಯತ್ತ ಸಾಗುವ ಮೂಲಕ ಆಭರಣ ಪ್ರಿಯರಿಗೆ ಖುಷಿ ನೀಡಿದ್ದ ಚಿನ್ನದ ದರ, ಇಂದು ದಿಢೀರ್​ ಏರಿಕೆ ಕಾಣುವ ಮೂಲಕ ಮತ್ತೆ ಹಳದಿ ಲೋಹ ಆಭರಣ ಪ್ರಿಯರಿಗೆ ಶಾಕ್​ ನೀಡಿದೆ.
ಹೌದು, ಭಾರತದಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಏಷ್ಯನ್ ಮಾರುಕಟ್ಟೆಯಲ್ಲಿ ಮೂರು ದಿನಗಳ ಹಿಂದಷ್ಟೇ ದಾಖಲೆಯ ಗರಿಷ್ಠ ಮಟ್ಟವನ್ನು ಚಿನ್ನ ತಲುಪಿತ್ತು. ಇದಾದ ಬಳಿಕ ಕಳೆದ ಮೂರು ದಿನಗಳಿಂದ ಸುಮಾರು 11 ರಷ್ಟು ಕುಸಿತ ಕಂಡಿತ್ತು. ಆದರೆ, ಇದೀಗ ಮತ್ತೆ ಚಿನ್ನದ ಬೆಲೆ 10 ಗ್ರಾಂಗೆ 1.59 ಲಕ್ಷ ರೂ.ಗಿಂತಲೂ ಹೆಚ್ಚಿದೆ.
ಇಂದು (ಫೆ.09) MCX ಮತ್ತು ಸ್ಪಾಟ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ತನ್ನ ಬಲವಾದ ಸ್ಥಿತಿಗೆ ಮರಳಿದೆ. ಪ್ರಸ್ತುತ 24 ಕ್ಯಾರೆಟ್ ಚಿನ್ನವು 10 ಗ್ರಾಂಗೆ ಸುಮಾರು 1,56,590 ರೂ.ನಿಂದ 1,58,000 ರೂ. ವರೆಗೂ ವ್ಯಾಪಾರವಾಗುತ್ತಿದೆ. ಅನೇಕ ವರದಿಗಳ ಪ್ರಕಾರ, ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಅಂದಹಾಗೆ, ಮೂರು ದಿನಗಳ ಹಿಂದೆ ದಾಖಲೆಯ ಗರಿಷ್ಠ ಮಟ್ಟವನ್ನು ಚಿನ್ನ ತಲುಪಿತ್ತು. ಅಂದರೆ, ಜನವರಿ ಅಂತ್ಯದಲ್ಲಿ 10 ಗ್ರಾಂ ಚಿನ್ನ 1.79 ಲಕ್ಷ ರೂ.ಗೂ ಅಧಿಕ ಬೆಲೆ ಇತ್ತು. ಕಳೆದ ಮೂರು ದಿನಗಳಿಂದ ಶೇ. 11 ರಷ್ಟು ಕುಸಿತ ಕಂಡಿತ್ತು. ಈ ಬೆಲೆ ಇಳಿಕೆ ಖರೀದಿದಾರರಲ್ಲಿ ನಗು ತಂದರೂ ಇದೀಗ ಮತ್ತೊಮ್ಮೆ ಶಾಕ್​ ನೀಡಿದೆ. ಇದೀಗ ಡಿಪ್ ಖರೀದಿದಾರರು ಮರಳಿ ಸಕ್ರಿಯರಾಗಿದ್ದು, ಏಷ್ಯನ್ ಮಾರುಕಟ್ಟೆಯಲ್ಲಿ ಚಿನ್ನ 5,000 ಡಾಲರ್​ಗಿಂತಲೂ ಹೆಚ್ಚು ಏರಿಕೆಯಾಗಿದೆ.

ಬೆಲೆ ಏರಿಕೆಗೆ ಕಾರಣವೇನು?

ಜಾಗತಿಕ ಭದ್ರತಾ ಆತಂಕಗಳು, ಡಾಲರ್ ದೌರ್ಬಲ್ಯ ಮತ್ತು ಸುರಕ್ಷಿತ ಹೂಡಿಕೆಯ ಬೇಡಿಕೆಯೇ ಚಿನ್ನದ ಬೆಲೆ ಹೆಚ್ಚಾಗಲು ಕಾರಣವಾಗಿದೆ. ಅನೇಕ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಿದ್ದಾರೆ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತಿದ್ದು, ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ.

ಇಂದಿನ ಪ್ರಮುಖ ಬೆಲೆಗಳು (10 ಗ್ರಾಂ 24 ಕ್ಯಾರೆಟ್​ ಚಿನ್ನ) 

*ಮುಂಬೈ/ಕೋಲ್ಕತ್ತಾ/ಬೆಂಗಳೂರು: 1,56,590 ರೂ. (ಪ್ರತಿ ಗ್ರಾಂಗೆ 15 ಸಾವಿರಕ್ಕೂ ಅಧಿಕ)
* ದೆಹಲಿ: 1,56,740 ರೂಪಾಯಿ
* ಚೆನ್ನೈ: 1,57,300 ರೂಪಾಯಿ

ಬೆಳ್ಳಿ ಬೆಲೆಯಲ್ಲೂ ಏರಿಕೆ

ಕೇವಲ ಚಿನ್ನ ಮಾತ್ರವಲ್ಲದೆ, ಬೆಳ್ಳಿಯ ಬೆಲೆಯಲ್ಲೂ ಇಂದು (ಫೆ. 9) ಗಮನಾರ್ಹ ಏರಿಕೆ ಕಂಡಿದೆ. MCX ಮತ್ತು ಸ್ಪಾಟ್ ಮಾರುಕಟ್ಟೆಯಲ್ಲಿ ಬೆಳ್ಳಿ ಕೆಜಿಗೆ 2.85 ಲಕ್ಷದಿಂದ 3 ಲಕ್ಷ ರೂ. ನಡುವೆ ವ್ಯಾಪಾರವಾಗುತ್ತಿದೆ. ಕೆಲವು ಮೂಲಗಳ ಪ್ರಕಾರ, ರಿಟೇಲ್ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ 3 ಲಕ್ಷ ರೂ. ತಲುಪಿದೆ. ಇದು ಇತ್ತೀಚಿನ ದಿನಗಳಲ್ಲಿ 12,000 ರೂ.ಗೂ ಅಧಿಕ ಏರಿಕೆಯನ್ನು ತೋರಿಸುತ್ತದೆ.

ಇಂದಿನ ಪ್ರಮುಖ ಬೆಳ್ಳಿ ಬೆಲೆಗಳು ( ಒಂದು ಕೆಜಿಗೆ)

* ಮುಂಬೈ/ದೆಹಲಿ/ಕೋಲ್ಕತ/ಬೆಂಗಳೂರು/ಚೆನ್ನೈ: 2,84,900 ರೂ.ನಿಂದ ರಿಂದ 3,00,000 ರೂಪಾಯಿ 
* ಪ್ರತಿ ಗ್ರಾಂ: 285 ರಿಂದ 300 ರೂಪಾಯಿ
* ಪ್ರತಿ 10 ಗ್ರಾಂ: 2,849 ರೂ.ನಿಂದ 3,000 ರೂಪಾಯಿ
* ಪ್ರತಿ 100 ಗ್ರಾಂ: 28,490 ರೂ.ನಿಂದ 30,000 ರೂಪಾಯಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net